ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್ : ಮರಿಯಾ ಶರಪೋವಾಗೆ ಸಿಕ್ತು ವೈಲ್ಡ್ ಕಾರ್ಡ್

By Mahesh

ನ್ಯೂಯಾರ್ಕ್, ಆಗಸ್ಟ್ 16:ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾಗೆ ಯುಎಸ್ ಓಪನ್ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಲಭ್ಯವಾಗಿದೆ.

ಟೆನಿಸ್: ಮರಿಯಾ ಶರಪೋವಾಗೆ 2 ವರ್ಷ ಅಮಾನತು ಶಿಕ್ಷೆಟೆನಿಸ್: ಮರಿಯಾ ಶರಪೋವಾಗೆ 2 ವರ್ಷ ಅಮಾನತು ಶಿಕ್ಷೆ

ಆಗಸ್ಟ್ 28 ರಂದು ಆರಂಭವಾಗಲಿರುವ ಈ ಋತುವಿನ ಕೊನೆಯ ಗ್ರಾನ್‌ ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್ ನಲ್ಲಿ ಆಡಲು ವೈಲ್ಡ್‌ಕಾರ್ಡ್ ಪ್ರವೇಶ ನೀಡಲಾಗಿದೆ ಎಂದು ಟೂರ್ನಿಯ ಆಯೋಜಕರು ದೃಢಪಡಿಸಿದ್ದಾರೆ. ಉದ್ದೀಪನ ಮದ್ದು ಸೇವನೆ ಅರೋಪದ ಮೇಲೆ ನಿಷೇಧಕ್ಕೊಳಗಾದ ಬಳಿಕ ಇದೇ ಮೊದಲ ಬಾರಿಗೆ ಗ್ರಾನ್ ಸ್ಲಾಮ್ ನಲ್ಲಿ ಮರಿಯಾ ಆಡಲಿದ್ದಾರೆ.

Maria Sharapova granted US Open wild card


ಸುಮಾರು 3.7 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ಹೊಂದಿರುವ ಯುಎಸ್ ಓಪನ್ ಟೆನಿಸ್ ಟೂರ್ನಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 10ರ ತನಕ ನಡೆಯಲಿದೆ.

30ರ ಹರೆಯದ ಶರಪೋವಾ ಅವರು 2016ರ ಜನವರಿಯಲ್ಲಿ ನಿಷೇಧಿತ ಉದ್ದೀಪನಾ ದ್ರವ್ಯ ಮೆಲ್ಡೊನಿಯಂ ಸೇವಿಸಿದ ಹಿನ್ನೆಲೆಯಲ್ಲಿ ನಿಷೇಧಕ್ಕೆ ಒಳಗಾಗಿದ್ದರು.15 ತಿಂಗಳ ಡೋಪಿಂಗ್ ನಿಷೇಧದ ಬಳಿಕ ವಿಂಬಲ್ಡನ್ ಗೆ ಎಂಟ್ರಿ ಕೊಡುವ ನಿರೀಕ್ಷೆಯಿತ್ತು. ಆದರೆ, ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು.

2004ರಲ್ಲಿ ವಿಂಬಲ್ಡನ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಸಾಧನೆ ಮಾಡಿದ ಶರಪೋವಾ ಅವರು ವಿಶ್ವದ ನಂ.1 ಆಟಗಾರ್ತಿಯಾಗಿ ಮೆರೆದವರು. ಟೆನಿಸ್ ಕ್ರೀಡೆಗೆ ಗ್ಲಾಮರ್ ಟಚ್ ತಂದವರು. ಐದು ಬಾರಿ ಗ್ರ್ಯಾನ್ ಸ್ಲಾಮ್ ವಿಜೇತೆ ಮರಿಯಾ ಅವರು ಈ ಬಾರಿ ಫ್ರೆಂಚ್ ಓಪನ್ ನಲ್ಲೂ ಆಡಿರಲಿಲ್ಲ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X