ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫಾರ್ಮುಲಾ 1: ಲೂಯಿಸ್‌ ಹ್ಯಾಮಿಲ್ಟನ್‌ಗೆ ಬಾರ್ಸಿಲೋನಾ ಗರಿ

Lewis Hamilton wins in Spain to take championship lead

ಬಾರ್ಸಿಲೋನಾ, ಮೇ 12: ಚಾಲನೆಯಲ್ಲಿ ಅನುಭವ ಮೆರೆದ ಹಾಲಿ ವಿಶ್ವ ಚಾಂಪಿಯನ್‌ ಮರ್ಸಿಡೀಸ್‌ ತಂಡದ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌, ಇಲ್ಲಿ ನಡೆದ ಫಾರ್ಮುಲಾ 1 ಸ್ಪ್ಯಾನಿಷ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಪ್ರಸಕ್ತ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ತಮ್ಮ ಹಿಡಿತ ಬಿಗಿ ಪಡಿಸಿಕೊಂಡಿದ್ದಾರೆ.

ವಿಶ್ವಕಪ್‌: ಭಾರತ ವಿರುದ್ಧದ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಈ ಬೌಲರ್‌ ಫಿಟ್‌!ವಿಶ್ವಕಪ್‌: ಭಾರತ ವಿರುದ್ಧದ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಈ ಬೌಲರ್‌ ಫಿಟ್‌!

ಐದು ಬಾರಿಯ ವಿಶ್ವ ಚಾಂಪಿಯನ್‌ ಬ್ರಿಟನ್‌ನ ಹ್ಯಾಮಿಲ್ಟನ್‌, ಸರ್ಕಿಟ್‌ ಡೆ ಬಾರ್ಸಿಲೋನಾದಲ್ಲಿ ಭಾನುವಾರ ನಡೆದ ರೇಸ್‌ನಲ್ಲಿ 66 ಲ್ಯಾಪ್‌ಗಳಲ್ಲಿ 307.104 ಕಿ.ಮೀ ದೂರವನ್ನು 1 ಗಂಟೆ, 35 ನಿಮಿಷ ಹಾಗೂ 50.443 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಪೂರೈಸಿ ಟ್ರೋಫಿ ಎತ್ತಿ ಹಿಡಿದರು. ಇದು ಪ್ರಸಕ್ತ ಸಾಲಿನ ಫಾರ್ಮುಲಾ 1 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಹ್ಯಾಮಿಲ್ಟನ್‌ ಗೆದ್ದ 3ನೇ ಟ್ರೋಫಿಯಾಗಿದೆ. ಅಲ್ಲದೆ ಅವರ ವೃತ್ತಿ ಬದುಕಿನ 76ನೇ ಗೆಲುವು ಕೂಡ.

 ಟಿ20: ಬಿಗ್‌ ಬ್ಯಾಷ್‌ ಲೀಗ್‌ಗೆ ಗುಡ್‌ಬೈ ಎಂದ ಎಬಿ ಡಿ'ವಿಲಿಯರ್ಸ್‌ ಟಿ20: ಬಿಗ್‌ ಬ್ಯಾಷ್‌ ಲೀಗ್‌ಗೆ ಗುಡ್‌ಬೈ ಎಂದ ಎಬಿ ಡಿ'ವಿಲಿಯರ್ಸ್‌

ಈ ವರ್ಷ ಈವರೆಗೆ ಒಟ್ಟು 5 ರೇಸ್‌ಗಳು ಬಡೆದಿದ್ದ 3ರಲ್ಲಿ ಪ್ರಶಸ್ತಿ ಗೆದ್ದಿರುವ ಹ್ಯಾಮಿಲ್ಟನ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಮರ್ಸಿಡೀಸ್‌ ತಂಡದ ಮತ್ತೊಬ್ಬ ಚಾಲಕ ವಾಲ್ಟರಿ ಬೋಟಾಸ್‌ +4.074 ಸೆಕೆಂಡ್‌ಗಳ ಹಿನ್ನಡೆಯಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಇದರೊಂದಿಗೆ ಪ್ರಸಕ್ತ ಸಾಲಿನ ಐದು ರೇಸ್‌ಗಳಲ್ಲಿ ಮರ್ಸಿಡೀಸ್‌ ತಂಡದ ಚಾಲಕರು ಅಗ್ರ ಎರಡು ಸ್ಥಾನಗಳನ್ನು ಕಬಳಿಸಿದಂತಾಗಿದೆ.

IPL: ಧೋನಿ ಸಾಧನೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌IPL: ಧೋನಿ ಸಾಧನೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌

ರೆಡ್‌ಬುಲ್‌ ರೇಸಿಂಗ್‌ ತಂಡದ ಚಾಲಕ ನೆದರ್ಲೆಂಡ್ಸ್‌ನ ಮ್ಯಾಕ್ಸ್‌ ವೆರ್ಸ್ಟಾಪನ್‌ (+7.679 ಸೆ.) ತೃತೀಯ ಸ್ಥಾನ ತಮ್ಮದಾಗಿಸಿಕೊಂಡರೆ, ನೀರಸ ಪ್ರದರ್ಶನ ಮುಂದುವರಿಸಿರುವ ಫೆರಾರಿ ತಂಡದ ಪರ ಅನುಭವಿ ಚಾಲಕ ಜರ್ಮನಿಯ ಸೆಬಾಸ್ಟಿಯನ್‌ ವೆಟಲ್‌ (+9.167 ಸೆ.) ಮತ್ತು ಮೊನಾಕೊದ ರೇಸರ್‌ ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲೆರಾಕ್‌ (+13.361 ಸೆ.) ಕ್ರಮವಾಗಿ ನಾಲ್ಕನೇ ಮತ್ತು 5ನೇ ಸ್ಥಾನದಲ್ಲಿ ಗುರಿ ಮುಟ್ಟಿದರು.

Story first published: Sunday, May 12, 2019, 23:02 [IST]
Other articles published on May 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X