ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ- ನಟಿ ನಗ್ಮಾ ನಡುವಿನ ಲವ್ ಸ್ಟೋರಿ & ಬ್ರೇಕಪ್!

Love Story And Breakup Between Former Cricketer Sourav Ganguly And Actress Nagma

ಭಾರತೀಯ ಕ್ರಿಕೆಟಿಗರು ಮೊದಲಿನಿಂದಲೂ ಬಾಲಿವುಡ್‌ನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದಾರೆ. ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಮ್ಮ ಜೀವನದ ಸಂಗಾತಿಯನ್ನು ಬಾಲಿವುಡ್‌ನಿಂದಲೇ ಪಡೆದಿದ್ದಾರೆ. ಸಂಗೀತಾ ಬಿಜಲಾನಿ ಮತ್ತು ಮೊಹಮ್ಮದ್ ಅಜರುದ್ದೀನ್ ಅವರ ಪ್ರೇಮಕಥೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ.

ಇದಲ್ಲದೇ, ಇತ್ತೀಚಿನ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಹಾರ್ದಿಕ್ ಪಾಂಡ್ಯ-ನತಾಶಾ ಮತ್ತು ಯುಜುವೇಂದ್ರ ಚಾಹಲ್-ಧನಶ್ರೀ ವರ್ಮಾ ಅವರಂತಹ ಅನೇಕ ಕ್ರಿಕೆಟಿಗರು ಮತ್ತು ನಟಿಯರ ಪ್ರೇಮಕಥೆಯಿಂದ ಬಾಲಿವುಡ್‌ನೊಂದಿಗೆ ಕ್ರಿಕೆಟ್‌ ಬೆಸೆದುಕೊಂಡಿದೆ.

'ಬಿಲೀವ್'ನಲ್ಲಿ ಧೋನಿ, ಸಿಎಸ್‌ಕೆ, ವಿಶ್ವಕಪ್ 2011, ಪ್ರಿಯಾಂಕಾ ಬಗ್ಗೆ ಸುರೇಶ್ ರೈನಾ ಉಲ್ಲೇಖಿಸಿದ್ದೇನು?'ಬಿಲೀವ್'ನಲ್ಲಿ ಧೋನಿ, ಸಿಎಸ್‌ಕೆ, ವಿಶ್ವಕಪ್ 2011, ಪ್ರಿಯಾಂಕಾ ಬಗ್ಗೆ ಸುರೇಶ್ ರೈನಾ ಉಲ್ಲೇಖಿಸಿದ್ದೇನು?

ಅನೇಕ ಜನರ ಪ್ರೇಮಕಥೆಗಳು ಯಶಸ್ವಿಯಾಗುತ್ತದೆ ಮತ್ತು ಹಲವಾರು ಜೋಡಿಗಳು ಒಂದಲ್ಲ ಒಂದು ಕಾರಣಕ್ಕಾಗಿ ಒಬ್ಬರನ್ನೊಬ್ಬರು ಬಿಟ್ಟು ದೂರವಾಗುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಒಂದು ದುರಂತ ಪ್ರೇಮಕಥೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಮುಂದೆ ಓದಿ.

ಈ ದುರಂತ ಪ್ರೇಮಕಥೆ ವಾಸ್ತವವಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಪ್ರಸಿದ್ಧ ಬಾಲಿವುಡ್ ನಟಿ ನಗ್ಮಾ ಅವರಿಗೆ ಸೇರಿದ್ದು. ಬಂಗಾಳ ದಾದಾ ಎಂದೇ ಹೆಸರುವಾಸಿಯಾಗಿರುವ ಸೌರವ್ ಗಂಗೂಲಿ ಮತ್ತು ಬಾಲಿವುಡ್ ಬ್ಯೂಟಿ ನಗ್ಮಾ ಅವರ ನಡುವೆ ಅರಳಿದ್ದ ಪ್ರೇಮ ಮುಂದೆ ಏನಾಯಿತು ಎಂಬುದು ಹಲವರಿಗೆ ಗೊತ್ತಿರದ ವಿಚಾರ.

ಸೌರವ್ ಗಂಗೂಲಿ ಮತ್ತು ನಗ್ಮಾ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ?

ಸೌರವ್ ಗಂಗೂಲಿ ಮತ್ತು ನಗ್ಮಾ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ?

ಸೌರವ್ ಗಂಗೂಲಿ ಮತ್ತು ನಗ್ಮಾ ಮೊದಲ ಬಾರಿಗೆ 1999ರ ಏಕದಿನ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಭೇಟಿಯಾದರು. ಅವರು ಮೊದಲ ಬಾರಿಗೆ ಭೇಟಿಯಾದಾಗ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಲು ತಯಾರಿ ನಡೆಸುತ್ತಿದ್ದರು ಮತ್ತು ನಗ್ಮಾ ಕೂಡ ಬಾಲಿವುಡ್‌ ಚಿತ್ರರಂಗದ ಟಾಪ್ ನಟಿಯಾಗಿದ್ದರು.

ವಾಸ್ತವವಾಗಿ ಇಬ್ಬರೂ ಮೊದಲ ಭೇಟಿಯ ನಂತರ, ಪರಸ್ಪರ ಹೆಚ್ಚು ಹೆಚ್ಚು ಸಮಯವನ್ನು ಕಳೆಯಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ಅವರಿಬ್ಬರ ನಡುವೆ ಮೊದಲು ಉತ್ತಮ ಸ್ನೇಹಿತರಾದರು. ದಿನ ಕಳೆದ ನಂತರ ಗಂಗೂಲಿ-ನಗ್ಮಾ ನಡುವೆ ಸಣ್ಣಗೆ ಪ್ರೀತಿ ಚಿಗುರೊಡೆದಿತ್ತು. ಅನಂತರ ತಮ್ಮ ಪ್ರೀತಿಯನ್ನು ಪರಸ್ಪರ ಒಪ್ಪಿಕೊಂಡರು ಮತ್ತು ಒಟ್ಟಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.

ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಗೌಪ್ಯವಾಗಿಡಲು ಪ್ರಯತ್ನಿಸಿದರು

ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಗೌಪ್ಯವಾಗಿಡಲು ಪ್ರಯತ್ನಿಸಿದರು

ಭಾರತ ತಂಡದ ಟಾಪ್ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ಬಾಲಿವುಡ್ ಟಾಪ್ ನಟಿ ನಗ್ಮಾ ಒಟ್ಟಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ಸದ್ಯದ ಮಾಜಿ ಆಟಗಾರ ಅದಾಗಲೇ ಡೋನಾ ಎಂಬ ಹುಡುಗಿಯನ್ನು ಮದುವೆಯಾಗಿದ್ದರು. ಆದರೆ ಗಂಗೂಲಿಯ ಮದುವೆಯಿಂದ ನಗ್ಮಾಗೆ ಹೆಚ್ಚಿನ ವ್ಯತ್ಯಾಸವಾಗಿರಲಿಲ್ಲ, ಏಕೆಂದರೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ.

ಸೌರವ್ ಗಂಗೂಲಿ ಮತ್ತು ನಗ್ಮಾ ತಮ್ಮ ಸಂಬಂಧವನ್ನು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಗೌಪ್ಯವಾಗಿಡಲು ಪ್ರಯತ್ನಿಸಿದರು. ಆದರೆ ದಿನ ಕಳೆದಂತೆ ಅವರ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದ್ದವು. ಏಕೆಂದರೆ ಮಾಧ್ಯಮಗಳು ಅವರ ನಡುವಿನ ಪ್ರೇಮ ಮತ್ತು ಸಂಬಂಧದ ಕೆಲವು ದೃಢವಾದ ಪುರಾವೆಗಳನ್ನು ಕಂಡುಕೊಂಡಿದ್ದರು.

ಸೌರವ್ ಗಂಗೂಲಿ ಮತ್ತು ನಗ್ಮಾ ಸಂಬಂಧದ ಸುದ್ದಿ ಇಡೀ ದೇಶದ ತುಂಬೆಲ್ಲಾ ಗಾಳಿಯಂತೆ ಹರಡಿತು. ಅವರಿಬ್ಬರೂ ಮಾಧ್ಯಮದವರಿಂದ ಅನೇಕ ಆರೋಪಗಳನ್ನು ಎದುರಿಸಬೇಕಾಯಿತು. ಏಕೆಂದರೆ ಈಗಾಗಲೇ ಮೊದಲ ಮದುವೆಯಾಗಿದ್ದರು.

ಸೌರವ್ ಗಂಗೂಲಿ ಮತ್ತು ನಗ್ಮಾ ಬ್ರೇಕಪ್

ಸೌರವ್ ಗಂಗೂಲಿ ಮತ್ತು ನಗ್ಮಾ ಬ್ರೇಕಪ್

ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಬಾಲಿವುಡ್ ಜನಪ್ರಿಯ ನಟಿ ನಗ್ಮಾ ಅವರೊಂದಿಗಿನ ಸಂಬಂಧದ ಬಗ್ಗೆ ತಿಳಿದಾಗ, ಅವರು ಗಂಗೂಲಿಯವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದರು.

ಆದರೆ, ಸೌರವ್ ಗಂಗೂಲಿ ತನ್ನ ವೈವಾಹಿಕ ಜೀವನವನ್ನು ಯಾವುದೇ ಸ್ಥಿತಿಯಲ್ಲಿ ಉಳಿಸಲು ಬಯಸಿದ್ದರು. ಆದ್ದರಿಂದ ಅವರು ಇನ್ನು ಮುಂದೆ ಯಾವುದೇ ಕಾರಣಕ್ಕೂ ನಗ್ಮಾ ಅವರನ್ನು ಭೇಟಿಯಾಗುವುದಿಲ್ಲ ಎಂದು ಡೋನಾಗೆ ಭರವಸೆ ನೀಡಿದ್ದರು.

ಅಂತಿಮವಾಗಿ, ಸೌರವ್ ಗಂಗೂಲಿ ತಮ್ಮ ಪತ್ನಿ ಡೋನಾ ಗಂಗೂಲಿ ಅವರೊಂದಿಗಿನ ಸಂತೋಷದ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಬಾಲಿವುಡ್ ನಟಿ ನಗ್ಮಾ ಅವರೊಂದಿಗಿನ ಸಂಬಂಧಕ್ಕೆ ಅಂತ್ಯ ಹಾಡುತ್ತಾರೆ.

ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ

ಸೌರವ್ ಗಂಗೂಲಿ ತಾನು ನಗ್ಮಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಎಂದಿಗೂ ಮಾಧ್ಯಮದ ಮುಂದೆ ಒಪ್ಪಿಕೊಂಡಿಲ್ಲ ಅಥವಾ ಒಮ್ಮೆಯಾದರೂ ಅವರ ಬಗ್ಗೆ ಮಾತನಾಡಿಲ್ಲ. ಸೌರವ್ ಗಂಗೂಲಿಯೊಂದಿಗಿನ ಪ್ರೇಮ ಮುರಿದುಬಿದ್ದ ವರ್ಷಗಳ ನಂತರ ನಗ್ಮಾ ಅವರು ಮತ್ತು ಗಂಗೂಲಿ ಅವರೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದರು ಮತ್ತು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು ಎಂದು ಮುಖ್ಯ ಸುದ್ದಿ ವಾಹಿನಿ ಭಾರತೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು.

ಸದ್ಯ ಸೌರವ್ ಗಂಗೂಲಿ ತಮ್ಮ ಕುಟುಂಬದೊಂದಿಗೆ ತಮ್ಮ ಜೀವನವನ್ನು ಬಹಳ ಸಂತೋಷದಿಂದ ಕಳೆಯುತ್ತಿದ್ದಾರೆ ಮತ್ತು ಈಗ ಅವರು ಬಿಸಿಸಿಐ ಅಧ್ಯಕ್ಷರೂ ಆಗಿದ್ದಾರೆ. ಮತ್ತೊಂದೆಡೆ, ನಗ್ಮಾ ಸಹ ಬಾಲಿವುಡ್‌ನಿಂದ ತಮ್ಮ ವೃತ್ತಿಜೀವನದಿಂದ ದೂರವಾಗಿ ಈಗ ಸಕ್ರಿಯವಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ದುರಂತ ಪ್ರೇಮಕಥೆಗಳ ಬಗ್ಗೆ ಕೊನೆಯ ಮಾತು

ದುರಂತ ಪ್ರೇಮಕಥೆಗಳ ಬಗ್ಗೆ ಕೊನೆಯ ಮಾತು

ಏನೇ ಆಗಲಿ, ಬಾಲಿವುಡ್ ಮತ್ತು ಕ್ರಿಕೆಟ್ ನಂಟು ಇದೇ ಮೊದಲೇನಲ್ಲ. ಹಲವು ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ನಡುವೆ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಇಂತಹ ದುರಂತ ಪ್ರೇಮಕಥೆಗಳು ನಿಮಗೆ ಅಥವಾ ನಿಮ್ಮ ಸುತ್ತಮುತ್ತಲು ಆಗಿರಬಹುದು. ಅಂತವುಗಳಲ್ಲಿ ಸೌರವ್ ಗಂಗೂಲಿ ಮತ್ತು ನಗ್ಮಾ ಅವರ ಪ್ರೇಮವೂ ಒಂದು. ಈಗಾಗಲೇ ತಮ್ಮ ನಡುವಿನ ಸಂಬಂಧ ಮುರಿದುಕೊಂಡು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಜನರೂ ಈ ಬಗ್ಗೆ ಹೆಚ್ಚಿನದಾಗಿ ತಲೆಕೆಡಿಸಿಕೊಂಡಿಲ್ಲ.

Story first published: Sunday, August 7, 2022, 9:02 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X