ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಾಕ್ ಫೈಟರ್ ಸೋಲಿಸಿದ ಬೆಂಗಳೂರಿನ ಮೊಹಮ್ಮದ್‌ ಫರಾದ್‌ಗೆ ಸನ್ಮಾನ

KSFA, Nalapad Acadamy and Bowring Institute Felicitated Mixed Martial Arts Fighter Mohammed Farad

ಬೆಂಗಳೂರು: ಮಾರ್ಚ್‌ 11ರಂದು ಬಹ್ರೇನ್‌ನಲ್ಲಿ ನಡೆದ ಎಂಎಂಎ (ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌) ಫೈಟ್‌ನಲ್ಲಿ ಬೆಂಗಳೂರಿನ ಫೈಟರ್‌ ಮೊಹಮ್ಮದ ಫರಾದ್‌ ಪಾಕಿಸ್ತಾನಿ ಫೈಟರ್‌ ಉಲೂಮಿ ಕರೀಮ್‌ ಅವರನ್ನು ನಾಕ್‌ಔಟ್‌ ಮಾಡಿ ಗೆಲವು ಸಾಧಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ದೇಶದ ಪತಾಕೆಯನ್ನು ಹಾರಿಸಿದ ಬೆಂಗಳೂರಿನ ಫೈಟರ್‌ಗೆ ಮಾರ್ಚ್ 17ರಂದು ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ಜಂಟಿಯಾಗಿ ಸನ್ಮಾನಿಸಿದವು.

ಬಾಕ್ಸಿಂಗ್ ರಿಂಗ್‌ಗೆ ಮರಳಿದ 3 ಮಕ್ಕಳ ತಾಯಿಗೆ ಸ್ಟೇಟ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಬಾಕ್ಸಿಂಗ್ ರಿಂಗ್‌ಗೆ ಮರಳಿದ 3 ಮಕ್ಕಳ ತಾಯಿಗೆ ಸ್ಟೇಟ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಫೈಟರ್‌ ಮೊಹಮ್ಮದ ಫರಾದ್‌, 'ಎಂಎಂಎ ಇತ್ತೀಚೆಗೆ ಜಗತ್ತಿನಾದ್ಯಂತ ಬಹಳಷ್ಟು ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದೆ. ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಹಳಷ್ಟು ದೈಹಿಕ ಶ್ರಮ ಹಾಗೂ ಶಕ್ತಿಯ ಅಗತ್ಯವಿದೆ. ನಿಜವಾದ ಫೈಟ್‌ನಲ್ಲಿ ಅದರಲ್ಲೂ ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಿ ಫೈಟರನ್ನು ನಾಕ್‌ಔಟ್‌ ಮಾಡಿ ಗೆಲವು ಸಾಧಿಸಿದ್ದು ಬಹಳ ಸಂತಸ ತಂದಿದೆ' ಎಂದರು.

ಭಾರತ-ಇಂಗ್ಲೆಂಡ್: ವಿಲಿಯಮ್ಸನ್ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿಭಾರತ-ಇಂಗ್ಲೆಂಡ್: ವಿಲಿಯಮ್ಸನ್ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

ಮಾತು ಮುಂದುವರೆಸಿದ ಫರಾದ್, 'ನನ್ನ ಗೆಲುವನ್ನು ಗುರುತಿಸಿ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ನನ್ನ ಊರಿನಲ್ಲಿ ಸನ್ಮಾನಿಸುತ್ತಿರುವುದು ಬಹಳ ಖುಷಿ ನೀಡಿದೆ,' ಎಂದು ಹರ್ಷ ವ್ಯಕ್ತಪಡಿಸಿದರು.

ಯುವ ಜನಾಂಗ ಹೆಚ್ಚು ತೊಡಗಿಸಿಕೊಳ್ಳಲಿ

ಯುವ ಜನಾಂಗ ಹೆಚ್ಚು ತೊಡಗಿಸಿಕೊಳ್ಳಲಿ

ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷರು ಹಾಗೂ ಶಾಸಕರಾದ ಎನ್‌ ಎ ಹ್ಯಾರಿಸ್‌, 'ದೈಹಿಕ ಶಕ್ತಿಯನ್ನು ಬೇಡುವ ಕ್ರೀಡೆ ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌, ಇಂತಹ ಕ್ರೀಡೆಯಲ್ಲಿ ನಮ್ಮ ನಗರದ ಹುಡುಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಫುಟ್‌ಬಾಲ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ನೀಡುವುದಕ್ಕೂ ಸಿದ್ಧರಿದ್ದೇವೆ. ಮೊಹಮ್ಮದ್‌ ಫರಾದ್‌ ಸಾಧನೆ ಇನ್ನು ಹಲವರಿಗೆ ಸ್ಪೂರ್ತಿಯಾಗಲಿ ಹಾಗೂ ಹೆಚ್ಚು ಹೆಚ್ಚು ಯುವ ಜನಾಂಗ ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ,' ಎಂದರು.

ಅಕಾಡೆಮಿಯಲ್ಲಿ ಅಳವಡಿಸಿಕೊಳ್ಳಲು ಚಿಂತನೆ

ಅಕಾಡೆಮಿಯಲ್ಲಿ ಅಳವಡಿಸಿಕೊಳ್ಳಲು ಚಿಂತನೆ

ನಲಪಾಡ್‌ ಅಕಾಡೆಮಿಯ ನಿರ್ದೇಶಕ ಓಮರ್‌ ನಲಪಾಡ್‌ ಹ್ಯಾರಿಸ್‌ ಮಾತನಾಡಿ, 'ನಮ್ಮ ನಲಪಾಡ್‌ ಅಕಾಡೆಮಿಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಎಂಎಂಎ ನಂತಹ ಕ್ರೀಡೆಗಳನ್ನು ನಾವು ನಮ್ಮ ಅಕಾಡೆಮಿಯಲ್ಲೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ,' ಎಂದು ಹೇಳಿದರು.

ಪಾಕಿಸ್ತಾನಿ ವಿರುದ್ಧ ಭರ್ಜರಿ ಫೈಟ್

ಪಾಕಿಸ್ತಾನಿ ವಿರುದ್ಧ ಭರ್ಜರಿ ಫೈಟ್

ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ನೀಡಿದ ಅಬ್ದುಲ್‌ ಮುನೀರ್‌ ಮಾತನಾಡಿ, 'ಸಾಕಷ್ಟು ಶ್ರಮದಿಂದ ನಮ್ಮ ಬೆಂಗಳೂರಿನ ಹುಡುಗ ಮೊಹಮ್ಮದ್‌ ಫರಾದ್‌ ಈ ಗೆಲುವನ್ನು ಸಾಧಿಸಿದ್ದಾನೆ. ಸೋತಿರುವ ಪಾಕಿಸ್ತಾನಿ ಫೈಟರ್‌ ಹಿಂದಿನ ಹಲವು ಪಂದ್ಯಗಳಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಸೋಲಿಸಿದ್ದರು. ಕ್ರೀಡೆಯಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಕ್ರೀಡಾಪಟುಗಳು ಎದುರಾದಾಗ ಬಹಳಷ್ಟು ಮಾನಸಿಕವಾದ ಒತ್ತಡ ಇರುತ್ತದೆ. ಈ ಒತ್ತಡವನ್ನು ಮೀರಿ ದೇಶದ ಹೆಸರನ್ನು ಎತ್ತಿಹಿಡಿಯವುದು ಬಹಳ ಹೆಮ್ಮೆಯ ಸಂಗತಿಯಾಗಿದೆ,' ಎಂದರು.
ಕಾರ್ಯಕ್ರಮದಲ್ಲಿ ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ನ ಅಧ್ಯಕ್ಷರಾದ ಆದಿತ್ಯ, ಬೌರಿಂಗ್‌ ಇನ್ಸಿಟ್ಯೂಟ್ ನ ಅಧ್ಯಕ್ಷರಾದ ರೂಪ್‌ ಗೋಲ್ಖಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Story first published: Wednesday, March 17, 2021, 18:03 [IST]
Other articles published on Mar 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X