ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಮೆರಗು ತಂದಿದ್ದ ಅಥ್ಲೀಟ್ ನೀರಜ್ ಚೋಪ್ರಾ ಇತ್ತೀಚೆಗೆ ಮೂಲತಃ ಕರ್ನಾಟಕದವರಾದ ಕೋಚ್ ಕಾಶೀನಾಥ್ ಅವರ ಮನೆಗೆ ಭೇಟಿ ನೀಡಿದ್ದರು. ಒಲಿಂಪಿಕ್ಸ್ ಬಂಗಾರ ಗೆದ್ದು ಭಾರತೀಯರ ಪಾಲಿಗೆ ಹೀರೋ ಅನ್ನಿಸಿದ್ದ ಅಥ್ಲೀಟ್ ಒಬ್ಬ ಯಾರೋ ಒಬ್ಬರ ಮನೆಗೆ ಭೇಟಿ ನೀಡುತ್ತಾರೆಂದರೆ, ಅದರಲ್ಲೂ ಚೋಪ್ರಾರಂಥವರು ಕನ್ನಡಿಗರೊಬ್ಬರನ್ನು ಭೇಟಿಯಾಗಿದ್ದರೆಂದರೆ ಅದರಲ್ಲೇನೋ ವಿಶೇಷತೆ ಇದ್ದೇ ಇರತ್ತೆ.

ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!

ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ, ಕೋಚ್ ಕಾಶೀನಾಥ್ ಮನೆಗೆ ಭೇಟಿ ನೀಡಿದ್ದು, ಚೋಪ್ರಾಗೆ ಕಾಶೀನಾಥ್ ಹೆಸರಿನ ಯಾರೂ ಕೋಚಿಂಗ್‌ ನೀಡಿಲ್ಲ ಎಂದು ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಸೃಷ್ಠಿಸಿದ್ದ ವಿವಾದ ಈ ಎಲ್ಲದರ ಬಗ್ಗೆ ಸ್ವತಃ ಕಾಶೀನಾಥ್ ಮೈಖೇಲ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಸಂದರ್ಶನದ ವೇಳೆ ಸಿಕ್ಕ ಕುತೂಹಲಕಾರಿ ಮಾಹಿತಿ ಇಲ್ಲಿವೆ.

ಕಾಶೀನಾಥ್ ಮನೆಗೆ ನೀರಜ್ ಚೋಪ್ರಾ ಭೇಟಿ ನೀಡಿದ್ದೇಕೆ?

ಕಾಶೀನಾಥ್ ಮನೆಗೆ ನೀರಜ್ ಚೋಪ್ರಾ ಭೇಟಿ ನೀಡಿದ್ದೇಕೆ?

ಆಗಸ್ಟ್ 24ರ ಮಂಗಳವಾರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ವಿಜೇತ ನೀರಜ್ ಚೋಪ್ರಾ ಅವರು ಮಹಾರಾಷ್ಟ್ರದ ಪುಣೆಯ ಕೋರೇಗಾಂವ್‌ನಲ್ಲಿರುವ ಕಾಶೀನಾಥ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಜೂನಿಯರ್ ಕಮೀಶನರ್ ಆಫೀಸರ್ ಆಗಿರುವ 23ರ ಹರೆಯದ ನೀರಜ್ ಚೋಪ್ರಾ ಪುಣೆಗೆ ಭೇಟಿ ನೀಡಿದ್ದಾಗ ತನ್ನ ಕೋಚ್ ಕಾಶೀನಾಥ್ ಜೊತೆಗೂ ಮಾತನಾಡಿದ್ದರು. ಆ ವೇಳೆ ಮನೆಗೂ ಒಮ್ಮೆ ಬಂದು ಹೋಗುತ್ತೇನೆ ಎಂದು ಕಾಶೀ ಜೊತೆಗೆ ಚೋಪ್ರಾ ಹೇಳಿದರಂತೆ. ಹೀಗೆ ಅಚಾನಕ್ ಮನೆಗೆ ಭೇಟಿ ನೀಡಿದ ನೀರಜ್ ಅವರನ್ನು ಕಾಶೀನಾಥ್ ಮತ್ತು ಚೈತ್ರಾ ದಂಪತಿ ಆತ್ಮೀಯವಾಗಿ ಬರ ಮಾಡಿಕೊಂಡಿತು. ಮುಂದಿನ ಕ್ರೀಡಾಕೂಟಕ್ಕೆ ತಯಾರಿ ಮತ್ತು ಒಲಿಂಪಿಕ್ಸ್‌ ವೇಳೆಯ ಕೆಲ ಅನುಭವಗಳನ್ನು ಚೋಪ್ರಾ ಅವರು ಕಾಶೀನಾತ್ ಜೊತೆ ಹಂಚಿಕೊಂಡರು. ಅಲ್ಲದೆ, ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಸೃಷ್ಠಿಸಿದ್ದ ವಿವಾದದ ಬಗ್ಗೆಯೂ ಕಾಶೀನಾಥ್‌ಗೆ ಚೋಪ್ರಾ ಸಮಾಧಾನ ಹೇಳಿದ್ದಾಗಿ ಸ್ವತಃ ಕಾಶೀನಾಥ್ ತಿಳಿಸಿದ್ದಾರೆ (ಚಿತ್ರದಲ್ಲಿ ನೀರಜ್ ಅವರನ್ನು ಆರತಿ ಬೆಳಗಿ ಸ್ವಾಗತಿಸುತ್ತಿರುವ ಕಾಶಿ ಪತ್ನಿ ಚೈತ್ರಾ).

ಸುಮರಿವಾಲ್ಲಾ ಸೃಷ್ಠಿಸಿದ್ದ ವಿವಾದವೇನು?

ಸುಮರಿವಾಲ್ಲಾ ಸೃಷ್ಠಿಸಿದ್ದ ವಿವಾದವೇನು?

ಒಲಿಂಪಿಕ್ಸ್ ಬಂಗಾರ ಗೆದ್ದ ಭಾರತದ ಅಥ್ಲೀಟ್‌ಗೆ ಕನ್ನಡಿಗ ಕೋಚ್ ಎಂಬ ಸಂಗತಿ ಹೊರಬಿದ್ದು ಕನ್ನಡಿಗರು ಬೀಗುವಂತೆ ಮಾಡಿತ್ತು. ಆದರೆ ಚೋಪ್ರಾಗೆ ಕಾಶಿನಾಥ್ ನಾಯ್ಕ್ ಅವರು ಕೋಚಿಂಗ್‌ ನೀಡೇಯಿಲ್ಲ ಎಂಬ ಮಾತು ಕೂಡ ಅದೇ ವೇಳೆ ಕೇಳಿಬಂದಿತ್ತು. ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಅವರು, "ಕಾಶಿನಾಥ್ ನಾಯ್ಕ್ ಯಾರೋ ಗೊತ್ತಿಲ್ಲ. ಆ ಹೆಸರಿನ ಯಾರೂ ಚೋಪ್ರಾಗೆ ಕೋಚಿಂಗ್ ನೀಡಿಲ್ಲ. ಉವೆ ಹಾನ್‌ ನೇತೃತ್ವದಲ್ಲಿ ಕ್ಲಾಸ್‌ ಬಾರ್ಟೊನಿಟ್ಜ್, ಗ್ಯಾರಿ ಕಲ್ವರ್ಟ್‌, ವರ್ನರ್‌ ಡೇನಿಯಲ್ಸ್‌ ಎಂಬ ಮೂವರು ವಿದೇಶಿ ತರಬೇತುದಾರರು ಚೋಪ್ರಾ ಅವರಿಗೆ ತರಬೇತಿ ನೀಡಿದ್ದಾರೆ. ಅದಕ್ಕೆ ಮೊದಲು ನಸೀಮ್‌ ಅಹ್ಮದ್‌ ಎಂಬುವರು ಕೋಚ್‌ ಆಗಿದ್ದರು. ಶ್ರಮ ವಹಿಸಿ ಪದಕ ಗೆದ್ದಿದ್ದು ನೀರಜ್ ಚೋಪ್ರಾ, ತರಬೇತಿ ನೀಡಿದ್ದು ಬೇರೆಯ ತರಬೇತುದಾರರು. ಒಬ್ಬರ ಶ್ರಮ ಬೇರೊಬ್ಬರಿಗೆ ಲಾಭ ತಂದುಕೊಡಬಾರದು," ಎಂದಿದ್ದರು. ಚೋಪ್ರಾ ಸಾಧನೆಗೆ ನೆರವಾಗಿದ್ದಕ್ಕೆ ಕರ್ನಾಟಕ ಸರ್ಕಾರದಿಂದ ಕಾಶೀನಾಥ್‌ಗೆ 10 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ, ಕಾಶೀನಾಥ್ ಅವರು ಚೋಪ್ರಾಗೆ ಕೋಚಿಂಗ್ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕಾಶೀನಾಥ್ ಅವರು ಸುಮರಿವಾಲ್ಲಾ ಮಾತನ್ನು ತಳ್ಳಿ ಹಾಕಿದ್ದಾರೆ. ಭಾರತೀಯ ಕೋಚ್‌ಗಳಿಗಿಂತ ವಿದೇಶಿ ಕೋಚ್‌ಗಳಿಗೆ ಹೆಚ್ಚು ಬೆಂಬಲ ಸಿಗಲಿ, ಅವರೇ ಮಿಂಚಲಿ ಎನ್ನುವ ಕಾರಣಕ್ಕೆ ಹೊಟ್ಟೆಕಿಚ್ಚಿನಿಂದ ಸುಮರಿವಾಲ್ಲಾ ಹೀಗೆ ಹೇಳಿರಬಹುದು ಎಂದು ಕಾಶೀನಾಥ್ ಹೇಳಿದ್ದಾರೆ (ಚಿತ್ರದಲ್ಲಿ ಕೋಚ್ ಕ್ಲಾಸ್‌ ಬಾರ್ಟೊನಿಟ್ಜ್ ಜೊತೆಗೆ ಕಾಶಿ).

ವರ್ಲ್ಡ್ ಚಾಂಪಿಯನ್‌ಶಿಪ್‌ ವೇಳೆ ಚೋಪ್ರಾಗೆ ಸಹ ಕೋಚ್ ಆಗಿದ್ದ ಕಾಶಿ

ವರ್ಲ್ಡ್ ಚಾಂಪಿಯನ್‌ಶಿಪ್‌ ವೇಳೆ ಚೋಪ್ರಾಗೆ ಸಹ ಕೋಚ್ ಆಗಿದ್ದ ಕಾಶಿ

ಕಾಶೀನಾಥ್ ನಾಯ್ಕ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಜಾವೆಲಿನ್ ಥ್ರೋವರ್. ನವದೆಹಲಿಯಲ್ಲಿ 2010ರಂದು ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ವೇಳೆ ಕಾಶೀನಾಥ್ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಜಯಿಸಿದ್ದರು. ಕಾಶಿ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದು ಒಂದು ವರ್ಷದ ಬಳಿಕ ಆಗ 14 ವರ್ಷ ಪ್ರಾಯದವರಾಗಿದ್ದ ನೀರಜ್ ಚೋಪ್ರಾ ಜೈವೀರ್ ಚೌಧರಿ ಜೊತೆಗೆ ಜಾವೆಲಿನ್ ಎಸೆತದ ಅಭ್ಯಾಸ ಆರಂಭಿಸಿದ್ದರು. ಅಂದ್ಹಾಗೆ ಆವತ್ತು ಕಾಶಿನಾಥ್‌ಗೆ ಸಿಕ್ಕ ಕಂಚಿನ ಪದಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಜಾವೆಲಿನ್‌ ಎಸೆತದಲ್ಲಿ ಸಿಕ್ಕ ಮೊದಲ ಪದಕವಾಗಿತ್ತು. ಅಲ್ಲದೆ, 1982ರ ಏಷ್ಯನ್ ಗೇಮ್ಸ್‌ ಪದಕದ ಬಳಿಕ ಭಾರತಕ್ಕೆ ಸಿಕ್ಕ ಚೊಚ್ಚಲ ಪದಕವಾಗಿತ್ತು. ಅಥ್ಲೀಟ್‌ ಆಗಿ ವೃತ್ತಿ ಬದುಕು ಮುಗಿಸಿದ ಬಳಿಕ ಕಾಶಿನಾಥ್ ಕೋಚಿಂಗ್‌ ವೃತ್ತಿಗೆ ಬಂದಿದ್ದರು. 2016ಲ್ಲಿ ಪೋಲ್ಯಾಂಡ್‌ನಲ್ಲಿ ನಡೆದಿದ್ದ ಅಂಡರ್-20 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬಂಗಾರದ ಪದಕ ಗೆದ್ದಾಗ ಗ್ಯಾರಿ ಕ್ಯಾಲ್ವರ್ಟ್ ಜೊತೆಗೆ ಸಹ ಕೋಚ್ ಆಗಿ ಕಾಶಿನಾಥ್ ಅವರೂ ನೀರಜ್‌ಗೆ ಕೋಚಿಂಗ್ ನೀಡಿದ್ದರು. ಈಗ ಕಾಶಿನಾಥ್ ಅವರು ಮಹಾರಾಷ್ಟ್ರ ಪುಣೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುಣೆಗೆ ಚೋಪ್ರಾ ಬಂದರೆ ಕೋಚ್ ಆಗಿ ಅವರಿಗೆ ಬೇಕಾದ ಸಹಾಯ, ಮಾರ್ಗದರ್ಶನ ಈಗಲೂ ಮಾಡುತ್ತಿರುವುದಾಗಿ ಕಾಶೀನಾಥ್ ವಿವರಿಸಿದ್ದಾರೆ.

ಚೋಪ್ರಾಗೆ ಕಾಶಿ ಕೋಚ್ ಅನ್ನೋದಕ್ಕೆ ಪುರಾವೆಯೇನು?

ಚೋಪ್ರಾಗೆ ಕಾಶಿ ಕೋಚ್ ಅನ್ನೋದಕ್ಕೆ ಪುರಾವೆಯೇನು?

ನೀರಜ್ ಚೋಪ್ರಾಗೆ ಕಾಶೀನಾಥ್ ನಿಜಕ್ಕೂ ಕೋಚ್ ಆಗಿದ್ದರ? ಟೋಕಿಯೋದಲ್ಲಿ ಚೋಪ್ರಾ ಚಿನ್ನ ಗೆದ್ದಿದ್ದರಲ್ಲಿ ಕಾಶಿ ಶ್ರಮ ಚೂರಾದರೂ ಇದೆಯಾ? ಎಂಬ ಪ್ರಶ್ನೆಗಳ ಬಗ್ಗೆ ಹೆಚ್ಚಿನವರಿಗೆ ಗೊಂದಲವಿಲ್ಲ. ಯಾಕೆಂದರೆ ಚೋಪ್ರಾ ಪಾಲಿಗೆ ಕಾಶಿ ಅಷ್ಟು ಪ್ರಮುಖ ವ್ಯಕ್ತಿ ಅನ್ನೋ ಕಾರಣದಿಂದಲೇ ಚೋಪ್ರಾ ಇತ್ತೀಚೆಗೆ ಕಾಶೀನಾಥ್ ಮನೆಗೆ ಭೇಟಿ ನೀಡಿದ್ದು. ಅದರಲ್ಲೂ ಚೋಪ್ರಾ ಮೊದಲು ಬಹಳ ಫ್ರೀಯಾಗಿದ್ದರು. ಆದರೆ ಈಗ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿರುವುದರಿಂದ ಸಹಜವಾಗೇ ಜನಪ್ರಿಯತೆ ಹೆಚ್ಚಿದೆ. ಮೊದಲಿಗಿಂತ ಚೋಪ್ರಾ ಈಗ ಹೆಚ್ಚು ಬ್ಯುಸಿಯಾಗಿದ್ದಾರೆ. ಹಾಗಿದ್ದೂ ಕಾಶಿ ಮನೆಗೆ ನೀರಜ್ ಬಂದಿದ್ದಾರೆಂದರೆ ಅದು ನೀರಜ್‌ಗೆ ಕಾಶಿ ಅವರ ಮೇಲಿರುವ ಪ್ರೀತಿ, ಆತ್ಮೀಯತೆ ಮತ್ತು ಗೌರವ ಈ ಎಲ್ಲದರ ಪ್ರತೀಕ. ಇಷ್ಟಾಗಿಯೂ ಕಾಶಿ ಅವರು ತಾನು ಚೋಪ್ರಾಗೆ ಕೋಚಿಂಗ್‌ ನೀಡಿರುವುದಕ್ಕೆ ಕೆಲವು ಪುರಾವೆಗಳನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ.

ನೀರಜ್‌ಗೆ ಕಾಶಿ ಕೋಚ್ ಆಗಿದ್ದರು ಅನ್ನೋದಕ್ಕೆ ಪುರಾವೆಗಳಿವು

ನೀರಜ್‌ಗೆ ಕಾಶಿ ಕೋಚ್ ಆಗಿದ್ದರು ಅನ್ನೋದಕ್ಕೆ ಪುರಾವೆಗಳಿವು

ನೀರಜ್‌ ಚೋಪ್ರಾಗೆ ಕಾಶೀನಾಥ್ ನಾಯ್ಕ್ ಕೋಚ್ ಆಗಿದ್ದರು ಅನ್ನೋದಕ್ಕೆ ಬಹುಶಃ ಪುರಾವೆಗಳ ಅಗತ್ಯವಿಲ್ಲ. ಯಾಕೆಂದರೆ ಒಬ್ಬ ಅಂತಾರಾಷ್ಟ್ರೀಯ ಪದಕ ವಿಜೇತ ಅಥ್ಲೀಟ್ ಹೀಗೆ ಸುಖಾ ಸುಮ್ಮನೆ ಹೇಳಲಾರ. ಆದರೂ ಅನುಮಾನಿಸುವವರಿಗೆ ಕಾಶೀನಾಥ್, ತಾನು ನೀರಜ್‌ಗೆ ಅನೇಕ ಸಾರಿ ಕೋಚ್ ಆಗಿ ಪ್ರಮುಖ ಕ್ರೀಡಾಕೂಟಗಳಲ್ಲಿ ಜೊತೆಗಿದ್ದೆ ಅನ್ನೋದಕ್ಕೆ ಪುರಾವೆಗಳನ್ನು ಮೈಖೇಲ್ ಕನ್ನಡಕ್ಕೆ ನೀಡಿದ್ದಾರೆ. ಈ ಮೊದಲು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ನೀರಜ್ ಬಂಗಾರ ಗೆದ್ದಾಗ ಅನೇಕ ಪತ್ರಿಕೆಗಳಲ್ಲಿ ಕೋಚ್ ಕಾಶೀನಾಥ್ ಬಗ್ಗೆ ಉಲ್ಲೇಖವಿತ್ತು. ನೀರಜ್ ಕೂಡ ಆಗ ಪದಕ ಗೆದ್ದ ಬಳಿಕ ಕಾಶಿಗೆ ಧನ್ಯವಾದಗಳನ್ನು ತಿಳಿಸಿದ್ದಾಗಿ ಪತ್ರಿಕಾ ವರದಿಗಳಿವೆ. ಇನ್ನು ನೀರಜ್ ಚೋಪ್ರಾ ಮತ್ತು ಚೋಪ್ರಾ ಅವರ ಈಗಿನ ಕೋಚ್ ಕ್ಲಾಸ್‌ ಬಾರ್ಟೊನಿಟ್ಜ್ ಜೊತೆಗೆ ಕಾಶಿ ಅವರು ಇರುವ ಅನೇಕ ಫೋಟೋಗಳೂ ಇವೆ. ಅಷ್ಟೇ ಅಲ್ಲ, ರಿಯೋ ಒಲಿಂಪಿಕ್ಸ್‌ಗೆ ಮುನ್ನ ನೀರಜ್ ಚೋಪ್ರಾ ಅವರು ಪೋಲ್ಯಾಂಡ್‌ಗೆ ಅಭ್ಯಾಸಕ್ಕಾಗಿ ತೆರಳಿದ್ದಾಗ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ನೀಡಿದ್ದ ಅಥ್ಲೀಟ್‌ಗಳು ಮತ್ತು ಕೋಚ್‌ಗಳ ಪಟ್ಟಿಯಲ್ಲಿ ಅಥ್ಲೀಟ್‌ಗಳ ಸಾಲಿನಲ್ಲಿ ನೀರಜ್ ಚೋಪ್ರಾ, ಕೋಚ್‌ಗಳ ಸಾಲಿನಲ್ಲಿ ಕಾಶೀನಾಥ್ ಮತ್ತು ಕ್ಲಾಸ್‌ ಬಾರ್ಟೊನಿಟ್ಜ್ ಹೆಸರುಗಳಿವೆ. ಪ್ರಮುಖ ಕ್ರೀಡಾಕೂಟಗಳಿಗೆ ವೇಳೆ ಕಾಶಿ ತೆರಳಿದ್ದಾಗಿನ ಗುರುತಿನ ಪತ್ರ ಕೂಡ ಮೈಖೇಲ್ ಕನ್ನಡಕ್ಕೆ ದೊರೆತಿವೆ. ಚೋಪ್ರಾಗೆ ಕಾಶೀನಾಥ್ ಕೋಚಿಂಗ್ ನೀಡಿದ್ದಾರೆ ಅನ್ನೋದಕ್ಕೆ ಇವಿಷ್ಟು ಪುರಾವೆಗಳು ಎಷ್ಟೋ ಸಾಕನ್ನಿಸುತ್ತವೆ.

ಕಾಶೀನಾಥ್ ಅವರ ವೈಯಕ್ತಿಕ ಸಾಧನೆಗಳು

ಕಾಶೀನಾಥ್ ಅವರ ವೈಯಕ್ತಿಕ ಸಾಧನೆಗಳು

* 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ

* ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2010

* ಏಷ್ಯನ್ ಆಲ್ ಸ್ಟಾರ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ, 2020

* ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಟದ ಜಾವೆಲಿನ್‌ನಲ್ಲಿ ಬೆಳ್ಳಿ, 2008

* ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ, 2008

* 14 ಬಾರಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ

* ರಾಷ್ಟ್ರೀಯ ಮಟ್ಟದಲ್ಲಿ 5 ಬಾರಿ ಬೆಳ್ಳಿ

* 2012ರಲ್ಲಿ ಏಕಲವ್ಯ ಪ್ರಶಸ್ತಿ

* 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕೋಚ್ ಆಗಿ ಕಾಶೀನಾಥ್ ಸಾಧನೆಗಳು

ಕೋಚ್ ಆಗಿ ಕಾಶೀನಾಥ್ ಸಾಧನೆಗಳು

1. ಸಮರ್ ಜೀತ್ ಸಿಂಗ್ 2013 ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ.

2. ಮುಖೇಶ್ ಕುಮಾರಿ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ 2013.

3. ರಾಜೇಶ್ ಕುಮಾರ್ ಬಿಂಧ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಫೈನಲಿಸ್ಟ್ .

4. ಅಣ್ಣು ರಾಣಿ ಏಷ್ಯನ್ ಗೇಮ್ಸ್‌, ಏಷ್ಯನ್ ಚಾಂಪಿಯನ್‌ಶಿಪ್ ಪದಕ, ವಿಶ್ವ ಚಾಂಪಿಯನ್‌ಶಿಪ್ ನಲ್ಲಿ 2013 ರಿಂದ 2019 ಭಾಗವಹಿಸಿದ್ದರು.

5. ದೇವಿಂದರ್ ಸಿಂಗ್ ಏಷ್ಯನ್ ಚಾಂಪಿಯನ್‌ಶಿಪ್ ಕಂಚು, ವಿಶ್ವ ಚಾಂಪಿಯನ್‌ಶಿಪ್ ಫೈನಲಿಸ್ಟ್ 84.44 ಮೀ. ಸಾಧನೆ, 2013 ರಿಂದ 2018ರವರೆಗೆ

6. ನೀರಜ್ ಚೋಪ್ರಾ ದಕ್ಷಿಣ ಏಷ್ಯನ್ ಗೇಮ್ಸ್ ಚಿನ್ನ 2016, ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಚಿನ್ನ 86.48 ಮಿ., ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ 2017, 2015 ರಿಂದ 2017 ಕೋಚಿಂಗ್.

7. ಶಿವಪಾಲ್ ಸಿಂಗ್ ಏಷ್ಯನ್ ಗೇಮ್ಸ್ 2018, ಏಷ್ಯನ್ ಚಾಂಪಿಯನ್ಶಿಪ್ ಪದಕ 2019, 2016 ರಿಂದ 2019 ಮತ್ತು 2021 ಒಲಿಂಪಿಕ್ಸ್ ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು .

8. ರಶ್ಮಿ, ಕರಿಷ್ಮಾ, ಮನು, ಪ್ರತಾಪ್ - ಕರ್ನಾಟಕದ ಪ್ರತಿಭೆಗಳಿಗೆ ಕೋಚಿಂಗ್ .

9. ರಾಜೇಂದರ್, ಅನಿಲ್, ರೋಹಿತ್, ಸುದಾಮ ಇವರಿಗೆ ರಾಷ್ಟ್ರೀಯ ಮಟ್ಟದ ಪದಕ.

10. ಸದ್ಯ ಮಂಗಳೂರಿನ ಮೂಡಬಿದಿರೆಯ ಮನು ಶೆಟ್ಟಿ ಅವರಿಗೆ ಹೆಚ್ಚು ನಿಗಾವಹಿಸಿ ಕಾಶಿ ತರಬೇತಿ ನೀಡುತ್ತಿದ್ದಾರೆ. ನಾಳೆ ಕಾಶಿ ಅವರ ಮತ್ತೊಬ್ಬ ಶಿಷ್ಯ ವಿಶ್ವಮಟ್ಟದಲ್ಲಿ ಮಿಂಚಿದರೂ ಅಚ್ಚರಿಯಿಲ್ಲ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, August 25, 2021, 18:01 [IST]
Other articles published on Aug 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X