ಭಾರತದ ದಿಗ್ಗಜ ಓಟಗಾರ ಮಿಲ್ಖಾ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರ

ಚಂಡೀಗಢ: ಕೋವಿಡ್ 19 ಸೋಂಕಿಗೀಡಾಗಿರುವ ಭಾರತದ ದಿಗ್ಗಜ ಓಟಗಾರ ಮಿಲ್ಖಾ ಸಿಂಗ್‌ ಅವರ ಆರೋಗ್ಯ ಸ್ಥಿತಿ ಶುಕ್ರವಾರ (ಜೂನ್ 18) ತೀರಾ ಹದಗೆಟ್ಟಿದೆ. ಚಂಡೀಗಢದಲ್ಲಿರುವ ಪೋಸ್ಟ್ ಗ್ರ್ಯಾಜ್ಯುಯೇಟ್ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಎಜುಕೇಶನ್ ಆ್ಯಂಡ್ ರೀಸರ್ಸ್ ಕೇಂದ್ರದಲ್ಲಿರುವ ಕೋವಿಡ್ ತೀವ್ರ ನಿಗಾ ಘಟಕದಲ್ಲಿ ಸದ್ಯ ಮಿಲ್ಖಾ ಇದ್ದಾರೆ.

 WTC ಫೈನಲ್: ಸೌಥಾಂಪ್ಟನ್ ಹವಾಮಾನದ ಬಗ್ಗೆ ಕಹಿ ವಿಚಾರ ಹಂಚಿಕೊಂಡ ನಾಸಿರ್ ಹುಸೇನ್ WTC ಫೈನಲ್: ಸೌಥಾಂಪ್ಟನ್ ಹವಾಮಾನದ ಬಗ್ಗೆ ಕಹಿ ವಿಚಾರ ಹಂಚಿಕೊಂಡ ನಾಸಿರ್ ಹುಸೇನ್

ಮಿಲ್ಖಾ ಸಿಂಗ್‌ ಅವರ ಆಗೋಗ್ಯ ಸ್ಥಿತಿ ತೀರಾ ಹದಗೆಡುತ್ತಿದೆ ಮತ್ತು ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ತೀರಾ ಕುಸಿಯುತ್ತಿದೆ ಎಂದು ಆಸ್ಪತ್ರೆಯ ಮೂಲ ತಿಳಿಸಿದೆ. ಗುರುವಾರ ರಾತ್ರಿಯ ವೇಳೆ ಸಿಂಗ್ ಆಮ್ಲಜನಕದ ಪ್ರಮಾಣ ಕುಸಿದಿತ್ತು ಎಂದು ತಿಳಿದು ಬಂದಿದೆ.

'ಮಿಲ್ಖಾ ಜಿ ಪಾಲಿಗೆ ಇದು ಕೊಂಚ ಕಷ್ಟದ ದಿನವಾಗಿದೆ. ಆದರೆ ಅವರು ರೋಗದ ವಿರುದ್ಧ ಹೋರಾಡುತ್ತಿದ್ದಾರೆ,' ಎಂದು ಮಿಲ್ಖಾ ಅವರ ಕುಟುಂಬಸ್ಥರೊಬ್ಬರು ಮಾಹಿತಿ ನೀಡಿದ್ದಾರೆ. ದುರಂತವೆಂದರೆ ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲ್ ಕೌರ್ ಕೂಡ ಇದೇ ತಿಂಗಳು ಕೋವಿಡ್‌-19 ಸೋಂಕಿನಿಂದಾಗಿ ಸಾವಿಗೀಡಾಗಿದ್ದರು.

WTC Final: ಮಹತ್ವದ ಪಂದ್ಯಕ್ಕೆ ಭಾರತದ ಸಿದ್ಧತೆಗೆ ಕೆವಿನ್ ಪೀಟರ್ಸನ್ ಕಳವಳWTC Final: ಮಹತ್ವದ ಪಂದ್ಯಕ್ಕೆ ಭಾರತದ ಸಿದ್ಧತೆಗೆ ಕೆವಿನ್ ಪೀಟರ್ಸನ್ ಕಳವಳ

ಮಿಲ್ಖಾ ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಚಿನ್ನದ ಪದಕ ಗೆದ್ದಿದ್ದರು. ಮಿಲ್ಖಾ ಜೀವನಾಧರಿಸಿ, ಅವರ ಕ್ರೀಡಾ ಸಾಧನೆಗಳನ್ನಾಧರಿಸಿ ಬಾಲಿವುಡ್‌ನಲ್ಲಿ 'ಭಾಗ್ ಮಿಲ್ಖಾ ಭಾಗ್' ಚಿತ್ರ ಭರ್ಜರಿ ಯಶಸ್ವಿ ಕಂಡಿತ್ತು. ಫರ್ಹಾನ್ ಅಖ್ತರ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 18, 2021, 17:40 [IST]
Other articles published on Jun 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X