ಮಿಲ್ಖಾ ಸಿಂಗ್‌ರ ಪತ್ನಿ ನಿರ್ಮಲಾ ಕೌರ್ ಕೋವಿಡ್‌-19ಗೆ ಬಲಿ

ಚಂಡೀಗಢ: ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್‌ ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ನಾಯಕಿಯಾಗಿದ್ದ ನಿರ್ಮಲಾ ಕೌರ್ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. ಮೊಹಾಲಿ ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಲಾ ಕೋವಿಡ್-19 ಸಂಬಂಧಿ ಸಮಸ್ಯೆಗೆ ಬಲಿಯಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಹೀನಾಯ ಸೋಲು; ಟೀಮ್ ಇಂಡಿಯಾ ಕೂಡ ಸೋಲಲಿದೆ ಎಂದ ವಾನ್!ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಹೀನಾಯ ಸೋಲು; ಟೀಮ್ ಇಂಡಿಯಾ ಕೂಡ ಸೋಲಲಿದೆ ಎಂದ ವಾನ್!

85ರ ಹರೆಯದ ನಿರ್ಮಲಾ ಕೌರ್ ಅವರು ಪತಿ ಮಿಲ್ಖಾ ಸಿಂಗ್, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕಳೆದ ತಿಂಗಳು ನಿರ್ಮಲಾಗೆ ಕೋವಿಡ್-19 ಸೋಂಕು ತಗುಲಿತ್ತು. ಮಿಲ್ಖಾ ಈಗಲೂ ಇಂಟೆನ್ಸಿವ್ ಕೇರ್ ಯುನಿಟ್ (ಐಸಿಯು)ನಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ.

'ನಿರ್ಮಲಾ ಮಿಲ್ಖಾ ಸಿಂಗ್ ಅವರು ಇಂದು (ಜೂನ್ 13) ಸಂಜೆ 4 PMಗೆ ಕೋವಿಡ್-19 ಕಾರಣ ಮೃತರಾಗಿದ್ದಾರೆ ಎಂದು ತಿಳಿಸಲು ತೀವ್ರ ದುಃಖವಾಗುತ್ತಿದೆ,' ಎಂದು ಮಿಲ್ಖಾ ಸಿಂಗ್ ಕುಟುಂಬದ ವಕ್ತಾರರು ತಿಳಿಸಿದ್ದಾರೆ. ಪತ್ನಿಯ ಅಂತಿಮ ಸಂಸ್ಕಾರದಲ್ಲಿ ಪತಿ ಮಿಲ್ಖಾಗೂ ಭಾಗವಹಿಸಲು ಸಾಧ್ಯವಾಗದಿರುವುದು ದುರಂತ.

WTC Finalನಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವುದಿಲ್ಲ ಎನ್ನುತ್ತಿವೆ ಈ 3 ಕಾರಣಗಳು!WTC Finalನಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವುದಿಲ್ಲ ಎನ್ನುತ್ತಿವೆ ಈ 3 ಕಾರಣಗಳು!

ಐಸಿಯುನಲ್ಲಿರುವ ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ಸಿಂಗ್ ಕೊಂಚ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಿಲ್ಖಾ ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಚಿನ್ನದ ಪದಕ ಗೆದ್ದಿದ್ದರು.

For Quick Alerts
ALLOW NOTIFICATIONS
For Daily Alerts
Story first published: Monday, June 14, 2021, 9:05 [IST]
Other articles published on Jun 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X