ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವಕಪ್ ಫೈನಲ್ಸ್‌ನಲ್ಲಿ ಬಂಗಾರ ಗೆದ್ದು ಇತಿಹಾಸ ಬರೆದ ಮನು ಭಾಕರ್

Manu Bhaker wins gold in World Cup Finals

ಪುಟಿಯನ್, ನವೆಂಬರ್ 21: ಚೀನಾದ ಪುಟಿಯನ್‌ನಲ್ಲಿ ನಡೆದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಫೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್‌) ವಿಶ್ವಕಪ್ ಫೈನಲ್ಸ್‌ ಟೂರ್ನಿಯಲ್ಲಿ ಭಾರತದ ಮನು ಭಾಕರ್ ಮಹಿಳಾ ವಿಭಾಗದ 10 ಮೀ. ಏರ್ ಪಿಸ್ತೂಲ್‌ನಲ್ಲಿ ಭಾರತಕ್ಕೆ ಬಂಗಾರ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ವಿಂಡೀಸ್ ಸರಣಿಗೆ ಭಾರತ ತಂಡ: ಹೇಗಿರಲಿದೆ ಟೀಮ್ ಇಂಡಿಯಾ!ವಿಂಡೀಸ್ ಸರಣಿಗೆ ಭಾರತ ತಂಡ: ಹೇಗಿರಲಿದೆ ಟೀಮ್ ಇಂಡಿಯಾ!

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಫೈನಲ್ಸ್‌ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಲಭಿಸಿದ್ದು ಇದೇ ಮೊದಲಬಾರಿ. ಈಗಿನ್ನೂ ಕೇವಲ 17ರ ಹರೆಯದವರಾಗಿರುವ ಭಾಕರ್ 244.7 ಪಾಯಿಂಟ್ಸ್‌ನೊಂದಿಗೆ, ಸರ್ಬಿಯಾದ ಜೊರಾನಾ ಅರುನೋವಿಕ್ ಹಿಂದಿಕ್ಕಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಈ ವಿಭಾಗದಲ್ಲಿ ಬೆಳ್ಳಿ ಗೆದ್ದ ಜೊರಾನಾಗೆ 241.9 ಪಾಯಿಂಟ್ಸ್‌ ಲಭಿಸಿತ್ತು.

ಇದೇ ವಿಭಾಗದಲ್ಲಿ ಕಂಚಿನ ಪದಕ ಚೀನಾದ ಕ್ವಿಯಾನ್ ವಾಂಗ್ (221.8 ಪಾಯಿಂಟ್ಸ್) ಪಾಲಾಯಿತು. ಮನು ತಂಡದ ಸಹ ಆಟಗಾರ್ತಿ ಯಶಸ್ವಿನಿ ಸಿಂಗ್ ದೇಸ್ವಾಲ್ 6ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಪುರುಷರ ವಿಭಾಗದ 10 ಮೀ. ಏರ್ ಪಿಸ್ತೂಲ್‌ನಲ್ಲಿ ಅಭಿಷೇಕ್ ವರ್ಮಾ ಮತ್ತು ಸೌರಭ್ ಚೌಧರಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Story first published: Thursday, November 21, 2019, 12:39 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X