ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಕೋಚ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಟಿಟಿ ಸುಂದರಿ ಮಣಿಕಾ ಬಾತ್ರಾ!

Manika Batra says, national coach asked her to concede match during Tokyo Olympics qualifiers

ನವದೆಹಲಿ: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಟೇಬಲ್ ಟೆನಿಸ್ ರಾಷ್ಟ್ರೀಯ ಕೋಚ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಅರ್ಹತಾ ಪಂದ್ಯವೊಂದರ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಅವರು ತಾನು ಪಂದ್ಯ ಬಿಟ್ಟುಕೊಡುವಂತೆ ಹೇಳಿದ್ದರು ಎಂದಿದ್ದಾರೆ. ಇದೇ ಕಾರಣಕ್ಕೆ ಟೋಕಿಯೋ ಒಲಿಂಪಿಕ್ಸ್ ವೇಳೆ ತನಗೆ ರಾಷ್ಟ್ರೀಯ ಕೋಚ್ ವಿರುದ್ಧ ಅಸಮಾಧಾನವಿತ್ತು ಎಂದು ಮಣಿಕಾ ಹೇಳಿದ್ದಾರೆ.

ಕಂಠೀರವ ಸ್ಟೇಡಿಯಂನ ಜಿಮ್ನ್ಯಾಸ್ಟಿಕ್ಸ್ ವಿಭಾಗದಲ್ಲಿ ಅವ್ಯವಸ್ಥೆ: ರಾಷ್ಟ್ರೀಯ ಕ್ರೀಡಾಪಟು ಆರೋಪಕಂಠೀರವ ಸ್ಟೇಡಿಯಂನ ಜಿಮ್ನ್ಯಾಸ್ಟಿಕ್ಸ್ ವಿಭಾಗದಲ್ಲಿ ಅವ್ಯವಸ್ಥೆ: ರಾಷ್ಟ್ರೀಯ ಕ್ರೀಡಾಪಟು ಆರೋಪ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಣಿಕಾ ಪಂದ್ಯದ ವೇಳೆ ತನಗೆ ರಾಷ್ಟ್ರೀಯ ಕೋಚ್‌ನ ಅಗತ್ಯವಿಲ್ಲ ಎಂದಿದ್ದರು. ಇದಕ್ಕೆ ಕಾರಣ ವಿವರಿಸಿರುವ ಮಣಿಕಾ, ರಾಷ್ಟ್ರೀಯ ಕೋಚ್ ವಿರುದ್ಧ ಫಿಕ್ಸಿಂಗ್‌ಗೆ ಯತ್ನದ ಆರೋಪ ಹೊರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಅರ್ಹತಾ ಪಂದ್ಯದ ವೇಳೆ ತನ್ನನ್ನು ಪಂದ್ಯ ಬಿಟ್ಟುಕೊಡಲು ರಾಷ್ಟ್ರೀಯ ಕೋಚ್ ಹೇಳಿದ್ದರು ಎಂದು ಮಣಿಕಾ ತಿಳಿಸಿದ್ದಾರೆ.

ಏನಾಗಿತ್ತು ಟೋಕಿಯೋ ಒಲಿಂಪಿಕ್ಸ್ ವೇಳೆ?

ಏನಾಗಿತ್ತು ಟೋಕಿಯೋ ಒಲಿಂಪಿಕ್ಸ್ ವೇಳೆ?

ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಮಣಿಕಾ ಬಾತ್ರಾ ವಿವಾದದ ಕೇಂದ್ರಬಿಂದುವಾಗಿದ್ದರು. ಮಣಿಕಾ ಬಾತ್ರಾ ಅವರ ವೈಯಕ್ತಿಕ ಕೋಚ್ ಸನ್ಮಯ್ ಪರಂಜ್ಪೆ ಅವರಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಭ್ಯಾಸದ ವೇಳೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಪಂದ್ಯದ ವೇಳೆ ಕ್ರೀಡಾಂಗಣ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸ್ಪರ್ಧೆಯ ವೇಳೆ ಪರಂಜ್ಪೆಗೆ ಅವಕಾಶ ನೀಡಬೇಕೆಂದು ಮಣಿಕಾ ಒತ್ತಾಯಿಸಿದರಾದರೂ ಆಯೋಜಕರು ಇದಕ್ಕೆ ಸಮ್ಮತಿಸಲಿಲ್ಲ. ಯಾಕೆಂದರೆ ಒಲಿಂಪಿಕ್ಸ್‌ನಂತ ದೊಡ್ಡ ಕ್ರೀಡಾಕೂಟಗಳ ವೇಳೆ ರಾಷ್ಟ್ರೀಯ ಕೋಚ್‌ಗೆ ಸ್ಪರ್ಧೆ ನಡೆಯುತ್ತಿರುವ ವೇಳೆ ಪ್ಲೇಯರ್‌ಗೆ ಸಲಹೆ, ಮಾರ್ಗದರ್ಶನ ನೀಡಲು ಅವಕಾಶವಿದೆಯೇ ಹೊರತು ವೈಯಕ್ತಿಕ ಕೋಚ್‌ಗಳ ಸಹಾಯ ಪಡೆದುಕೊಳ್ಳಲು ಪ್ಲೇಯರ್‌ಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವಾಗ ವೈಯಕ್ತಿಕ ಕೋಚ್ ಪ್ರವೇಶಕ್ಕೆ ಹೆಚ್ಚಿನ ಸಾರಿ ಅವಕಾಶ ಮಾಡಿಕೊಡಲ್ಲ. ಆದರೆ ಇದು ಮಣಿಕಾಗೆ ಅಸಮಾಧಾನ ಮೂಡಿಸಿತ್ತು.

ಪಂದ್ಯಗಳ ವೇಳೆ ರಾಷ್ಟ್ರೀಯ ಕೋಚ್‌ನ ಅಗತ್ಯವಿಲ್ಲ ಎಂದಿದ್ದ ಮಣಿಕಾ

ಪಂದ್ಯಗಳ ವೇಳೆ ರಾಷ್ಟ್ರೀಯ ಕೋಚ್‌ನ ಅಗತ್ಯವಿಲ್ಲ ಎಂದಿದ್ದ ಮಣಿಕಾ

ಟೋಕಿಯೋ ಒಲಿಂಪಿಕ್ಸ್ ಪಂದ್ಯಗಳ ವೇಳೆ ವೈಯಕ್ತಿಕ ಕೋಚ್ ಸನ್ಮಯ್ ಪರಂಜ್ಪೆ ಅವರಿಗೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನಗೊಂಡ ಮಣಿಕಾ, ಪಂದ್ಯಗಳ ವೇಳೆ ತನಗೆ ರಾಷ್ಟ್ರೀಯ ಕೋಚ್‌ ಜೊತೆಗಿರುವುದರ ಅಗತ್ಯವಿಲ್ಲ ಎಂದಿದ್ದರು. ಮಣಿಕಾ ಈ ವರ್ತನೆ ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ಬೇಡ ಎಂದಿದ್ದ ಮಣಿಕಾ ಬಳಿಕ ಮಹಿಳಾ ಸಿಂಗಲ್ಸ್ 32ನೇ ಸುತ್ತಿಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರಾದರೂ ಮುಂದಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು.ಟೋಕಿಯೋ ಒಲಿಂಪಿಕ್ಸ್ ಟೇಬಲ್ ಟೆನಿಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಮಣಿಕಾ ಬಾತ್ರಾ ಅವರು ಆಸ್ಟ್ರಿಯಾದ ಸೋಫಿಯಾ ಪೋಲ್ಕನೋವಾ ಎದುರು 0-4 (8-11, 2-11, 5-11, 7-11)ರ ಅಂತರದ ಸೋಲನುಭವಿಸಿದ್ದಾರೆ. ಇಬ್ಬರ ಮಧ್ಯೆ 27 ನಿಮಿಷಗಳ ಕದನ ನಡೆದಿತ್ತು.

ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ್ದ ರಾಷ್ಟ್ರೀಯ ಕೋಚ್

ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ್ದ ರಾಷ್ಟ್ರೀಯ ಕೋಚ್

ಟೋಕಿಯೋ ಒಲಿಂಪಿಕ್ಸ್ ವೇಳೆ ನಿಯಮ ಮೀರಿ ವರ್ತಿಸಿದ್ದಕ್ಕಾಗಿ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಮಣಿಕಾಗೆ ಶೋಕಾಸ್ ನೋಟಿಸ್ ನೀಡಿತ್ತು. ತನ್ನ ವರ್ತನೆಗೆ ಉತ್ತರಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಹೀಗಾಗಿ ತನ್ನ ಅಂದಿನ ವರ್ತನಗೆ ಉತ್ತರಿಸಿದ ಮಣಿಕಾ, "ಮಾರ್ಚ್ 2021ರಲ್ಲಿ ದೋಹಾದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ವಾಲಿಫಿಕೇಶನ್ ಟೂರ್ನಿ ವೇಳೆ ನನಗೂ ರಾಷ್ಟ್ರೀಯ ಕೋಚ್‌ಸೌಮ್ಯದೀಪ್ ರಾಯ್ ಅವರ ವಿದ್ಯಾರ್ಥಿಗೂ ಪಂದ್ಯವಿದ್ದಾಗ ಆತ ನಾನು ಪಂದ್ಯ ಸೋಲುವಂತೆ ಒತ್ತಡ ಹೇರಿದ್ದ. ತನ್ನ ವಿದ್ಯಾರ್ಥಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಬೇಕೆಂದು ಆತ ಹೀಗೆ ಮಾಡಿದ್ದರು. ಒಂದರ್ಥದಲ್ಲಿ ಇದು ಮ್ಯಾಚ್ ಫಿಕ್ಸಿಂಗ್ ಇದ್ದಂತೆ," ಎಂದು ಮಣಿಕಾ ವಿವರಿಸಿದ್ದಾರೆ. ಅಂದ್ಹಾಗೆ, ಮಣಿಕಾ ಆರೋಪದ ಬಗ್ಗೆ ಟಿಟಿ ಫೆಡರೇಶನ್ ತನಿಖೆ ನಡೆಸಲಿದೆ.

Story first published: Sunday, September 5, 2021, 1:48 [IST]
Other articles published on Sep 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X