ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪದಕ ಗೆಲ್ಲುವ ಭಾರತದ ಜಿಮ್ನಾಸ್ಟ್ ಗಳಿಗೆ ಸ್ಫೂರ್ತಿ ಈ ಚುಸೊವಿಟಿನಾ

Legendary Oksana Chusovitina inspires Indian gymnasts

ನವದೆಹಲಿ, ಜುಲೈ 25: ಮುಂಬರಲಿರುವ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆಲ್ಲ ಬಯಸುವ ಭಾರತದ ಜಿಮ್ನಾಸ್ಟ್ ಗಳಿಗೆಲ್ಲ ಉಜ್ಬೇಕಿಸ್ಥಾನ್ ನ ಜಿಮ್ನಾಸ್ಟ್ ದಂತಕತೆ ಒಕ್ಸಾನಾ ಚುಸೊವಿಟಿನಾ ಸ್ಫೂರ್ತಿಯಾಗಿದ್ದಾರೆ. ಭಾರತದ ಗೆಲುವಿನುತ್ಸಾಹಿ ಜಿಮ್ನಾಸ್ಟ್ ಗಳಿಗೆ ಒಕ್ಸಾನಾ ವಿಶೇಷ ಪ್ರೇರೇಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೆಹ್ವಾಗ್ ಬಾಯಲ್ಲಿ ಕನ್ನಡ ಸಿನಿಮಾದ ಖಡಕ್ ಡೈಲಾಗ್ ಕೇಳಿ!ಸೆಹ್ವಾಗ್ ಬಾಯಲ್ಲಿ ಕನ್ನಡ ಸಿನಿಮಾದ ಖಡಕ್ ಡೈಲಾಗ್ ಕೇಳಿ!

ಫಿಟ್ನೆಸ್ ಕಾಯ್ದುಕೊಳ್ಳಬಯಸುವ ಮತ್ತು ಪದಕ ಗೆಲ್ಲಲು ಹಂಬಲಿಸುವ ಭಾರತದ ಯುವ ಜಿಮ್ನಾಸ್ಟ್ ಗಳಿಗೆ ಒಸಾಕಾ ನಿಜಕ್ಕೂ ಒಳ್ಳೆಯ ಪ್ರೇರಣೆಯೆ. ಯಾಕೆಂದರೆ 43ರ ಹರೆಯದ ಒಕ್ಸಾನಾ ಒಟ್ಟು ಏಳು ಬಾರಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡ ಅನುಭವ ಉಳ್ಳವರು.

ಜೊತೆಗೆ ಒಕ್ಸಾನಾ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಮೂರು ಚಿನ್ನದ ಪದಕ ಗೆದ್ದಿದ್ದಾರೆ. 1991ರಲ್ಲಿ ಸೋವಿಯತ್ ಯೂನಿಯನ್ ಪ್ರತಿನಿಧಿಸಿ 2 ಚಿನ್ನ, 2003ರಲ್ಲಿ ಉಜ್ಬೇಕಿಸ್ಥಾನ್ ಪರ ಒಂದು ಚಿನ್ನ ಗೆದ್ದಿದ್ದರು. ಅಲ್ಲದೆ ಏಷ್ಯನ್ ಗೇಮ್ಸ್ ನಲ್ಲಿ 2 ಚಿನ್ನ 3 ಬೆಳ್ಳಿ ಮತ್ತು 2 ಕಂಚು ಗೆದ್ದ ಸಾಧನೆಯೂ ಒಕ್ಸಾನಾ ಅವರದ್ದು.

Legendary Oksana Chusovitina inspires Indian gymnasts

ಅನುಭವಿ ಜಿಮ್ನಾಸ್ಟ್ ಜೊತೆ ತರಬೇತಿ ನಡೆಸುತ್ತಿರುವ ಪ್ರಣತಿ ಅವರಿಗೆ ಚುಸೊವಿಟಿನಾ ಮುಂದುನಿಂತು ಕಲಿಸುತ್ತಿರುವುದರ ಸಕಾರಾತ್ಮಕ ಪರಿಣಾಮಗಳು ಅರಿವಾಗುತ್ತಿವೆ. ಪ್ರಣತಿಯ ಕೋಚ್ ಮಿನೆರಾ ಬೇಗಂ ಅವರೂ ಚುಸೊವಿಟಿನಾ ತರಬೇತಿಯಿಂದಾಗುತ್ತಿರುವ ಸುಧಾರಣೆಗಳನ್ನು ಅರಿತುಕೊಂಡಿದ್ದಾರೆ. ಇದನ್ನು ಸ್ವತಃ ಬೇಗಂ ಅವರೇ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸುತ್ತ ಬೇಗಂ, 'ಯುವ ಜಿಮ್ನಾಸ್ಟ್ ಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಒಕ್ಸಾನಾ ಅವರು ಪ್ರತಿದಿನ ಮುಂಜಾನೆ ತರಬೇತಿ ಸೆಂಟರ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 43ರ ಹರೆಯದ ಅವರು ಸ್ವತಃ ಮುಂದಾಗಿ ಪದಕ ಗೆಲ್ಲುವತ್ತ ಭಾರತೀಯರನ್ನು ಪ್ರೇರೇಪಿಸುತ್ತಿರುವುದು ಖುಷಿ ತರುತ್ತಿದೆ' ಎಂದಿದ್ದಾರೆ.

Story first published: Wednesday, July 25, 2018, 19:27 [IST]
Other articles published on Jul 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X