ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ನೀರಜ್ ಚೋಪ್ರಾ ಹಾದಿಯಲ್ಲಿ ಕರ್ನಾಟಕದ ಜಾವೆಲಿನ್ ಥ್ರೋ ಪಟು ಮನು ಡಿಪಿ

Nammura Patibhe: Hassans Javelin throw athlete Manu DPs achievements and short intro

ಇಂಡಿಯನ್ ಗ್ರ್ಯಾಂಡ್ ಪಿಕ್ಸ್ ಕ್ರೀಡಾ ಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾಗವಹಿಸಿದ್ದ ಕರ್ನಾಟಕ ಮೂಲದ ಮನು ಡಿ ಪಿ 82.43 ಮೀಟರ್ಸ್ ಜಾವೆಲಿನ್ ಥ್ರೋ ಮಾಡುವ ಮೂಲಕ ಜಾವೆಲಿನ್ ಥ್ರೋ ಕ್ರೀಡಾ ವಲಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರು. ಆ ಇಂಡಿಯನ್ ಗ್ರ್ಯಾಂಡ್ ಪಿಕ್ಸ್ ಕ್ರೀಡಾಕೂಟದಲ್ಲಿ ದಾಖಲಾದ ಎರಡನೇ ಅತಿ ಉದ್ದದ ಜಾವೆಲಿನ್ ಥ್ರೋ ಇದಾಗಿತ್ತು ಹಾಗೂ ಈ ಎಸೆತದ ಮೂಲಕ ಮನು ಡಿ ಪಿ ಭಾರತದ ಜಾವೆಲಿನ್ ಥ್ರೋ ಪಟುಗಳು ಎಸೆದಿರುವ ಅತಿ ಉದ್ದದ ಜಾವೆಲಿನ್ ಎಸೆತಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು.

IPL 2022: ಭಾರತದ ಈ ಬ್ಯಾಟ್ಸ್‌ಮನ್‌ಗೆ ಮಾತ್ರ ಬೌಲಿಂಗ್ ಮಾಡಲು ಭಯಪಟ್ಟಿದ್ದೆ ಎಂದ ರಶೀದ್ ಖಾನ್!IPL 2022: ಭಾರತದ ಈ ಬ್ಯಾಟ್ಸ್‌ಮನ್‌ಗೆ ಮಾತ್ರ ಬೌಲಿಂಗ್ ಮಾಡಲು ಭಯಪಟ್ಟಿದ್ದೆ ಎಂದ ರಶೀದ್ ಖಾನ್!

ಹೀಗೆ 82.43 ಮೀಟರ್ ಜಾವೆಲಿನ್ ಥ್ರೋ ಮಾಡಿ ಕ್ರೀಡಾಭಿಮಾನಿಗಳ ಗಮನ ಸೆಳೆದ ಮನು ಡಿ ಪಿ ಆ ಹಣಾಹಣಿಯಲ್ಲಿ ಚಿನ್ನದ ಪದಕವನ್ನು ಕೂಡ ಗೆದ್ದಿದ್ದರು. ಇನ್ನು ಜುಲೈ 14ರಿಂದ 24ರವರೆಗೆ ಅಮೇರಿಕಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಟೂರ್ನಿಗೂ ಮನು ಡಿ ಪಿ ಆಯ್ಕೆಯಾಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಅರ್ಹತೆ ಪಡೆಯಬೇಕೆಂದರೆ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 32 ಸ್ಥಾನಗಳ ಒಳಗಿರಬೇಕು. ಮನು 16ನೇ ಸ್ಥಾನ ಹೊಂದಿದ್ದ ಕಾರಣ ಈ ಕ್ರೀಡಾಕೂಟಕ್ಕೆ ನೇರವಾಗಿ ಅರ್ಹತೆ ಪಡೆದುಕೊಂಡರು.

ಐಪಿಎಲ್ ಪ್ರದರ್ಶನದ ಮೇಲೆ ಟಿ20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಚೋಪ್ರಾ; ರೋಹಿತ್, ಕೊಹ್ಲಿಗೆ ಕೊಕ್!ಐಪಿಎಲ್ ಪ್ರದರ್ಶನದ ಮೇಲೆ ಟಿ20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಚೋಪ್ರಾ; ರೋಹಿತ್, ಕೊಹ್ಲಿಗೆ ಕೊಕ್!

ಹೀಗೆ ವಿಶೇಷ ಕ್ರೀಡೆ ಜಾವೆಲಿನ್ ಥ್ರೋನಲ್ಲಿ ಮುಂದಿನ ದಿನಗಳಲ್ಲಿ ಸಂಚಲನ ಮೂಡಿಸುವ ಭರವಸೆಯನ್ನು ಹುಟ್ಟು ಹಾಕಿರುವ ಮನು ಡಿ ಪಿ ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ 21 ವರ್ಷ ವಯಸ್ಸಿನ ಪ್ರತಿಭೆ. ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾಗೆ ಈ ಹಿಂದಿನ ದಿನಗಳಲ್ಲಿ ತರಬೇತಿಯನ್ನು ನೀಡಿದ್ದ ಕಾಶಿನಾಥ್ ನಾಯ್ಕ್ ಅವರೇ ಮನು ಅವರಿಗೂ ಕೂಡ ತರಬೇತಿಯನ್ನು ನೀಡುತ್ತಿದ್ದು, ಮನು ಕೂಡ ನೀರಜ್ ಚೋಪ್ರಾ ರೀತಿಯೇ ದೇಶಕ್ಕೆ ಹೆಮ್ಮೆ ತರುವ ಹಾದಿಯಲ್ಲಿದ್ದಾರೆ.

ಪ್ರತಿಭೆ ಇದ್ದರೂ ಆರ್ಥಿಕ ನೆರವು ಇಲ್ಲ

ಪ್ರತಿಭೆ ಇದ್ದರೂ ಆರ್ಥಿಕ ನೆರವು ಇಲ್ಲ

ಇನ್ನು ಜಾವೆಲಿನ್ ಥ್ರೋನಲ್ಲಿ ಈ ಕಿರಿಯ ವಯಸ್ಸಿಗೆ ಗಮನಾರ್ಹ ಪ್ರದರ್ಶನವನ್ನು ನೀಡಿ ವಿದೇಶದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶವನ್ನು ಗಿಟ್ಟಿಸಿಕೊಂಡಿರುವ ಕರ್ನಾಟಕದ ಮನು ಡಿ ಪಿಗೆ ರಾಜ್ಯ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೋಚ್ ಕಾಶಿನಾಥ್ ನಾಯ್ಕ್ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದರು. ರಾಜ್ಯ ಸರ್ಕಾರ 2024ರ ಒಲಿಂಪಿಕ್ಸ್‌ವರೆಗೆ ಮನುಗೆ ಸಹಾಯ ಮಾಡುವ ಭರವಸೆ ನೀಡಿತ್ತು ಆದರೆ ಅದು ಇನ್ನೂ ಆಗಿಲ್ಲ, ಆದಷ್ಟು ಬೇಗ ಈ ಕಾರ್ಯ ಆಗಲಿ ಎಂದು ಬರೆದುಕೊಂಡಿದ್ದರು.

ಮನು ಬೆನ್ನಿಗೆ ನಿಂತ ಪುಣೆಯ ಕುನಾಲ್ ಅಗರ್ವಾಲ್

ಮನು ಬೆನ್ನಿಗೆ ನಿಂತ ಪುಣೆಯ ಕುನಾಲ್ ಅಗರ್ವಾಲ್

ಇನ್ನು ಮುಂಬರುವ ಕ್ರೀಡಾಕೂಟಗಳಿಗೆ ಸಜ್ಜಾಗುತ್ತಿರುವ ಮನು ಡಿ ಪಿ ಅವರಿಗೆ ಪುಣೆ ಮೂಲದ ಉದ್ಯಮಿ ಕುನಾಲ್ ಅಗರ್ವಾಲ್ ಅವರು 1,15,000 ರೂಪಾಯಿ ಮೌಲ್ಯದ ಜಾವೆಲಿನ್ ಅನ್ನು ಕೊಡುಗೆ ರೂಪದಲ್ಲಿ ನೀಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ವೇಳೆ ನೀರಜ್ ಚೋಪ್ರಾ ಉಪಯೋಗಿಸಿದ್ದ ಕಂಪೆನಿಯ ಜಾವೆಲಿನ್ ಅನ್ನೇ ಕುನಾಲ್ ಅಗರ್ವಾಲ್ ಅವರು ಮನು ಡಿ ಪಿ ಅವರಿಗೆ ನೀಡಿರುವುದು ವಿಶೇಷ.

ಮನು ಡಿಪಿ ಸಾಧನೆಗಳು

ಮನು ಡಿಪಿ ಸಾಧನೆಗಳು

ಮನು ಡಿ ಪಿ ಜಾವೆಲಿನ್ ಥ್ರೋನಲ್ಲಿ ಮಾಡಿರುವ ಟಾಪ್ 5 ಸಾಧನೆಗಳು ಕೆಳಕಂಡಂತಿವೆ.

1. 13 ಮಾರ್ಚ್ 2022 - ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ - 82.43 ಮೀಟರ್ - ಪ್ರಥಮ ಸ್ಥಾನ

2. 3 ಏಪ್ರಿಲ್ 2022 - ನ್ಯಾಷನಲ್ ಫೆಡರೇಷನ್ ಕಪ್ - 79.17 ಮೀ - ದ್ವಿತೀಯ ಸ್ಥಾನ

3. 24 ಮೇ 2022 - ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ - 77.66 - ತೃತೀಯ ಸ್ಥಾನ

4. 17 ಮಾರ್ಚ್ 2021 - ಫೆಡರೇಷನ್ ಕಪ್, ಪಾಟಿಯಾಲ - 76.30 ಮೀ - ಐದನೇ ಸ್ಥಾನ

5. 30 ಆಗಸ್ಟ್ 2019 - ಅಂತರ ರಾಜ್ಯ ಚಾಂಪಿಯನ್‍ಶಿಪ್ - 76.24 - ದ್ವಿತೀಯ ಸ್ಥಾನ

Story first published: Wednesday, June 1, 2022, 18:52 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X