ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುವ ಶೂಟರ್‌ ಮನು ಭಾಕರ್‌ಗೆ ಟೋಕಿಯೊ ಒಲಿಂಪಿಕ್ಸ್‌ ಟಿಕೆಟ್‌!

Manu Bhaker wins Olympic quota in Air Pistol

ಮ್ಯೂನಿಚ್‌, ಮೇ 29: ಭಾರತದ ಪ್ರತಿಭಾನ್ವಿತ ಯುವ ಶೂಟರ್‌ ಮನು ಭಾಕರ್‌, ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ ಟೂರ್ನಿಯ ಮಹಿಳಾ ಪಿಸ್ತೂಲ್‌ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದರೂ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ 7ನೇ ಕೋಟಾ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಪ್ರಿಡಿಕ್ಷನ್‌

ಪ್ರಬಲ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಒಟ್ಟಾರೆ 201.0 ಅಂಕಗಳನ್ನು ಗಳಿಸಿದ 17 ವರ್ಷದ ಚಾಂಪಿಯನ್‌ ಶೂಟರ್‌, ಕೂದಲೆಳೆ ಅಂತರದಲ್ಲಿ ಕನಿಷ್ಠ ಕಂಚಿನ ಪದಕ ಗೆಲ್ಲುವುದರಿಂದ ವಂಚಿತರಾದರು. ಅರ್ಹತಾ ಸುತ್ತಿನಲ್ಲಿ ಭರ್ಜರಿಯಾಗಿ ಗುರಿ ಇಟ್ಟಿದ್ದ ಮನು, ಒಟ್ಟಾರೆ 582 ಅಂಕಗಳನ್ನು ಗಳಿಸುವ ಮೂಲಕ ಫೈನಲ್‌ ಸುತ್ತಿಗೆ ಮುನ್ನಡೆದಿದ್ದರು. ಅದರಲ್ಲೂ ಕೊನೆಯ ಎರಡು ಸುತ್ತಿನ ಸ್ಪರ್ಧೆಯಲ್ಲಿ 98 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದರು.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

ಇದಕ್ಕೂ ಮುನ್ನ 25 ಮೀ. ಪಿಸ್ತೂಲ್‌ ವಿಭಾಗದ ಸ್ಪರ್ಧೆಯಲ್ಲಿ ಮನು ಭಾಕರ್‌ ನಿರಾಸೆ ಅನುಭವಿಸಿದ್ದರು. ತಮ್ಮ ಪಿಸ್ತೂಲ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಶದ ಕಾರಣ ಅವರು 5ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಸೋಮವಾರ ರಾಹಿ ಸರ್ನೊಬತ್‌ ಚಿನ್ನ ಗೆದ್ದು ಒಲಿಂಪಿಕ್‌ ಅರ್ಹತೆ ಪಡೆದುಕೊಂಡಿದ್ದರು.

ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್‌ ಮಾಡಲಿ ಇಲ್ಲಿ ಕ್ಲಿಕ್‌ ಮಾಡಿ

ಅಂದಹಾಗೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಲಭ್ಯವಿರುವ 17ರಲ್ಲಿನ 12 ಕೋಟಾಗಳಿಗಾಗಿ ಭಾರತೀಯ ಶೂಟರ್‌ಗಳು ಪೈಪೋಟಿ ನಡೆಸುತ್ತಿದ್ದಾರೆ. ಭಾಕರ್‌ ಮತ್ತು ರಾಹಿ ಹೊರತಾಗಿ ಈಗಾಗಲೇ ರೈಫಲ್‌ ಮತ್ತು ಪಿಸ್ತೂಲ್‌ ವಿಭಾಗಗಳಲ್ಲಿ ಭಾರತೀಯ ಶೂಟರ್‌ಗಳು 5 ಸ್ಥಾನವನ್ನು ಖಚಿತ ಪಡಿಸಿಕೊಂಡಿದ್ದಾರೆ. ಚಾಂಡೇಲಾ ಮತ್ತು ಅಂಜುಮ್‌ ಮುದ್ಗಿಲ್‌ ಒಲಿಂಪಿಕ್ಸ್‌ಗೆ ಭಾರತೀಯರ ಕೋಟಾ ಗಿಟ್ಟಿಸಿದ ಮೊದಲ ಶೂಟರ್‌ಗಳಾದರೆ, ಬಳಿಕ ಸೌರಭ್‌ ಚೌಧರಿ, ದಿವ್ಯಾನ್ಷ್‌ ಸಿಂಗ್‌ ಪನ್ವರ್‌ ಮತ್ತು ಅಭಿಶೇಕ್‌ ವರ್ಮಾ ಕೋಟಾ ಪಡೆಯುವಲ್ಲಿ ಯಶಸ್ವಿಯಾದರು.

Story first published: Wednesday, May 29, 2019, 23:47 [IST]
Other articles published on May 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X