ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಪದಕಗಳ ಗೆದ್ದ ಅಪ್ರತಿಮ ಛಲಗಾರ ಮಲ್ಲಪ್ಪ ಪೂಜಾರ್

By ಧಾರವಾಡ ಪ್ರತಿನಿಧಿ
Mallappa Pujar won two international medals in Dubai

ಧಾರವಾಡ, ನವೆಂಬರ್‌ 17: ಗುರುವಿಲ್ಲದೇ ಸಾಧನೆ ಮಾಡಿ, ಇತಿಹಾಸ ಬರೆದ ಛಲಗಾರ ಏಕಲವ್ಯ. ಇಲ್ಲೊಬ್ಬ ಕಾರ್ಮಿಕನೂ ಕೂಡ ಗುರುವಿಲ್ಲದೇ ಹೊರ ದೇಶ ದುಬೈನಲ್ಲಿ ಭಾರತದ ಬಾವುಟ ಹಾರಿಸಿದ್ದಾರೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನ 5 ಕಿ.ಮೀ ಓಟದಲ್ಲಿ ಚಿನ್ನ, 10 ಕಿ.ಮೀ ಓಟದಲ್ಲಿ ಬೆಳ್ಳಿ ಪದಕ ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾನೆ. ‌

ಐಪಿಎಲ್ 2020: ಎಲ್ಲಾ ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿಐಪಿಎಲ್ 2020: ಎಲ್ಲಾ ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ

ಧಾರವಾಡದಲ್ಲಿ ಟಾಟಾ ಮಾರ್ಕೊಪೊಲೊದಲ್ಲಿ ಕಾರ್ಮಿಕ ನಾಗಿ ಕೆಲಸ ಮಾಡುತ್ತಿರುವ ಜಿಲ್ಲೆಯ ನಿವಾಸಿ ಮಲ್ಲಪ್ಪ ಪೂಜಾರ್ ಅವರಿಗೆ, ಮೊದಲಿನಿಂದಲೂ ಅಥ್ಲೆಟಿಕ್ಸ್‌ ಅಂದ್ರೆ ಇಷ್ಟ. ಹೀಗಾಗಿ ಕೆಲಸದ ಒತ್ತಡದ ನಡುವೆಯೂ ಶ್ರಮವಹಿಸಿ ಅಥ್ಲೆಟಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ 3 ರಾಷ್ಟ್ರೀಯ ಹಾಗೂ 2 ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದಾರೆ.

Mallappa Pujar won two international medals in Dubai


ದುಬೈನಲ್ಲಿ ನವೆಂಬರ್ 8ರಂದು ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಡದ, ಪುರುಷರ 5 ಕಿ.ಮೀ. ಓಟದಲ್ಲಿ ಪ್ರಥಮ ಸ್ಥಾನ, 10 ಕಿ.ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರಮವಾಗಿ ಚಿನ್ನ, ಬೆಳ್ಳಿ ಪದಕಗಳನ್ನು ಮಲ್ಲಪ್ಪ ಕೊರಳಿಗೇರಿಸಿಕೊಂಡಿದ್ದಾರೆ. ಮಲ್ಲಪ್ಪ ಸಾಧನೆಗೆ ಅವರ ಜೊತೆ ದುಡಿಯೋ ಸಹ ಕಾರ್ಮಿಕರೂ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?

ದುಬೈನಲ್ಲಿ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ (ಎಸ್‌ಬಿಕೆಎಫ್‌) ಸಹಯೋಗದೊಂದಿಗೆ ಜಾಮ್ ಸ್ಪೋರ್ಟ್ಸ್ ಆಯೋಜಿಸಿದ್ದ ಯುನೈಟೆಡ್ ಇಂಟರ್‌ ನ್ಯಾಷನಲ್ ಗೇಮ್ಸ್‌ನಲ್ಲಿ ವಿವಿಧ ದೇಶಗಳ ಅನೇಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ದೇಶಕ್ಕಾಗಿ ಪದಕ ಗೆದ್ದ ಬಡ ಕ್ರೀಡಾಪಟು ಮಲ್ಲಪ್ಪ ಅವರನ್ನು ಜಿಲ್ಲಾಡಳಿತ, ರಾಜ್ಯ ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕಿದೆ.

Story first published: Saturday, November 16, 2019, 19:42 [IST]
Other articles published on Nov 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X