ನಮ್ಮೂರ ಪ್ರತಿಭೆ: 18 ಚಿನ್ನದ ಪದಕಗಳ ಸರದಾರ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್

ಶ್ರೀಹರಿ ನಟರಾಜ್ ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಬೆಂಗಳೂರು ಮೂಲದ ಈಜುಗಾರ. 2001ರ ಜನವರಿ 16ರಂದು ಬೆಂಗಳೂರಿನಲ್ಲಿ ಜನಿಸಿದ ಪ್ರತಿಭೆ. ಈ ಹಿಂದೆ ಎ ಸಿ ಜಯರಾಜನ್ ಮಾರ್ಗದರ್ಶನ ಪಡೆದುಕೊಂಡಿದ್ದ ಶ್ರೀಹರಿ ನಟರಾಜ್ ಸದ್ಯ ನಿಹಾರ್ ಅಮೀನ್ ಮಾರ್ಗದರ್ಶನದಡಿಯಲ್ಲಿದ್ದಾರೆ.

21 ವರ್ಷ ಕಳೆಯುವುದರೊಳಗೆ ಪ್ರತಿಷ್ಠಿತ ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್, ವಿಶ್ವ ಅಕ್ವಾಟಿಕ್ ನೀಟ್ ಮತ್ತು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಈತ ಅಂತರರಾಷ್ಟ್ರೀಯ ಪದಾರ್ಪಣೆ ಮಾಡಿದ್ದು 2017ರಲ್ಲಿ ತುರ್ಕಮೆನಿಸ್ತಾನ್ ನಲ್ಲಿ ನಡೆದ ಏಷ್ಯನ್ ಒಳಾಂಗಣ ಮತ್ತು ಮೆಟಲ್ ಆರ್ಟ್ಸ್ ಗೇಮ್ಸ್‌ ಮುಖಾಂತರ. ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಈತ ತನ್ನ 18ನೇ ವಯಸ್ಸಿನಲ್ಲಿಯೇ 3 ಬ್ಯಾಕ್‌ಸ್ಟ್ರೋಕ್ ಈವೆಂಟ್‌ಗಳಲ್ಲಿ ಹಿರಿಯ ರಾಷ್ಟ್ರೀಯ ದಾಖಲೆಯನ್ನು ಮುರಿದರು.

ಹೀಗೆ ಬೆಂಗಳೂರಿನ ಈ ಪ್ರತಿಭೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹಲವಾರು ದಾಖಲೆಗಳನ್ನು ಮಾಡಿದ್ದು, ವಿವಿಧ ಕ್ರೀಡಾಕೂಟಗಳಲ್ಲಿ ಗಳಿಸಿರುವ ಪದಕಗಳು ಮತ್ತು ಮಾಡಿರುವ ಸಾಧನೆಗಳ ಕಿರು ಪಟ್ಟಿ ಮುಂದೆ ಇದೆ ಓದಿ.

RCB vs RR: ಸಂಜು ಸ್ಯಾಮ್ಸನ್ ಆಟ ಆರ್‌ಸಿಬಿಯ ಈ ಬೌಲರ್ ಮುಂದೆ ನಡೆಯಲ್ಲ; 16 ರನ್‌ಗೆ 2 ಬಾರಿ ಔಟ್!RCB vs RR: ಸಂಜು ಸ್ಯಾಮ್ಸನ್ ಆಟ ಆರ್‌ಸಿಬಿಯ ಈ ಬೌಲರ್ ಮುಂದೆ ನಡೆಯಲ್ಲ; 16 ರನ್‌ಗೆ 2 ಬಾರಿ ಔಟ್!

ಚಿನ್ನದ ಪದಕ
• 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 100M ಬ್ಯಾಕ್‌ಸ್ಟ್ರೋಕ್, ಕೊಲಂಬೊ, ಶ್ರೀಲಂಕಾ
• 2016 ದಕ್ಷಿಣ ಏಷ್ಯಾದ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 200M ಬ್ಯಾಕ್‌ಸ್ಟ್ರೋಕ್, ಕೊಲಂಬೊ, ಶ್ರೀಲಂಕಾ
• 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 4x 100M ಮೆಡ್ಲೆ ರಿಲೇ, ಕೊಲಂಬೊ, ಶ್ರೀಲಂಕಾ
• 2017 ರ ರಾಷ್ಟ್ರೀಯ ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 50 ಮೀ ಬ್ಯಾಕ್‌ಸ್ಟ್ರೋಕ್, ಪುಣೆ, ಭಾರತ
• 2017ರ ರಾಷ್ಟ್ರೀಯ ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 100ಮೀ ಬ್ಯಾಕ್‌ಸ್ಟ್ರೋಕ್, ಪುಣೆ, ಭಾರತ
• 2017 ರಾಷ್ಟ್ರೀಯ ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 200m ಬ್ಯಾಕ್‌ಸ್ಟ್ರೋಕ್, ಪುಣೆ, ಭಾರತ
• 2017 ರಾಷ್ಟ್ರೀಯ ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 200m ಫ್ರೀಸ್ಟೈಲ್, ಪುಣೆ, ಭಾರತ
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್, ಪುಣೆ, ಭಾರತದ 50 ಮೀ ಫ್ರೀಸ್ಟೈಲ್
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್, ಪುಣೆ, ಭಾರತದ 200 ಮೀ ಫ್ರೀಸ್ಟೈಲ್
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್, ಪುಣೆ, ಭಾರತದ 50 ಮೀ ಬ್ಯಾಕ್‌ಸ್ಟ್ರೋಕ್
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್, ಪುಣೆ, ಭಾರತ
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 200 ಮೀ ಬ್ಯಾಕ್‌ಸ್ಟ್ರೋಕ್, ಪುಣೆ, ಭಾರತ
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 4x100m ಮೆಡ್ಲೆ ರಿಲೇ, ಪುಣೆ, ಭಾರತ
• 2019 ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ 4x100 ಫ್ರೀಸ್ಟೈಲ್, ಪುಣೆ, ಭಾರತ
• 73ನೇ ಹಿರಿಯ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 100ಮೀ ಬ್ಯಾಕ್‌ಸ್ಟ್ರೋಕ್, ಭೋಪಾಲ್, ಭಾರತ
• 73 ನೇ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 200 ಮೀ ಬ್ಯಾಕ್‌ಸ್ಟ್ರೋಕ್, ಭೋಪಾಲ್, ಭಾರತ
• 2021 ಉಜ್ಬೇಕಿಸ್ತಾನ್ ಓಪನ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 50 ಮೀ ಬ್ಯಾಕ್‌ಸ್ಟ್ರೋಕ್, ತಾಷ್ಕೆಂಟ್, ಉಜ್ಬೇಕಿಸ್ತಾನ್
• 2021 ರ ಉಜ್ಬೇಕಿಸ್ತಾನ್ ಓಪನ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್, ತಾಷ್ಕೆಂಟ್, ಉಜ್ಬೇಕಿಸ್ತಾನ್

ಬೆಳ್ಳಿ
• 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 50M ಬ್ಯಾಕ್‌ಸ್ಟ್ರೋಕ್, ಕೊಲಂಬೊ, ಶ್ರೀಲಂಕಾ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 27, 2022, 22:53 [IST]
Other articles published on May 27, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X