ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಕ್ಸರ್ ಲವ್ಲಿನಾರ ಗ್ಲೌಸ್, ನೀರಜ್‌ರ ಜಾವೆಲಿನ್‌ನ ಇ-ಹರಾಜು ಆರಂಭ

Lovlina Borgohain’s gloves ahead of Neeraj Chopra’s javelin as e-auction begins

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಮಹಿಳಾ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ಅವರ ಗ್ಲೌಸ್ ಮತ್ತು ಬಂಗಾರ ಗೆದ್ದಿದ್ದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾರ ಜಾವೆಲಿನ್‌ನ ಇ ಹರಾಜು ಪ್ರಕ್ರಿಯೆ ಶುರುವಾಗಿದೆ. ಈಗಾಗಲೇ ಸುಮಾರು 10 ಕೋಟಿ ರೂ.ಗೂ ಅಧಿಕ ಬಿಡ್ ಪ್ರತಿಕ್ರಿಯೆಗಳು ಬಂದಿದ್ದು, ಇನ್ನೂ ಎರಡು ವಾರಕ್ಕೂ ಹೆಚ್ಚು ಕಾಲ ಬಿಡ್ಡಿಂಗ್ ನಡೆಯಲಿದೆ.

ಭಾರತದ ಮುಖ್ಯಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್ ಅರ್ಜಿ?ಭಾರತದ ಮುಖ್ಯಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್ ಅರ್ಜಿ?

ಲವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್‌ಗೆ ಸೆಪ್ಟೆಂಬರ್‌ 17ರ ಶುಕ್ರವಾರ 1.92 ಕೋಟಿ ರೂ. ಮೌಲ್ಯ ಲಭಿಸಿತ್ತು. ಇದರ ಮೂಲಬೆಲೆ 80 ಲಕ್ಷ ರೂ. ಆಗಿತ್ತು. ಅತ್ಯಧಿಕ ಬಿಡ್ಡಿಂಗ್ ನಡೆದಿದ್ದೆಂದರೆ ನೀರಜ್ ಅವರ ಬಾವೆಲಿನ್‌ಗೆ. 1 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದ್ದ ಜಾವೆಲಿನ್‌ಗೆ 1.55 ಕೋಟಿ ರೂ. ಬಿಡ್ಡಿಂಗ್ ನಡೆದಿದೆ. ಇನ್ನೂ 19 ದಿನಗಳ ಕಾಲ ಬಿಡ್ಡಿಂಗ್ ನಡೆಯಲಿದೆ.

ಟೋಕಿಯೋದಲ್ಲಿ ಪದಕ ಗೆದ್ದ ಬಳಿಕ ಅಥ್ಲೀಟ್‌ಗಳೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮೋದಿ ಅಥ್ಲೀಟ್‌ಗಳನ್ನು ಅಭಿನಂದಿಸುವಾಗ ಲವ್ಲಿನಾ ಬೋರ್ಗೋಹೈನ್ ಅವರಲ್ಲಿ ನಿಮ್ಮ ಗ್ಲೌಸ್ ಅನ್ನು ನಾನು ಹರಾಜಿಗಿಡಬಹುದೇ ಎಂದು ಪ್ರಶ್ನಿಸಿದ್ದರು. ನೀರಜ್ ಅವರಲ್ಲೂ ಜಾವೆಲಿನ್ ಹರಾಜಿಗಿಡಲು ಕೊಡುವಂತೆ ಮೋದಿ ಕೇಳಿದ್ದರು.

ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ ಕೆಕೆಆರ್ ಸ್ಟಾರ್ ಆ್ಯಂಡ್ರೆ ರಸೆಲ್ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ ಕೆಕೆಆರ್ ಸ್ಟಾರ್ ಆ್ಯಂಡ್ರೆ ರಸೆಲ್

ಮೋದಿ ಅವರು ಪದಕ ವಿಜೇತ ಅಥ್ಲೀಟ್‌ಗಳಲ್ಲಿ ಅವರ ಕ್ರೀಡಾ ಸಾಮಾಗ್ರಿಗಳನ್ನು ಹರಾಜಿಗಿಡುವಂತೆ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ಅನೇಕರು ಪ್ರಧಾನಿಯನ್ನುದ್ದೇಶಿಸಿ ತಮಾಷೆ ಮಾಡಿದ್ದರು. ದೇಶದ ಸಂಪತ್ತನ್ನೆಲ್ಲಾ ಸಿರಿವಂತರಿಗೆ ಮಾರುತ್ತಿರುವ ಮೋದಿ ಒಲಿಂಪಿಕ್ಸ್ ಪದಕ ವಿಜೇತ ಅಥ್ಲೀಟ್‌ಗಳನ್ನೂ ಬಿಡುತ್ತಿಲ್ಲವಲ್ಲ ಎಂದು ಅನೇಕರು ಟ್ರೋಲ್ ಮಾಡಿದ್ದರು. ಅಂದ್ಹಾಗೆ, ಬಿಡ್ಡಿಂಗ್‌ನಿಂದ ಬಂದ ಹಣವನ್ನು ನಮಾಮಿ ಗಂಗೆ ಮಿಶನ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

Story first published: Saturday, September 18, 2021, 19:25 [IST]
Other articles published on Sep 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X