ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುವ ರೇಸರ್ ದುರಂತ ಅಂತ್ಯಕ್ಕೆ ಕಂಬನಿ ಮಿಡಿದ ಎಫ್1

Minutes Silence Held For Hubert Before F1s Belgian Grand Prix

ಹಂಗೇರಿ, ಸೆ.02: ಫಾರ್ಮುಲಾ 2 ರೇಸ್‌ನಲ್ಲಿ ಸಂಭವಿಸಿದ ದುರಂತವೊಂದರಲ್ಲಿ ಪ್ರತಿಭಾವಂತ 22 ವರ್ಷದ ಫ್ರೆಂಚ್ ಚಾಲಕ ಆಂಥೋನ್ ಹುಬರ್ಟ್ ಮೃತ ಪಟ್ಟಿದ್ದಾರೆ. ಬೆಲ್ಜಿಯಮ್ ಗ್ರ‍್ಯಾನ್‌ ಪ್ರೀ ಎಫ್ 1 ರೇಸ್‌ ಗೂ ಮುನ್ನ ಆಂಥೋನ್ ಸಾವಿಗೆ ಕಂಬನಿ ಮಿಡಿಯಲಾಗಿದೆ.

ಕಳೆದ ವರ್ಷದ GP3 ಚಾಂಪಿಯನ್ ಆಗಿದ್ದ ಹುಬರ್ಟ್ ಈ ಬಾರಿ ಸ್ಪಾ ಫ್ರಾಂಕೋರ್ ಚಾಂಪ್ಸ್ ನಲ್ಲಿ ನಡೆದ ಎಫ್ 2 ರೇಸಿನಲ್ಲಿ ಸ್ಪರ್ಧಿಯಾಗಿದ್ದರು. ರೇಸಿನ 2ನೇ ಲ್ಯಾಪ್ ನಲ್ಲಿ ಮೂರು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿತು.

ತೀವ್ರವಾಗಿ ಗಾಯಗೊಂಡ ಹುಬರ್ಟ್ ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಯತ್ನ ವಿಫಲವಾಯ್ತು. ಹುಬರ್ಟ್ ಕಾರಿಗೆ ಗುದ್ದಿದ್ದ ಚಾಲಕ ಅಮೆರಿಕದ ಜುವಾನ್ ಮ್ಯಾನುಯಲ್ ಕೊರಿಯಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಚಾಲಕ ಗಿಯುಲಿಯೋ ಅಲೆಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರತ vs ವಿಂಡೀಸ್, 2ನೇ ಟೆಸ್ಟ್, 3ನೇ ದಿನ, Live: ಕೊಹ್ಲಿ ಪಡೆ ಮೇಲುಗೈಭಾರತ vs ವಿಂಡೀಸ್, 2ನೇ ಟೆಸ್ಟ್, 3ನೇ ದಿನ, Live: ಕೊಹ್ಲಿ ಪಡೆ ಮೇಲುಗೈ

ಈ ಘಟನೆ ಬಳಿಕ ಎಫ್ 2 ರೇಸ್ ಸ್ಥಗಿತಗೊಳಿಸಲಾಯಿತು. ಬೆಲ್ಜಿಯನ್ ಗ್ರ್ಯಾನ್ ಪ್ರೀ ಎಫ್ 1 ರೇಸ್ ಆರಂಭಕ್ಕೂ ಮುನ್ನ ಅಗಲಿಕ ಹುಬರ್ಟ್ ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮರ್ಸಿಡೀಸ್ ಚಾಲಕ, ಐದು ಬಾರಿ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರು ತಮ್ಮದೇ ಸಂಸ್ಥೆಯ ಎಫ್ 2 ಚಾಲಕನ ಅಗಲಿಕೆಯಿಂದ ತೀವ್ರ ಆಘಾತವಾಗಿದೆ ಎಂದಿದ್ದಾರೆ. ಜೀವವನ್ನು ಪಣಕ್ಕೊಡಿ ವೇಗವಾಗಿ ಕಾರು ಚಲಾಯಿಸಿದ ಹುಬರ್ಟ್ ರನ್ನು ಹೀರೋ ಎಂದು ಕರೆದಿದ್ದಾರೆ.

Story first published: Monday, September 2, 2019, 11:53 [IST]
Other articles published on Sep 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X