ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮುಂಬೈ ಮ್ಯಾರಥಾನ್ 2020: ರೇಸ್ ಓಡುತ್ತಲೇ ಪ್ರಾಣಬಿಟ್ಟ ಓಟಗಾರ!

Mumbai Marathon: 64-year-old runner dies of heart attack

ಮುಂಬೈ, ಜನವರಿ 20: ಭಾನುವಾರ (ಜನವರಿ 19) ನಡೆದ 'ಮುಂಬೈ ಮ್ಯಾರಥಾನ್ 2020' ಓಟದ ಸ್ಪರ್ಧೆ ವೇಳೆ ರೇಸ್‌ ಓಡುತ್ತಿದ್ದ ಸ್ಪರ್ಧಿ ಅಸುನೀಗಿದ ಘಟನೆ ವರದಿಯಾಗಿದೆ. ಹೃದಯಾಘಾತದಿಂದಾಗಿ 64 ವರ್ಷದ ವ್ಯಕ್ತಿಯೊಬ್ಬರು ಓಟದ ಮಧ್ಯೆ ಸಾವನ್ನಪ್ಪಿದ್ದಾರೆ.

ಹೇಡನ್-ಗಿಲ್‌ಕ್ರಿಸ್ಟ್‌ ದಾಖಲೆ ಮುರಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ!ಹೇಡನ್-ಗಿಲ್‌ಕ್ರಿಸ್ಟ್‌ ದಾಖಲೆ ಮುರಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ!

ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿರುವ ನಲಸೋಪರ ಎಂಬಲ್ಲಿ ವಾಸವಿದ್ದ ಗಜೇಂದ್ರ ಮಂಜಲ್ಕರ್ ಎಂದು ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ಸುಮಾರು 4 ವರ್ಷಗಳಿಂದಲೂ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ಉತ್ಸಾಹಿ ಅಜ್ಜ, ಭಾನುವಾರ ಬೆಳಗಿನ ರೇಸ್‌ನಲ್ಲಿ ಓಡುತ್ತ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Mumbai Marathon: 64-year-old runner dies of heart attack

ಮ್ಯಾರಥಾನ್ ರೇಸ್ ಓಡುತ್ತ ಕುಸಿದುಬಿದ್ದ ಮಂಜಲ್ಕರ್ ಅವರನ್ನು ದಕ್ಷಿಣ ಮುಂಬೈನಲ್ಲಿರುವ ಬಾಂಬೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಂಜಲ್ಕರ್‌ನನ್ನು ಕೊಂಡೊಯ್ಯುವಾಗ ಆತ ದಾರಿ ಮಧ್ಯೆಯೇ ಮೃತರಾಗಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಕ್ರೀಡಾಪಟುವಾಗಿದ್ದು ಕೆಲಸಹುಡುಕುತ್ತಿದ್ದೀರಾ? ಕಳೆದುಕೊಳ್ಳದಿರಿ ಈ ಅವಕಾಶಕ್ರೀಡಾಪಟುವಾಗಿದ್ದು ಕೆಲಸಹುಡುಕುತ್ತಿದ್ದೀರಾ? ಕಳೆದುಕೊಳ್ಳದಿರಿ ಈ ಅವಕಾಶ

ಬಾಂಬೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಹೆಗಾರರಾಗಿರುವ ಡಾ. ಗೌತಮ್ ಧನ್ಸಾಲಿ ಮೃತರ ಬಗ್ಗೆ ಮಾತನಾಡುತ್ತ, ಮ್ಯಾರಥಾನ್ ಸ್ಪರ್ಧಿಗಳಲ್ಲಿ ಸುಮಾರು 10-12 ಮಂದಿ ಡಿ-ಹೈಡ್ರೇಶನ್ ಕೂಡ ಸೇರಿ ಬೇರೆ ಬೇರೆ ಸಮಸ್ಯೆಗಳಿಗಾಗಿ ಇದೇ ಆಸ್ಪತ್ರೆಗೆ ದಾಖಲಾಗಿದ್ದಾಗಿ ವಿವರಿಸಿದರು.

Story first published: Monday, January 20, 2020, 21:12 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X