ಯುಎಇ ಟಿ20 ಲೀಗ್‌ನಲ್ಲಿ ಫ್ರಾಂಚೈಸ್ ಖರೀದಿಸಿದ ಶಾರುಖ್ ಖಾನ್ ನೇತೃತ್ವದ ನೈಟ್ ರೈಡರ್ಸ್ ಗ್ರೂಪ್

ನೈಟ್ ರೈಡರ್ಸ್ ಗ್ರೂಪ್ ಅಬುಧಾಬಿ ಫ್ರಾಂಚೈಸ್ ಅನ್ನು ಹೊಂದಲು ಮತ್ತು ಅದರ ನಿರ್ವಹಣೆ ಹಕ್ಕುಗಳನ್ನು ಪಡೆದುಕೊಂಡಿದೆ. ಇದೇ ವೇಳೆ ಅಬುಧಾಬಿ ನೈಟ್ ರೈಡರ್ಸ್ (ADKR) ತಂಡದ ಮಾಲೀಕತ್ವ ಹೊಂದಲಿದೆ ಎಂದು ಯುಎಇಯ ಟಿ20 ಲೀಗ್ ಗುರುವಾರ ಪ್ರಕಟಿಸಿದೆ.

ಕಳೆದ ಒಂದು ದಶಕದಲ್ಲಿ ನೈಟ್ ರೈಡರ್ಸ್ ಗ್ರೂಪ್ ಟಿ20 ಕ್ರಿಕೆಟ್‌ನಲ್ಲಿ ಮನೆಮಾತಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 2008ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಾಲೀಕತ್ವ ಹೊಂದಿದ ನಂತರ, ನೈಟ್ ರೈಡರ್ಸ್ 2015ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ಮಾಲೀಕತ್ವ ಪಡೆದುಕೊಂಡರು.

ಇತ್ತೀಚೆಗೆ, ನೈಟ್ ರೈಡರ್ಸ್ ಗ್ರೂಪ್ USAನಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲಿ ಗಮನಾರ್ಹ ಹೂಡಿಕೆಯನ್ನು ಮಾಡಿದೆ ಮತ್ತು ಗ್ರೇಟರ್ ಲಾಸ್ ಏಂಜಲೀಸ್ ಪ್ರದೇಶದಲ್ಲಿ ಫ್ರಾಂಚೈಸ್ ಅನ್ನು ಸ್ಥಾಪಿಸಲು ಉದ್ದೇಶಿಸಿದೆ.

ನೈಟ್ ರೈಡರ್ಸ್ ಬ್ರ್ಯಾಂಡ್ ವಿಸ್ತರಣೆ

ನೈಟ್ ರೈಡರ್ಸ್ ಬ್ರ್ಯಾಂಡ್ ವಿಸ್ತರಣೆ

ಜೂಹಿ ಚಾವ್ಲಾ ಮತ್ತು ಅವರ ಪತಿ ಜಯ್ ಮೆಹ್ತಾ ಅವರೊಂದಿಗೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನೇತೃತ್ವದ ನೈಟ್ ರೈಡರ್ಸ್ ಗ್ರೂಪ್‌ನ ಈ ಹೂಡಿಕೆಯು ಐಪಿಎಲ್, ಸಿಪಿಎಲ್, ಎಂಎಲ್‌ಸಿ ಮತ್ತು ಈಗ ಯುಎಇಯ ಟಿ20 ಲೀಗ್‌ ಸೇರಿದಂತೆ ವಿಶ್ವದಾದ್ಯಂತ ತಮ್ಮ 4ನೇ ಟಿ20 ಫ್ರಾಂಚೈಸಿಯನ್ನು ಸ್ಥಾಪಿಸಲಿದೆ.

ದೀರ್ಘಾವಧಿ ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ನಟ ಹಾಗೂ ಮಾಲೀಕ ಶಾರುಖ್ ಖಾನ್, "ಈಗ ಹಲವಾರು ವರ್ಷಗಳಿಂದ, ನಾವು ಜಾಗತಿಕವಾಗಿ ನೈಟ್ ರೈಡರ್ಸ್ ಬ್ರ್ಯಾಂಡ್ ಅನ್ನು ವಿಸ್ತರಿಸುತ್ತಿದ್ದೇವೆ ಮತ್ತು ಯುಎಇನಲ್ಲಿ ಟಿ20 ಕ್ರಿಕೆಟ್‌ನ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. UAEಯ ಟಿ20 ಲೀಗ್‌ನ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ, ಇದು ಭಾರೀ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲವೆಂದು," ತಿಳಿಸಿದ್ದಾರೆ.

ನೈಟ್ ರೈಡರ್ಸ್ ಸಾಹಸಕ್ಕೆ ಬೆಂಬಲ

ನೈಟ್ ರೈಡರ್ಸ್ ಸಾಹಸಕ್ಕೆ ಬೆಂಬಲ

ಯುಎಇಯ ಟಿ20 ಲೀಗ್ ಅಧ್ಯಕ್ಷ ಖಾಲಿದ್ ಅಲ್ ಜರೂನಿ ಈ ಕುರಿತು ಮಾತನಾಡಿದ್ದು, "ಟಿ20 ಸ್ವರೂಪವನ್ನು ಬೆಳೆಸುವ ಬದ್ಧತೆ ಮತ್ತು ನೈಟ್ ರೈಡರ್ಸ್ ಗ್ರೂಪ್ ಈವರೆಗೆ ಸಂಗ್ರಹಿಸಿದ ಪರಿಣತಿ, ಪ್ರಪಂಚದಾದ್ಯಂತ ಕ್ರಿಕೆಟ್‌ನಲ್ಲಿ ಫ್ರಾಂಚೈಸ್ ಸ್ಥಾಪಿಸಲು ಅವರ ಪಾಲ್ಗೊಳ್ಳುವಿಕೆಯು ನಿರ್ವಿವಾದವಾಗಿದೆ," ಎಂದರು.

"ಯುಎಇಯ ಟಿ20 ಲೀಗ್‌ನೊಂದಿಗೆ ಸೇರಲು ಅವರ ದೂರದೃಷ್ಟಿಯಿಂದ ನಾವು ಅಸಾಧಾರಣವಾಗಿ ಸಂತೋಷಪಟ್ಟಿದ್ದೇವೆ ಮತ್ತು ಇದು ಕ್ರಿಕೆಟ್ ಸಮುದಾಯದಾದ್ಯಂತ ಲೀಗ್‌ನ ಖ್ಯಾತಿ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುತ್ತದೆ ಎಂದು ದೃಢವಾಗಿ ನಂಬುತ್ತೇವೆ," ಎಂದು ಯುಎಇಯ ಟಿ20 ಲೀಗ್ ಅಧ್ಯಕ್ಷ ಖಾಲಿದ್ ಅಲ್ ಜರೂನಿ ಹೇಳಿದರು.

ನೈಟ್ ರೈಡರ್ಸ್ ಬ್ರ್ಯಾಂಡ್ ಮತ್ತು ಲೀಗ್ ಎರಡಕ್ಕೂ ಪರಸ್ಪರ ಪ್ರಯೋಜನಕಾರಿ

ನೈಟ್ ರೈಡರ್ಸ್ ಬ್ರ್ಯಾಂಡ್ ಮತ್ತು ಲೀಗ್ ಎರಡಕ್ಕೂ ಪರಸ್ಪರ ಪ್ರಯೋಜನಕಾರಿ

ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿ ಪ್ರತಿಕ್ರಿಯಿಸಿ, "ಫ್ರಾಂಚೈಸ್ ತಂಡದ ಮಾಲೀಕರಾಗಿ ಲೀಗ್‌ನೊಂದಿಗೆ ನೈಟ್ ರೈಡರ್ಸ್ ಗ್ರೂಪ್‌ನ ಸಹಯೋಗದಿಂದ ನಾವು ಸಂತಸಗೊಂಡಿದ್ದೇವೆ. ಈ ಗ್ರೂಪ್ ನೈಟ್ ರೈಡರ್ಸ್ ಬ್ರ್ಯಾಂಡ್ ಮತ್ತು ಲೀಗ್ ಎರಡಕ್ಕೂ ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದು ನಮಗೆ ತುಂಬಾ ವಿಶ್ವಾಸವಿದೆ. ಯುಎಇಯ ಟಿ20 ಲೀಗ್ ಕೆಲವು ದೊಡ್ಡದನ್ನು ಆಕರ್ಷಿಸುತ್ತದೆ. ಸ್ಥಳೀಯ ಮತ್ತು ಮುಂಬರುವ ಆಟಗಾರರಿಗೆ ವೇದಿಕೆ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ ನೀಡುವುದರ ಜೊತೆಗೆ ವಿಶ್ವ ಕ್ರಿಕೆಟ್‌ನಲ್ಲಿ ಹೆಸರುಗಳು ಗಳಿಸಲು ಅನುಕೂಲವಾಗಲಿದೆ," ಎಂದು ಅಭಿಪ್ರಾಯಪಟ್ಟರು.

ಪ್ರಪಂಚದಾದ್ಯಂತ ಟಿ20 ಕ್ರಿಕೆಟ್ ವಿಸ್ತರಣೆ

ಪ್ರಪಂಚದಾದ್ಯಂತ ಟಿ20 ಕ್ರಿಕೆಟ್ ವಿಸ್ತರಣೆ

ಕೆಕೆಆರ್ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ಸಿಇಒ ವೆಂಕಿ ಮೈಸೂರು ಮಾತನಾಡಿ, "ಟಿ20 ಕ್ರಿಕೆಟ್‌ನಲ್ಲಿ ಜಾಗತಿಕ ಬ್ರ್ಯಾಂಡ್ ಆಗಿ ಸ್ಥಿರವಾಗಿ ಗುರುತಿಸಿಕೊಂಡಿರುವುದು ನಮ್ಮ ಅದೃಷ್ಟ ಎಂದು ಭಾವಿಸುತ್ತೇವೆ. ಟಿ20 ಕ್ರಿಕೆಟ್ ಪ್ರಪಂಚದಾದ್ಯಂತ ವಿಸ್ತರಿಸುತ್ತಿದ್ದಂತೆ, ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲು ನಿಯಮಿತ ಆಹ್ವಾನಗಳಿಗೆ ನಾವು ಪ್ರಶಂಸಿಸುತ್ತೇವೆ. ಪ್ರಪಂಚದಾದ್ಯಂತ ಕ್ರೀಡೆ ತೀವ್ರ ಬೆಳವಣಿಗೆಯಲ್ಲಿದೆ," ಎಂದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, May 12, 2022, 23:30 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X