ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಭಾರತ ನೀರಸ ಪ್ರದರ್ಶನ: ಭಾಕರ್, ಮಿಥಾರ್ವಾಲ್ ಗೆ ನಾಲ್ಕನೇ ಸ್ಥಾನ

Manu Bhaker, Om Mitharval Finish 4th After Shooting Qualification World Record

ಚಾಂಗ್ವಿನ್ (ದಕ್ಷಿಣ ಕೊರಿಯಾ), ಏ. 27: ಭಾರತದ ಶೂಟಿಂಗ್ ಜೋಡಿ ಮನು ಭಾಕರ್ ಮತ್ತು ಓಂ ಮಿಥಾರ್ವಾಲ್ ಅವರು ದಕ್ಷಿಣ ಕೊರಿಯಾದ ಚಾಂಗ್ವಿನ್ ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್‌ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್ಎಸ್ಎಫ್) ವರ್ಲ್ಡ್ ಕಪ್ ಸ್ಪರ್ಧೆಯ 10 ಮೀ. ಮಿಕ್ಸ್ಡ್ ಟೀಮ್ ಏರ್ ಪಿಸ್ತೂಲ್ ನಲ್ಲಿ ವಿಶ್ವ ದಾಖಲೆ ಅರ್ಹತಾ ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ಗುರುವಾರದ ಸ್ಪರ್ಧೆಯ ಫಲಿತಾಂಶವನ್ನು ಪರಿಗಣಿಸಿದರೆ ವರ್ಲ್ಡ್ ಕಪ್ ಶೂಟಿಂಗ್ ಎರಡನೇ ಹಂತದ ಸ್ಪರ್ಧೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ಲಭಿಸುತ್ತಿರುವುದು ಇದು ನಾಲ್ಕನೇ ಬಾರಿ.
ತಂಡವಿಭಾಗಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತದ ಜೋಡಿ ನಾಲ್ಕನೇ ಸ್ಥಾನದೊಂದಿಗೆ ನಿರ್ಗಮಿಸುವ ಮುನ್ನ ವಿಶ್ವ ದಾಖಲೆಯ ಅರ್ಹತಾ ಸಾಧನೆ ಮಾಡಿತು.

ಈ ವಿಭಾಗದ ಫೈನಲ್ ನಲ್ಲಿ ಒಟ್ಟು 487.7 ಅಂಕಗಳನ್ನು ಸಂಪಾದಿಸಿದ ಚೀನಾದ ಕ್ಸಿಯಾಜಿಂಗ್ ಜಿ ಮತ್ತು ಜಿಯಾಯು ವು ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಇನ್ನು ಬೆಳ್ಳಿ ಪದಕ ಜರ್ಮನ್ ನ ಕ್ರಿಸ್ಚಿಯನ್ ಮತ್ತು ಸಾಂಡ್ರಾ ರೀಟ್ಸ್ ಪಾಲಾದರೆ, ಸರ್ಬಿಯಾದ ದಮೀರ್ ಮಿಕೇಕ್-ಝೊರಾನಾ ಅರುನೋವಿಕ್ ಜೋಡಿ ಕಂಚು ತನ್ನದಾಗಿಸಿತು.

ಎಂಟು ಭಾರತೀಯರಿದ್ದ ಶೂಟಿಂಗ್ ತಂಡವು ತಂಡ ಪ್ರಶಸ್ತಿಯನ್ನು ಸೇರಿಸಿ ಒಟ್ಟು ಏಳು ಫೈನಲ್ ಸ್ಪರ್ಧೆಗಳಿಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆದರೆ ಪುರುಷರ 10ಮೀ. ಏರ್ ಪಿಸ್ತೂಲ್ ನಲ್ಲಿ ಭಾರತದ ಶಹಜರ್ ರಿಜ್ವಿ ಬೆಳ್ಳಿ ಜಯಿಸಿದ್ದುಬಿಟ್ಟರೆ ಬೇರೆ ಪದಕಗಳು ಭಾರತಕ್ಕೆ ಒಲಿದಿಲ್ಲ. ಈ ಶೂಟಿಂಗ್ ಕೂಟದಲ್ಲಿ ಭಾರತ ಪರ ಮೊದಲ ಪದಕ ಖಾತೆ ತೆರೆದ ಕೀರ್ತಿಯೂ ರಿಜ್ವಿ ಅವರಿಗೇ ಸಲ್ಲುತ್ತದೆ.

ಇನ್ನುಳಿದಂತೆ ಭಾರತದ ಸಂಜೀವ್ ರಜಪೂತ್ 8ನೇ, ಯುವ ಶೂಟರ್ ಗಳಾದ ಅಖಿಲ್ ಶಿಯೋರನ್ 17ನೇ ಮತ್ತು ಸ್ವಪ್ನಿಲ್ ಕುಸಾಲ್ 24ನೇ ಸ್ಥಾನ ಪಡೆದಿದ್ದಾರೆ.

Story first published: Friday, April 27, 2018, 13:19 [IST]
Other articles published on Apr 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X