ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮಣಿಕಾ ಬಾತ್ರಾ, ಶರತ್ ಕಮಲ್

Manika Batra, Sharath Kamal qualify for mixed doubles event at Tokyo Olympics

ದೋಹಾ: ಕತಾರ್‌ನ ದೋಹಾದಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಟೇಬಲ್ ಟೆನಿಸ್ ಮಿಕ್ಸ್ಡ್‌ ಜೋಡಿಯಾದ ಮಣಿಕಾ ಬಾತ್ರಾ ಮತ್ತು ಶರತ್ ಕಮಲ್ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೇಬಲ್ ಟೆನಿಸ್ ಮಿಕ್ಸ್ಡ್‌ ಡಬಲ್ಸ್‌ನಲ್ಲಿ ಇಬ್ಬರೂ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಖಾತರಿಪಡಿಸಿಕೊಂಡಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ಕೊಟ್ಟ ಕನ್ನಡಿಗ ಪ್ರಸಿದ್ಧ್ ಕೃಷ್ಣ!ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ಕೊಟ್ಟ ಕನ್ನಡಿಗ ಪ್ರಸಿದ್ಧ್ ಕೃಷ್ಣ!

ಶನಿವಾರ (ಮಾರ್ಚ್ 20) ನಡೆದ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಟೇಬಲ್ ಟೆನಿಸ್ ಮಿಕ್ಸ್ಡ್‌ ಡಬಲ್ಸ್‌ ವಿಶ್ವ ನಂ.19 ಶ್ರೇಯಾಂಕದ ಮಣಿಕಾ ಬಾತ್ರ ಮತ್ತು ಶರತ್ ಕಮಲ್ ಜೋಡಿ, ವಿಶ್ವ ನಂ.8 ಕೊರಿಯನ್ ಜೋಡಿಯಾದ ಸಾಂಗ್-ಸು ಲೀ ಮತ್ತು ಜಿಹೀ ಜೀನ್ ವಿರುದ್ಧ ಗೆಲುವು ಕಂಡಿದೆ.

ಆರಂಭಿಕ ಎರಡು ಸೆಟ್‌ಗಳಲ್ಲಿ ಭಾರತೀಯ ಜೋಡಿ 8-11, 6-11ರ ಅಂತರದಲ್ಲಿ ಸೋತು ಪರಾಭವದ ಭೀತಿ ಎದುರಿಸಿತ್ತು. ಆದರೆ ಮುಂದಿನ ನಾಲ್ಕು ಸೆಟ್‌ಗಳಲ್ಲಿ 11-5, 11-6, 13-11, 11-8ರ ಗೆಲುವು ದಾಖಲಿಸುವುದರೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ವಿಜೇಂದರ್ vs ಲೋಪ್ಸನ್: 'ಬ್ಯಾಟಲ್‌ ಆನ್‌ ಶಿಪ್‌' ರೋಚಕ ವಿಡಿಯೋ!ವಿಜೇಂದರ್ vs ಲೋಪ್ಸನ್: 'ಬ್ಯಾಟಲ್‌ ಆನ್‌ ಶಿಪ್‌' ರೋಚಕ ವಿಡಿಯೋ!

2018ರ ಏಷ್ಯನ್ ಗೇಮ್ಸ್‌ನಲ್ಲಿ ಮಣಿಕಾ-ಶರತ್ ಜೋಡಿ ಕಂಚಿನ ಪದಕ ಗೆದ್ದಿತ್ತು. ಭಾರತೀಯ ಟೇಬಲ್ ಟೆನಿಸ್ ಆಟಗಾರರಾದ ಸತಿಯನ್ ಜ್ಞಾನಶೇಖರನ್ ಮತ್ತು ಸುತೀರ್ಥಾ ಮುಖರ್ಜೀ ಕೂಡ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.

Story first published: Saturday, March 20, 2021, 16:16 [IST]
Other articles published on Mar 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X