ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್ ಗೇಮ್ಸ್: ಶೂಟಿಂಗ್ ನಲ್ಲಿ ಚಿನ್ನ ಗೆದ್ದ 16ರ ಮಧು ಭಾಕೇರ್

Manu Bhaker, all of 16, runs away with 10m pistol gold

ಬೆಂಗಳೂರು, ಏಪ್ರಿಲ್ 08: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನ ನಾಲ್ಕನೇ ದಿನದ ಆರಂಭದಲ್ಲೇ 16ರ ಹರೆಯದ ಮನು ಭಾಕೇರ್, ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಹೀನಾ ಸಿಧು ಎರಡನೆಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಒಂದೇ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕ ಬಂದಿರುವುದು ವಿಶೇಷ.

ಕಾಮನ್ ವೆಲ್ತ್ : ವೇಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಪೂನಮ್ಕಾಮನ್ ವೆಲ್ತ್ : ವೇಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಪೂನಮ್

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕೇರ್ 240.9 ಅಂಕಗಳನ್ನು ಪಡೆಯುವ ಮೂಲಕ ಚಿನ್ನ ಗೆದ್ದರು. ಹಿರಿಯ ಶೂಟರ್ ಹೀನಾ ಸಿಧು 234 ಅಂಕ ಪಡೆದು ಬೆಳ್ಳಿ ಗೆದ್ದರು.

ಆಸ್ಟ್ರೇಲಿಯಾದ ಎಲೆನಾ ಗಾಲಿಯಾಬೊವಿಚ್ 214.9 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.

ಮೆಕ್ಸಿಕೊದ ಗೌದಲಜರಾ ಐಎಸ್ಎಸ್ಎಫ್ ವಿಶ್ವಕಪ್‌ ಮತ್ತು ಸಿಡ್ನಿಯಲ್ಲಿ ನಡೆದ ಜೂನಿಯರ್ ವಿಶ್ವಕಪ್‌ನಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದ ಮಧು ಭಾಕೇರ್ ಎಲ್ಲರ ಗಮನ ಸೆಳೆದಿದ್ದರು.

ಹರಿಯಾಣದ ಝಾಜ್ಜರ್ ಜಿಲ್ಲೆಯವರಾದ ಮಧು, ಮೆಕ್ಸಿಕೊದಲ್ಲಿನ ಕ್ರೀಡಾಕೂಟದ ಪದಾರ್ಪಣೆಯಲ್ಲಿಯೇ ಸಂಚಲನ ಮೂಡಿಸಿದ್ದರು.

ಕಾಮನ್‌ವೆಲ್ತ್‌: ಎರಡನೇ ದಿನ ಎರಡು ಪದಕ, ಹಲವು ಗೆಲುವುಕಾಮನ್‌ವೆಲ್ತ್‌: ಎರಡನೇ ದಿನ ಎರಡು ಪದಕ, ಹಲವು ಗೆಲುವು

ಆರಂಭಿಕ ಸುತ್ತಿನಲ್ಲಿ ಗುರಿ ತಲುಪುವಲ್ಲಿ ವಿಫಲರಾಗಿದ್ದ ಸಿಧು, ಬಳಿಕ ನಿಯಂತ್ರಣ ಪಡೆದುಕೊಂಡು ಎರಡನೆಯ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲರಾದರು. ದೆಹಲಿಯಲ್ಲಿ 2010ರಲ್ಲಿ ನಡೆದ ದೆಹಲಿ ಗೇಮ್ಸ್ ನಲ್ಲಿ ಕೂಡ ಅವರು ಬೆಳ್ಳಿ ಗೆದ್ದಿದ್ದರು. ಆ ಕ್ರೀಡಾಕೂಟದಲ್ಲಿ ಮಧು ಮತ್ತು ಹೀನಾ ಸಿಧು ಇಬ್ಬರೇ ಶೂಟಿಂಗ್ ವಿಭಾಗದಲ್ಲಿ ಭಾರತದ ಭರವಸೆಗಳಾಗಿ ಉಳಿದಿದ್ದರು.

ಎಡವಿದರೂ ಗೆದ್ದ ಹೀನಾ ಸಿಧು
ಹೀನಾ ಸಿಧು ಅವರು ಕ್ರೀಡಾಕೂಟಕ್ಕೆ ತೆರಳುವ ಮುನ್ನವೇ ವಿವಾದದಲ್ಲಿ ಸಿಲುಕಿದ್ದರು. ಅವರ ತರಬೇತುದಾರರೂ ಆಗಿರುವ ಪತಿ ರೋನಕ್ ಪಂಡಿತ್ ಅವರಿಗೆ ಮಾನ್ಯತೆ ನೀಡಲು ಆರಂಭದಲ್ಲಿ ಕ್ರೀಡಾ ಸಚಿವಾಲಯ ನಿರಾಕರಿಸಿದ್ದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

ಪಂದ್ಯದ ಆರಂಭದಲ್ಲಿ ಸಿಧು ಎಡವಿದ್ದರು. ಪಂದ್ಯದಿಂದ ಹೊರಬೀಳುವ ಹಂತಕ್ಕೆ ತಲುಪಿದ್ದರು. ಆದರೆ, ಬಳಿಕ ತೀವ್ರ ಹೋರಾಟ ನಡೆಸಿದ ಅವರು ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದರು.

Story first published: Sunday, April 8, 2018, 12:00 [IST]
Other articles published on Apr 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X