ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐ ಲೀಗ್: ಬಲಿಷ್ಠ ಬೆಂಗಳೂರಿಗೆ ಕೋಲ್ಕತ್ತಾದಿಂದ ಸೋಲಿನ ಕಹಿ

By Mahesh

ಬೆಂಗಳೂರು, ಜೂ.01: ಕೋಲ್ಕತ್ತಾದಲ್ಲಿ ಭಾನುವಾರ ರಾತ್ರಿ ಶುರುವಾದ ಸಂಭ್ರಮ ಇನ್ನೂ ಮುಂದುವರೆದಿದೆ. ಸುಮಾರು 13 ವರ್ಷಗಳ ನಂತರ ಮೋಹನ್ ಬಗಾನ್ ತಂಡ ರಾಷ್ಟ್ರೀಯ ಚಾಂಪಿಯನ್ ಎನಿಸಿದೆ. ಐದು ವರ್ಷಗಳ ನಂತರ ಪ್ರಮುಖ ಕಪ್ ಗೆ ಮುತ್ತಿಟ್ಟಿದೆ. ಶ್ರೀಕಂಠೀರವ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ತಂಡದ ಕನಸಿಗೆ ಬ್ರೇಕ್ ಹಾಕಿ ಮೋಹನ್ ಬಗಾನ್ ತಂಡ ಸಂಭ್ರಮಿಸಿದೆ.

ಸತತವಾಗಿ ಸುರಿಯುವ ಮಳೆಯಲ್ಲಿ ಪ್ರೇಕ್ಷಕರ ಹರ್ಷೋದ್ಗಾರದ ನಡುವೆ ಬಲಿಷ್ಠ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ವಿರುದ್ಧ 1-1 ಅಂತರದ ಡ್ರಾ ಸಾಧಿಸಿದ ಮೋಹನ್ ಬಗಾನ್ ಗೆ ಅಗತ್ಯವಾಗಿ ಬೇಕಿದ್ದ ಅಂಕ ಪಡೆದು, ಐ ಲೀಗ್ ಫುಟ್ಬಾಲ್ ಪ್ರಶಸ್ತಿ ಗೆದ್ದುಕೊಂಡಿದೆ.

ನೈಜೀರಿಯಾ ಮೂಲದ ಬೆಲ್ಲೊ ರಸಾಕ್ ಅವರು ಕೊನೆ ಕ್ಷಣದಲ್ಲಿ ಬಗಾನ್ ಪರ ಗೋಲು ಗಳಿಸಿ ಸಂಭ್ರಮಕ್ಕೆ ನಾಂದಿ ಹಾಡಿದರು. ಬೆಂಗಳೂರು ಎಫ್ ಸಿ ಪರ 41ನೇ ನಿಮಿಷದಲ್ಲೇ ಜಾನ್ಸನ್ ಗೋಲು ಗಳಿಸಿ ಮುನ್ನಡೆ ಒದಗಿಸಿದ್ದರು. [ಭಾರತದ ಫುಟ್ಬಾಲ್ ಟೀಂ ಭರ್ಜರಿ ಜಿಗಿತ]

ಪಂದ್ಯದ 86ನೇ ನಿಮಿಷದಲ್ಲಿ ರಸಾಕ್ ಹೆಡ್ದರ್ ಮೂಲಕ ಗೋಲು ಗಳಿಸಿ ಪಂದ್ಯವನ್ನು ಡ್ರಾ ಮಾಡಿದರು. ಬೆಂಗಳೂರು ಪರ ನಾಯಕ ಸುನಿಲ್ ಛೆಟ್ರಿ ಬೆಂಚ್ ನಲ್ಲಿ ಕೂತಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು.

Mohun Bagan


ಛೆಟ್ರಿ ಅಡಲಿಲ್ಲವೇಕೆ?: ಬೆಂಗಳೂರು ಕೋಚ್ ಆಶ್ಲೆ ವೆಸ್ಟ್ ವುಡ್ ಅವರು ಅಂತಾರಾಷ್ಟ್ರೀಯ ಫುಟ್ಬಾಲರ್, ನಾಯಕ ಸುನಿಲ್ ಛೆಟ್ರಿ ಅವರನ್ನು ಬೆಂಚ್ ನಲ್ಲಿ ಕುಳಿಸಿ ಯುವ ಮಿಡ್ ಫೀಲ್ಡರ್ ಉದಾಂತ ಸಿಂಗ್ ಅವರಿಗೆ ಸ್ಥಾನ ಕಲ್ಪಿಸಿದ್ದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿತು. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಬೆಂಗಳೂರು ಕಪ್ ಎತ್ತಬಹುದಾಗಿತ್ತು.

ಐ ಲೀಗ್ ನಲ್ಲಿ 19 ಪಂದ್ಯಗಳಲ್ಲಿ 11 ಗೆಲುವು 5 ಡ್ರಾ ಹಾಗೂ 3 ಸೋಲಿನೊಂದಿಗೆ 38 ಅಂಕಗಳಿಸಿದ ಮೋಹನ್ ಬಗಾನ್ ಚಾಂಪಿಯನ್ ಆಗಿದೆ. ಬೆಂಗಳೂರು ಎಫ್ ಸಿ 10 ಗೆಲುವು, 6 ಡ್ರಾ ಹಾಗೂ 3 ಸೋಲಿನೊಂದಿಗೆ 36 ಅಂಕ ಕಲೆ ಹಾಕಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

2001-02ರಲ್ಲಿ ನೈಜೀರಿಯಾದ ಅಬ್ದುಲ್ ಸಾಲಿಯು ಅವರು ಹೊಡೆದ ಗೋಲಿನ ನೆರವಿನಿಂದ ಬಗಾನ್ ನ್ಯಾಷನಲ್ ಫುಟ್ಬಾಲ್ ಲೀಗ್ ಗೆದ್ದಿತ್ತು. ಈ ಬಾರಿ ಕೂಡಾ ನೈಜಿರಿಯಾದ ರಸಾಕ್ ಅವರ ನೆರವಿನಿಂದ ಮೋಹನ್ ಬಗಾನ್ ಐ ಲೀಗ್ ಗೆದ್ದುಕೊಂಡಿದೆ.(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X