ರಾಷ್ಟ್ರಮಟ್ಟದ ಫಾರ್ಮುಲಾ4 ಎಲ್.ಜಿ.ಬಿ ಚಾಂಪಿಯನ್‍ಶಿಪ್ 2021ಕ್ಕೆ ಮೂಡಿಗೆರೆಯ ಪರೀಕ್ಷಿತ್ ಸಜ್ಜು

ಕಳೆದ ಆಗಸ್ಟ್ 29ರ ಭಾನುವಾರದಂದು ಭಾರತದ ಮೊದಲ ಎಂಡ್ಯೂರೆನ್ಸ್ ಡ್ರೀಮ್ ಡ್ರೈವ್‌ನ್ನು ಮೆಹುಲ್ ಮತ್ತು ಶೀತಲ್ ಅವರ ಒಡೆತನದ ಮುಂಬೈ ಮೂಲದ ಕಂಪೆನಿಯಾದ 'ಬಿಗ್ ಬ್ಯಾಷ್ ಮೋಟಾರ್‌ಸ್ಪೋರ್ಟ್' ಆಯೋಜಿಸಿತ್ತು. ಈ ಎಂಡ್ಯೂರೆನ್ಸ್ ಡ್ರೀಮ್ ಡ್ರೈವ್‌ 4000 ಕಿಲೋಮೀಟರ್‌ಗಳ ನಾನ್‌ಸ್ಟಾಪ್ ರೇಸ್ ಆಗಿತ್ತು ಹಾಗೂ ಈ ರೇಸ್‌ನ್ನು ಲೇಹ್ ಪಟ್ಟಣದಿಂದ ಕನ್ಯಾಕುಮಾರಿವರೆಗೆ ಆಯೋಜಿಸಲಾಗಿತ್ತು. ಈ ರೇಸ್‌ನಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಯುವಕ ಪರೀಕ್ಷಿತ್ ದಾರದಹಳ್ಳಿ ಕೂಡ ಭಾಗವಹಿಸಿ ಪ್ಲಾಟಿನಮ್ ರೇಸರ್ ಎಂಬ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದರು.

ಲೇಹ್ ಪಟ್ಟಣದಿಂದ ಕನ್ಯಾಕುಮಾರಿವರೆಗೆ ಆಯೋಜಿಸಲಾಗಿದ್ದ 4000 ಕಿಲೋಮೀಟರ್ ದೂರದ ಈ ಟೈಮ್ ಸ್ಪೀಡ್ ಡಿಸ್ಟೆನ್ಸ್ ರೇಸ್‌ನ್ನು ಪರೀಕ್ಷಿತ್ ದರ್ದಳ್ಳಿ ಅತಿವೇಗವಾಗಿ 55 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು ಮಾತ್ರವಲ್ಲದೇ, ರೇಸ್ ಕಾರು ಕೆಟ್ಟುಹೋಗಿ ಮಾರ್ಗ ಮಧ್ಯದ ಜನರಹಿತ ಪ್ರದೇಶವೊಂದರಲ್ಲಿ ಸಿಲುಕಿಕೊಂಡಿದ್ದ ರೇಸರ್ ಓರ್ವನಿಗೆ ಸಹಾಯವನ್ನು ಕೂಡ ಮಾಡಿದ್ದರು. ಹೀಗೆ ರೇಸ್ ಜೊತೆಗೆ ಕ್ರೀಡಾಸ್ಫೂರ್ತಿಯನ್ನು ಮೆರೆದ ಪರೀಕ್ಷಿತ್ ದಾರದಹಳ್ಳಿಗೆ ಪ್ಲಾಟಿನಮ್ ರೇಸರ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆಯವರಾಗಿರುವ ಪರೀಕ್ಷಿತ್ ದಾರದಹಳ್ಳಿ ತಮ್ಮ ರೇಸಿಂಗ್ ವೃತ್ತಿ ಜೀವನವನ್ನು ಓರ್ವ ಅಧಿಕೃತ ಬೈರಲ್ ಆರ್ಟ್ ಡ್ರೈವರ್ ಆಗಿ 2018ರಲ್ಲಿ ನಡೆದ ಗೋ-ಕಾರ್ಟ್ಸ್‌ನಲ್ಲಿ ಆರಂಭಿಸಿದರು. ಚಿಕ್ಕ ವಯಸ್ಸಿನಿಂದಲೇ ರೇಸಿಂಗ್‌ನ ಕಡೆ ತಮಗೆ ಒಲವಿರುವುದನ್ನು ಅರಿತಿದ್ದ ಪರೀಕ್ಷಿತ್ ನಂತರದ ದಿನಗಳಲ್ಲಿ ರೇಸಿಂಗ್ ಕಡೆ ಹೆಚ್ಚಿನ ಆಸಕ್ತಿಯನ್ನು ತೋರಿರಲಿಲ್ಲ. ಆದರೆ 2018ರಲ್ಲಿ ನಡೆದ ಕಾರ್ಟಿಂಗ್ ಚಾಂಪಿಯನ್‍ಶಿಪ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದ ಪರೀಕ್ಷಿತ್ ಅಂದಿನಿಂದ ಓರ್ವ ವೃತ್ತಿಪರ ರೇಸರ್ ಆಗಿ ಬದಲಾದರು.

2018ರಿಂದ ತಾವು ಪಡೆದ ಕನಿಷ್ಠ ಅಭ್ಯಾಸದೊಂದಿಗೆ ಕಾರ್ಟಿಂಗ್ ಚಾಂಪಿಯನ್‍ಶಿಪ್, ಫಾರ್ಮುಲಾ 1300 ಮತ್ತು ಫಾರ್ಮುಲಾ 4ನಲ್ಲಿ ಭಾಗವಹಿಸಿದ ನಂತರ ಓರ್ವ ರಾಷ್ಟ್ರಮಟ್ಟದ ರೇಸರ್‌ಗೆ ಇರಬೇಕಾದ ಕೌಶಲ್ಯತೆ, ಸಾಮರ್ಥ್ಯ ಮತ್ತು ಹಂಬಲ ತಮ್ಮಲ್ಲಿ ಇರುವುದನ್ನು ಅರಿತ ಪರೀಕ್ಷಿತ್ ದೊಡ್ಡ ಮಟ್ಟದ ರೇಸಿಂಗ್‌ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಮತ್ತು ಏಷಿಯನ್ ಚಾಂಪಿಯನ್‍ಶಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಪರೀಕ್ಷಿತ್ ದಾರದಹಳ್ಳಿ ಸಾಧನೆಗಳು:

2018ರ ನಂತರ ರೇಸಿಂಗ್ ಕಡೆ ಹೆಚ್ಚಿನ ಒಲವನ್ನು ತೋರಿರುವ ಪರೀಕ್ಷಿತ್ ತಮಗೆ ಲಭ್ಯವಿದ್ದ ಕಡಿಮೆ ದಿನಗಳಲ್ಲಿಯೇ ಅಗತ್ಯವಾದ ಅಭ್ಯಾಸಗಳನ್ನು ನಡೆಸಿ, ತಮ್ಮಲ್ಲಿರುವ ರೇಸಿಂಗ್ ಕೌಶಲ್ಯತೆಯಿಂದ ರೇಸ್‌ಗಳಲ್ಲಿ ಭಾಗವಹಿಸಿ ಹಲವು ಸಾಧನೆಗಳನ್ನು ಮಾಡಿದ್ದು, ಅವುಗಳ ಪಟ್ಟಿ ಈ ಕೆಳಕಂಡಂತಿದೆ..

* ಭಾರತದ ಮೊದಲ ಎಂಡ್ಯೂರೆನ್ಸ್ ಡ್ರೀಮ್ ಡ್ರೈವ್ 2021ರಲ್ಲಿ ಲೇಹ್ ಪಟ್ಟಣದಿಂದ ಕನ್ಯಾಕುಮಾರಿವರೆಗೆ ಆಯೋಜಿಸಲಾಗಿದ್ದ 4000 ಕಿಲೋಮೀಟರ್ ನಾನ್‌ಸ್ಟಾಪ್ ಟೈಮ್ ಸ್ಪೀಡ್ ಡಿಸ್ಟೆನ್ಸ್ ರೇಸ್‌ನಲ್ಲಿ ಭಾಗವಹಿಸಿದ್ದ ಪರೀಕ್ಷಿತ್ 55 ಗಂಟೆಗಳಲ್ಲಿ ರೇಸ್‌ನಲ್ಲಿ ಭಾಗವಹಿಸಿದ್ದವರ ಪೈಕಿ ಅತಿ ವೇಗವಾಗಿ ಗುರಿಯನ್ನು ತಲುಪಿ ಪ್ಲಾಟಿನಮ್ ರೇಸರ್ ಎಂಬ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

* ಭಾರತದ ರಾಷ್ಟ್ರೀಯ ಮಟ್ಟದ ರೋಟಾಕ್ಸ್ ಚಾಂಪಿಯನ್‍ಶಿಪ್ 2018ರಲ್ಲಿ ಬೈರಲ್ ಆರ್ಟ್ ಟೀಮ್ ಡ್ರೈವರ್ ಆಗಿ ಭಾಗವಹಿಸಿದ್ದ ಪರೀಕ್ಷಿತ್ ಎರಡನೇ ಸುತ್ತಿನಲ್ಲಿ ನಾಲ್ಕನೇ ಸ್ಥಾನ, ಮೂರನೇ ಸುತ್ತಿನ ಫೈನಲ್‌ನಲ್ಲಿ ತೃತೀಯ ಸ್ಥಾನ, ನಾಲ್ಕನೇ ಸುತ್ತಿನ ಫೈನಲ್‌ನಲ್ಲಿ ತೃತೀಯ ಸ್ಥಾನ ಮತ್ತು ಐದನೇ ಸುತ್ತಿನ ಫೈನಲ್‌ನಲ್ಲಿ ಫಾಸ್ಟೆಸ್ಟ್ ಲ್ಯಾಪ್ ಪೂರೈಸಿ ನಾಲ್ಕನೇ ಸ್ಥಾನ ಪಡೆದುಕೊಂಡ ಸಾಧನೆಗಳನ್ನು ಮಾಡಿದ್ದಾರೆ.

* 22ನೇ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‍ಶಿಪ್ 2019ರಲ್ಲಿ ಫಾರ್ಮುಲಾ ಎಲ್. ಜಿ. ಬಿ ನೋವಿಸ್ ಕಪ್‌ನಲ್ಲಿ ಭಾಗವಹಿಸಿದ್ದ ಪರೀಕ್ಷಿತ್ ಮೊದಲ ಸುತ್ತಿನಲ್ಲಿ ತೃತೀಯ ಸ್ಥಾನ ಪಡೆದರು, ಎರಡನೇ ಸುತ್ತಿನಲ್ಲಿಯೂ ತೃತೀಯ ಸ್ಥಾನವನ್ನು ಪಡೆದುಕೊಂಡು ನಂತರ ಹಿನ್ನಡೆ ಅನುಭವಿಸಿದರು ಮತ್ತು ಮೂರನೇ ಸುತ್ತಿನಲ್ಲಿ ತೃತೀಯ ಸ್ಥಾನಕ್ಕೆ ಅರ್ಹರಾಗಿದ್ದರೂ ಸಹ ತಾಂತ್ರಿಕ ಲೋಪದೋಷಗಳಿಂದ ಎಂಟನೇ ಸ್ಥಾನ ಪಡೆದು ಹೊರಹೊಮ್ಮಿದ್ದರು.

* 23ನೇ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‍ಶಿಪ್ ( 2020 ) ಫಾರ್ಮುಲಾ 4ನಲ್ಲಿ ಯಾವುದೇ ಟೆಸ್ಟಿಂಗ್ ಮತ್ತು ಅಭ್ಯಾಸಗಳಿಲ್ಲದೇ ಭಾಗವಹಿಸಿದ್ದ ಪರೀಕ್ಷಿತ್ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು.

ಹೀಗೆ ಕಳೆದ 3 ವರ್ಷಗಳಿಂದ ರೇಸಿಂಗ್‌ನ್ನು ತಮ್ಮ ವೃತ್ತಿ ಜೀವನವನ್ನಾಗಿ ಪರಿಗಣಿಸಿಕೊಂಡು ಹಲವಾರು ಸಾಧನೆಗಳನ್ನು ಮಾಡಿ, ಏಷಿಯನ್ ಚಾಂಪಿಯನ್‍ಶಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಬೇಕೆಂಬ ಗುರಿಯನ್ನು ಹೊಂದಿರುವ ಪರೀಕ್ಷಿತ್ ದಾರದಹಳ್ಳಿ ಮುಂಬರಲಿರುವ ಅಕ್ಟೋಬರ್ ತಿಂಗಳ ಕೊನೆಯಲ್ಲಿ ನಡೆಯಲಿರುವ 2021ರ ಜೆಕೆ ಟೈರ್ ಫಾರ್ಮುಲಾ 4 ಎಲ್. ಜಿ. ಬಿ ನ್ಯಾಷನಲ್ ರೇಸಿಂಗ್ ಚಾಂಪಿಯನ್‍ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಹಾಗೂ ನವೆಂಬರ್ ಎರಡನೇ ವಾರದಲ್ಲಿ ದುಬೈನಲ್ಲಿ ನಡೆಯಲಿರುವ ಎಂಡ್ಯೂರೆನ್ಸ್ ರೇಸ್‌ನಲ್ಲಿಯೂ ಕೂಡ ಪರೀಕ್ಷಿತ್ ದಾರದಹಳ್ಳಿ ಪಾಲ್ಗೊಳ್ಳಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Read more about: race sport ಕ್ರೀಡೆ
Story first published: Tuesday, September 28, 2021, 15:36 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X