ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೇರಿ ಕೋಮ್ 'ಪದ್ಮ ವಿಭೂಷಣ', ಸಿಂಧು 'ಪದ್ಮಭೂಷಣ' ಪ್ರಶಸ್ತಿಗೆ ಆಯ್ಕೆ

Mary Kom, PV Sindhu among 9 women recommended for Padma awards

ನವದೆಹಲಿ, ಸೆ. 12: ಇದೇ ಮೊದಲ ಬಾರಿಗೆ ಮಹಿಳಾ ಕ್ರೀಡಾಪಟುಗಳ ಹೆಸರನ್ನು ಮಾತ್ರ ಪದ್ಮ ಪುರಸ್ಕಾರಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ. ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ವಿಶ್ವ ಬಾಕ್ಸಿಂಗ್​ ಚಾಂಪಿಯನ್ ಆಗಿ ಭಾರತದ ಕೀರ್ತಿ ಪತಾಕೆಯನ್ನು 6ಬಾರಿ ಹಾರಿಸಿರುವ ಮೇರಿ ಕೋಮ್ ಹೆಸರನ್ನು ಸೂಚಿಸಲಾಗಿದೆ. ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹೆಸರು ಪದ್ಮಭೂಷಣ ಪುರಸ್ಕಾರಕ್ಕೆ ಶಿಫಾರಸುಗೊಂಡಿದೆ.

ಒಟ್ಟಾರೆ, ಬಾಕ್ಸರ್ ಮೇರಿ ಕೋಮ್​, ಬಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೇರಿ 9 ಮಹಿಳಾ ಕ್ರೀಡಾಪಟುಗಳ ಹೆಸರನ್ನು ಪದ್ಮ ಪುರಸ್ಕಾರಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿ, ಕೇಂದ್ರ ಗೃಹ ಸಚಿವಾಲಯಕ್ಕೆ ಕಳಿಸಿದೆ. ಮುಂದಿನ ವರ್ಷದ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ವಿಜೇತರನ್ನು ಪ್ರಕಟಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮಿಕ್ಕಂತೆ, ಕುಸ್ತಿಪಟು ವಿನೇಶ್​ ಪೊಗಾಟ್​, ಟೇಬಲ್​ ಟೆನಿಸ್​ ತಾರೆ ಮಣಿಕಾ ಭಾತ್ರಾ, ಭಾರತದ ಟಿ20 ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​, ಹಾಕಿ ತಂಡದ ನಾಯಕಿ ರಾಣಿ ರಾಮ್​ಪಾಲ್​, ಮಾಜಿ ಶೂಟಿಂಗ್​ ತಾರೆ ಸುಮಾ ಶಿರೂರು, ಪರ್ವತಾರೋಹಿ ಅವಳಿ ಸಹೋದರಿಯರಾದ ತಾಷಿ ಮತ್ತು ನಂಗ್ಶಿ ಮಲಿಕ್​ ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಮೇರಿ ಕೋಮ್​ ಅವರು 2006ರಲ್ಲಿ ಪದ್ಮಶ್ರೀ ಹಾಗೂ 2013ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾಲ್ಕು ಕ್ರೀಡಾಪಟುಗಳಿಗೆ ಮಾತ್ರ ಇಲ್ಲಿ ತನಕ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2007ರಲ್ಲಿ ವಿಶ್ವನಾಥನ್​ ಆನಂದ್​, 2008ರಲ್ಲಿ ಸಚಿನ್​ ತೆಂಡೂಲ್ಕರ್​, 2008ರಲ್ಲಿ ಪರ್ವತಾರೋಹಿ ಸರ್​ ಎಡ್ಮಂಡ್​ ಹಿಲರಿ(ಮರಣೋತ್ತರ)ಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗುವ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮೇರಿ ಕೋಮ್ ಪಾತ್ರರಾಗುತ್ತಾರೆ.

2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದ ಬ್ಯಾಡ್ಮಿಂಟರ್​ ತಾರೆ ಪಿ.ವಿ. ಸಿಂಧು ಅವರ ಹೆಸರು 2017ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಇವರ ಹೆಸರು ಶಿಫಾರಸುಗೊಂಡಿತ್ತು. ಆದರೆ, ಅಂತಿಮ ಹಂತದಲ್ಲಿ ಪ್ರಶಸ್ತಿ ಕೈ ತಪ್ಪಿತ್ತು.

Story first published: Thursday, September 12, 2019, 14:09 [IST]
Other articles published on Sep 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X