'ದಂಗಲ್' ಹೀರೋ ಮಹಾವೀರ್‌ ಸಿಂಗ್ ಪೋಗಟ್‌ಗೆ ಸಿಗಲಿಲ್ಲ ಟಿಕೆಟ್!

By Manjunatha

ಅಮಿರ್ ಖಾನ್ ನಟಿಸಿದ್ದ 'ದಂಗಲ್' ಚಿತ್ರ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳಾದ ಗೀತಾ ಪೋಗಟ್ ಹಾಗೂ ಬಬಿತಾ ಕುಮಾರಿ ಅವರ ಕುರಿತದ್ದಾಗಿತ್ತು. ಅದೇ ಮಹಾವೀರ್ ಸಿಂಗ್ ಪೋಗಟ್ ಅವರ ಎರಡನೇ ಮಗಳು ಬಬಿತಾ ಕುಮಾರಿ ಇಂದು ಕಾಮನ್‌ವೆಲ್ತ್‌ನ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆದರೆ ಅವರ ಆಟವನ್ನು ನೋಡಲು ಬಂದಿದ್ದ ಪೋಗಟ್‌ ಅವರಿಗೆ ಟಿಕೆಟ್ ದೊರಕದೆ ಪರದಾಡಬೇಕಾಯಿತು.

'ದಂಗಲ್‌' ಚಿತ್ರದ ಕೊನೆಯ ದೃಶ್ಯದಲ್ಲಿ ಆದಂತೆ ಇಲ್ಲಿ ಯಾರೂ ಅವರನ್ನು ಕೊಠಡಿಯೊಳಗೆ ಬಂಧಿ ಮಾಡಲಿಲ್ಲವಾದರೂ. ಆಡಳತ ಸಂಬಂಧಿ ವಿಷಯಗಳಿಂದಾಗಿ ಅವರಿಗೆ ಟಿಕೆಟ್ ದೊರಕದೆ ಸಮಸ್ಯೆ ಎದುರಿಸುವಂತಾಯಿತು.

ಬಬಿತಾ ಅವರು ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಡಯಾನಾ ವಿಕೇರ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಅವರ ಆಟವನ್ನು ನೋಡಲೆಂದು ಭಾರತದಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಮಹಾವೀರ್ ಸಿಂಗ್ ಪೋಗಟ್ ಅವರಿಗೆ ಟಿಕೆಟ್ ದೊರೆಯದೆ ಅಂಗಳದ ಹೊರಗೆ ಕಾಯಬೇಕಾಯಿತು.

ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದರಿಂದ ಪೋಗಟ್ ಅವರಿಗೆ ಟಿಕೆಟ್ ಸಿಗಲಿಲ್ಲ ಅಷ್ಟೆ ಅಲ್ಲದೆ ಅಥ್ಲೆಟ್‌ಗಳಿಗೆ ನೀಡಲಾಗುವ ಎರಡು ಕಾಂಪ್ಲೆಂಟರಿ ಟಿಕೆಟ್‌ಗಳನ್ನು ಬಬಿತಾ ಅವರು ತಮ್ಮ ಕೋಚ್‌ ಮತ್ತು ಸಿಬ್ಬಂದಿಗೆ ನೀಡಿದ್ದರಿಂದ ತಮ್ಮ ತಂದೆಗೆ ಟಿಕೆಟ್‌ ಹೊಂದಿಸಲು ಅವರು ಹೆಣಗಾಡಿದರು.

ಭಾರತೀಯ ವ್ಯವಸ್ಥಾಪಕ ಮಂಡಳಿ, ಕಾಮನ್‌ವೆಲ್ತ್‌ ವ್ಯವಸ್ಥಾಪಕ ಮಂಡಳಿ ಎಲ್ಲರಲ್ಲೂ ಮನವಿ ಮಾಡಿ ಸುಸ್ತಾದ ಬಬಿತಾ ಅವರು ಕೊನೆಗೆ ಆಸ್ಟ್ರೇಲಿಯಾದ ಅಥ್ಲೀಟ್‌ಗಳನ್ನು ಬೇಡಿಕೊಂಡು ಕೆಲವು ಪಾಸುಗಳನ್ನು ಪಡೆದು ತಮ್ಮ ತಂದೆ ಪಂದ್ಯ ನೋಡುವಂತೆ ಮಾಡಿದರು. ಆದರೆ ಫೈನಲ್‌ನಲ್ಲಿ ಸೋಲು ಕಂಡು ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

2010ರ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ, 2014ರಲ್ಲಿ ಚಿನ್ನ ಗೆದ್ದಿದ್ದ ಬಬಿತಾ ಕುಮಾರಿ ಈ ಬಾರಿ ಬೆಳ್ಳಿಗೆ ತರಪ್ತಿಪಟ್ಟುಕೊಳ್ಳಬೇಕಾಯಿತು. ಬಬಿತಾ ಕುಮಾರಿಯ ಅಕ್ಕ ಗೀತಾ ಅವರೂ ಕೂಡ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.

ಈ ಇಬ್ಬರು ಅಕ್ಕ ತಂಗಿಯರ ಹಾಗೂ ಇವರ ತಂದೆ ಖ್ಯಾತ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಅವರ ಜೀವನ ಆಧರಿಸಿ ಅಮೀರ್ ಖಾನ್ ನಟಿಸಿದ್ದ ದಂಗಲ್ ಚಿತ್ರ ನಿರ್ಮಿಸಲಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Thursday, April 12, 2018, 18:11 [IST]
Other articles published on Apr 12, 2018

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X