ರಾಜೀವ್ ಗಾಂಧಿ ಖೇಲ್ ರತ್ನ ಇನ್ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ'!

ನವದೆಹಲಿ: ಭಾರತೀಯ ಅಥ್ಲೀಟ್‌ಗಳ ಕ್ರೀಡಾ ಸಾಧನೆಗಾಗಿ ನೀಡಲಾಗುತ್ತಿದ್ದ ಅತ್ಯುನ್ನತ್ತ ರಾಷ್ಟ್ರೀಯ ಪುರಸ್ಕಾರಗಳಲ್ಲಿ ಒಂದಾಗಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಿಸಲಾಗಿದೆ. ಇನ್ಮುಂದೆ ಈ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತದೆ.

ಟೋಕಿಯೋ ಒಲಿಂಪಿಕ್ಸ್: ರಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶಟೋಕಿಯೋ ಒಲಿಂಪಿಕ್ಸ್: ರಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶ

ಪ್ರಶಸ್ತಿಯ ಹೆಸರು ಬದಲಾಯಿಸುವುದಾಗಿ ಈ ಮೊದಲೇ ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ ಈಗ ಪ್ರಶಸ್ತಿಯ ಹೆಸರನ್ನು ಬದಲಾಯಿಸಲಾಗಿದೆ. ಭಾರತದ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಹೆಸರನ್ನು ಪ್ರಶಸ್ತಿಗೆ ಇಡಲಾಗಿದೆ. ಅಂದ್ಹಾಗೆ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ವಿಲೀನಗೊಳಿಸಬೇಕೆಂದೂ ಕೇಂದ್ರ ಸರ್ಕಾರ ಈ ಮೊದಲು ಹುನ್ನಾರ ನಡೆಸಿತ್ತು.

ಭಾರತದ ಹಾಕಿ ಇತಿಹಾಸದಲ್ಲೇ ಧ್ಯಾನ್ ಚಂದ್ ದೊಡ್ಡ ಹೆಸರು. ಧ್ಯಾನ್ ಚಂದ್ ಆಡುತ್ತಿದ್ದ ದಿನಗಳಲ್ಲಿ ಭಾರತಕ್ಕೆ ಪುರುಷರ ಹಾಕಿಯಲ್ಲಿ ಮೂರು ಬಾರಿ ಚಿನ್ನದ ಪದಕ ಲಭಿಸಿತ್ತು. 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದಿತ್ತು. ಆ ದಿನಗಳಲ್ಲಿ ಹಾಕಿಯಲ್ಲಿ ಭಾರತಷ್ಟು ಬಲಿಷ್ಠ ತಂಡ ಯಾವುದೂ ಇರಲಿಲ್ಲ.

ಒಲಿಂಪಿಕ್ಸ್: ಸೆಮಿಫೈನಲ್‌ನಲ್ಲಿ ಭಜರಂಗ್ ಪೂನಿಯಾಗೆ ಸೋಲು, ಕಂಚಿನ ಕನಸು ಜೀವಂತಒಲಿಂಪಿಕ್ಸ್: ಸೆಮಿಫೈನಲ್‌ನಲ್ಲಿ ಭಜರಂಗ್ ಪೂನಿಯಾಗೆ ಸೋಲು, ಕಂಚಿನ ಕನಸು ಜೀವಂತ

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪರುಷರ ಹಾಕಿ ತಂಡ ಐತಿಹಾಸಿಕ ಕಂಚಿನ ಪದಕ ಜಯಿಸಿದೆ. ಸುಮಾರು 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಸಿಗುತ್ತಿರುವ ಚೊಚ್ಚಲ ಪದಕವಿದು. ಈ ಪದಕ ಸಿಕ್ಕ ಬೆನ್ನಲ್ಲೇ ರಾಷ್ಟ್ರೀಯ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನದ ಹೆಸರನ್ನು ಬದಲಾಯಿಸಿ ಧ್ಯಾನ್ ಚಂದ್ ಹೆಸರು ಇಡಲಾಗಿದೆ.

ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನಾ ವಿಲೀನಕ್ಕೆ ಒತ್ತಾಯ
ಅಂದ್ಹಾಗೆ ಈ ಹಿಂದೆ, ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ವಿಲೀನಗೊಳಿಸಲು ಗೃಹ ಸಚಿವಾಲಯ ಕ್ರೀಡಾ ಸಚಿವಾಲಯವನ್ನು ಒತ್ತಾಯಿಸಿತ್ತು ಎರಡು ಪ್ರಶಸ್ತಿಗಳನ್ನು ಒಂದೇ ಪ್ರಶಸ್ತಿಯಾಗಿಸಲು ಗೃಹಸಚಿವಾಲಯ, ಕ್ರೀಡಾ ಸಚಿವಾಲಯಕ್ಕೆ ಸೂಚಿಸಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕಳೆದ ಜುಲೈ ಮತ್ತು ಸೆಪ್ಟೆಂಬರ್ ನಲ್ಲಿ ಗೃಹ ಸಚಿವಾಲಯ, ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ಅತ್ಯುನ್ನತ ಪ್ರಶಸ್ತಿಗಳನ್ನು ವಿಲೀನಗೊಳಿಸಲು ಒತ್ತಾಯಿಸಿತ್ತು. ಇದರ ಜೊತೆಗೆ ದ್ರೋಣಾಚಾರ್ಯ ಮತ್ತು ಧ್ಯಾನ್ ಚಂದ್ ಪ್ರಶಸ್ತಿಗಳ ಸಂಖ್ಯೆ ಹೆಚ್ಚಿಸುವಂತೆಯೂ ಗೃಹ ಸಚಿವಾಲಯ ಸೂಚಿಸಿತ್ತು ಎಂದು ತಿಳಿದು ಬಂದಿದೆ.

ಟೋಕಿಯೋ ಒಲಿಂಪಿಕ್ಸ್: ದ್ವಿತೀಯ ಸ್ಥಾನದಲ್ಲಿ ಕನ್ನಡತಿ ಗಾಲ್ಫರ್ ಅದಿತಿ ಅಶೋಕ್‌ಟೋಕಿಯೋ ಒಲಿಂಪಿಕ್ಸ್: ದ್ವಿತೀಯ ಸ್ಥಾನದಲ್ಲಿ ಕನ್ನಡತಿ ಗಾಲ್ಫರ್ ಅದಿತಿ ಅಶೋಕ್‌

ಪ್ರತಿಭಾತಂತರಿಗೆ ಪ್ರೋತ್ಸಾಹ ಕಡಿಯಾದಂತೆಯೇ
'ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳ ಎರಡು ವಿಭಾಗಗಳನ್ನು ಹೊಂದಿರುವ ಕ್ರೀಡಾಪಟುಗಳಿಗೆ ಒಂದೇ ರಾಷ್ಟ್ರೀಯ ಪ್ರಶಸ್ತಿಯನ್ನು ರೂಪಿಸಬೇಕು. ವರ್ಷಗಳಲ್ಲಿ ನೀಡಲಾದ ಪ್ರಶಸ್ತಿಗಳು ಮಾರ್ಗಸೂಚಿಗಳಲ್ಲಿ ಸೂಚಿಸಲಾದ ಸಂಖ್ಯೆಗಿಂತ ಹೆಚ್ಚಿನದಾಗಿದೆ,' ಎಂದು ಗೃಹ ಸಚಿವಾಲಯದ ಪತ್ರದಲ್ಲಿ ಬರೆಯಲಾಗಿತ್ತು ಎಂದು ಹೇಳಲಾಗಿದೆ. ಪ್ರಶಸ್ತಿಗಳನ್ನು ಹೀಗೆ ವಿಲೀನಗೊಳಿಸುವುದೆಂದರೆ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕಡಿಮೆಗೊಳಿಸಿದಂತೆಯೇ ಸಮ.

ಭಾರತಕ್ಕೆ ಎರಡು ಬೆಳ್ಳಿ, ಮೂರು ಕಂಚಿನ ಪದಕಗಳು
ಈ ಬಾರಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಖಾತೆಯಲ್ಲಿ ಈವರೆಗೆ ಒಟ್ಟು ಐದು ಪದಕಗಳು ಸೇರಿಕೊಂಡಿವೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಬರುತ್ತಿರುವುದು ಇದೇ ಮೊದಲಸಾರಿ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ, ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡನೇ ಪದಕವಾಗಿ ಕಂಚು ಗೆದ್ದಿದ್ದರು. ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಕೂಡ ಭಾರತಕ್ಕೆ ಕಂಚಿನ ಪದಕ ತಂದಿದ್ದರು. ಅದಾಗಿ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಇನ್ನು ಪುರುಷರ 57 ಕೆಜಿ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಒಟ್ಟಿಗೆ 5 ಪದಕಗಳು ಈಗ ಭಾರತದ ಖಾತೆಯಲ್ಲಿವೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 6, 2021, 16:28 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X