ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾ

Fouaad mirza

ಫವಾದ್ ಮಿರ್ಜಾ, ಇಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಭಾರತದ ಕೀರ್ತಿಯನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಚಾಂಪಿಯನ್, ಬೆಂಗಳೂರಿನಲ್ಲಿ ದೃಢವಾಗಿ ನಿಂತು, ಇಕ್ವೆಸ್ಟ್ರಿಯನ್‌ನಲ್ಲಿ ಭಾರತಕ್ಕೆ ಪದಕಗಳ ಗೆದ್ದು ಕೊಟ್ಟ ಅತ್ಯುತ್ತಮ ಕುದುರೆ ಸವಾರ.

ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆ ಮಾಡಿರುವ ಫವಾದ್‌ಗೆ ಬಹುದೊಡ್ಡ ಗುರಿ ಅಂದ್ರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆಂಬ ಮಹಾದಾಸೆ. ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಏಕೈಕ ಇಕ್ವೆಸ್ಟ್ರಿಯನ್ ಆಗಿರುವ ಫವಾದ್ ಸಾಧನೆ ಬಗ್ಗೆ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡಬೇಕಾಗುತ್ತದೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ಭಾರತವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕಗಳನ್ನ ಬೇಟೆಯಾಡಿದ ಕರ್ನಾಟಕದ, ಅದ್ರಲ್ಲೂ ನಮ್ಮ ಬೆಂಗಳೂರಿನ ಹೆಮ್ಮೆಯ ಇಕ್ವೆಸ್ಟ್ರಿಯನ್ ಪಟು ಫವಾದ್ ಮಿರ್ಜಾ ಯಶೋಗಾಥೆಯನ್ನ ಈ ಬರಹದ ಮೂಲಕ ಓದುಗರಿಗೆ ಅರ್ಪಿಸಲಾಗುತ್ತಿದೆ.

ಚಿಕ್ಕ ವಯಸ್ಸಿನಲ್ಲೇ ಕುದುರೆಗಳೆಂದರೆ ಫವಾದ್‌ಗೆ ಬಲು ಇಷ್ಟ

ಚಿಕ್ಕ ವಯಸ್ಸಿನಲ್ಲೇ ಕುದುರೆಗಳೆಂದರೆ ಫವಾದ್‌ಗೆ ಬಲು ಇಷ್ಟ

ತಂದೆ ಪಶು ವೈದ್ಯ, ಚಿಕ್ಕವಯಸ್ಸಿನಿಂದಲೂ ಅವರು ಕುದುರೆಗಳಿಗೆ ಚಿಕಿತ್ಸೆ ನೀಡಲೆಂದು ತೆರಳುತ್ತಿದ್ದಾಗ ಆ ಬಾಲಕ ಸಹ ಅವರೊಂದಿಗೆ ತೆರಳುತ್ತಿದ್ದ. ಹೀಗೆ ದಿನ ಕಳೆದಂತೆ ಆತನಿಗೆ ಕುದುರೆಗಳ ಮೇಲೆ ಆಸಕ್ತಿ ಕೆರಳಿತು. ಪರಿಣಾಮ 5ನೇ ವರ್ಷದಲ್ಲೇ ಕುದುರೆ ಸವಾರಿ ಆರಂಭಿಸಿದ ಆ ಬಾಲಕ, ಮತ್ತೆಂದಿಗೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈತನ ಕುದುರೆ ಸವಾರಿಯೆಲ್ಲಾ ಇತಿಹಾಸದ ಪುಟ ಸೇರಿದೆ.

6, ಮಾರ್ಚ್‌ 1992ರಂದು ಬೆಂಗಳೂರಿನಲ್ಲಿ ಜನಿಸಿದ ಫವಾದ್ ಮಿರ್ಜಾಗೆ ಕುದುರೆ ಮೇಲೆ ವಿಶೇಷ ಆಸಕ್ತಿ ಬೆಳೆಯಲು ಕಾರಣ ಅವರ ತಂದೆ. ಡಾ. ಹಸ್ನೇನ್ ಮಿರ್ಜಾ ಅವರು ಭಾರತದ ಅಗ್ರ ಪಶುವೈದ್ಯರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಸ್ವತಃ ಆರನೇ ತಲೆಮಾರಿನ ಕುದುರೆ ಸವಾರರಾಗಿದ್ದಾರೆ. ಫವಾದ್ ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿ. ಅಣ್ಣ ಸಹ ತಂದೆಯಂತೆ ಪಶುವೈದ್ಯನಾದರೆ, ಮಿರ್ಜಾ ಮಾತ್ರ ಕುದುರೆಯನ್ನೇರಿದರು.

ಹಸ್ನೇನ್ ಮಿರ್ಜಾ ಅವರ ಕುಟುಂಬವು ಬೆಂಗಳೂರಿನಲ್ಲಿ ಸ್ಟಡ್ ಫಾರ್ಮ್ ಅನ್ನು ಹೊಂದಿದೆ. ಅವರಿಗೆ ಒಬ್ಬ ಹಿರಿಯ ಸಹೋದರ ಇದ್ದಾರೆ, ಅವರು ಕೂಡ ಪಶುವೈದ್ಯರೂ ಆಗಿದ್ದಾರೆ. ಹೀಗಾಗಿಯೇ ಫವಾದ್‌ ಅಂಬೆಗಾಲಿಡುತ್ತಿರುವಾಗಿನಿಂದ ಕುದುರೆಗಳ ಮೇಲೆ ಆಸಕ್ತಿ ಬೆಳೆಯಿತು. ಅವರು 5 ವರ್ಷ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡಲು ಪ್ರಾರಂಭಿಸಿದರು.

ನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್‌ ಭಾಸ್ಕರ್ ಗಾಣಿಗ

8ನೇ ವಯಸ್ಸಿನಲ್ಲೇ ಅಖಾಡಕ್ಕೆ ಇಳಿದ ಬಾಲಕ

8ನೇ ವಯಸ್ಸಿನಲ್ಲೇ ಅಖಾಡಕ್ಕೆ ಇಳಿದ ಬಾಲಕ

5ನೇ ವಯಸ್ಸಿನಿಂದಲೇ ಅಭ್ಯಾಸ ಆರಂಭಿಸಿದ್ದ ಫವಾದ್ ತಮ್ಮ 2000ನೇ ಇಸವಿಯಲ್ಲಿ ನಡೆದ ಸ್ಥಳೀಯ ಸ್ಪರ್ಧೆಯೊಂದರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದರು. ಆಗ ಅವರ ವಯಸ್ಸು ಕೇವಲ 8ವರ್ಷ. ಇದಾಗ ಬಳಿಕ ಫವಾದ್, 2002ರ ವೇಳೆಗೆ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಂಡರು.

ಹೀಗೆ ಸಾಧನೆಯ ಹಾದಿಯಲ್ಲಿ ಸಾಗಿದ ಫವಾದ್‌ಗೆ ಬೆನ್ನೆಲುಬಾಗಿ ನಿಂತಿದ್ದು ಬೆಂಗಳೂರಿನ ಎಂಬೆಸಿ ರೈಡಿಂಗ್ ಸ್ಕೂಲ್. ಅದರಲ್ಲೂ ಇಲ್ಲಿನ ಕೋಚ್‌ಗಳಾದ ಅಜಯ್ ಅಪ್ಪಚ್ಚು ಹಾಗೂ ನಾದಿಯಾ ಹರಿದಾಸ್ ಹೇಳಿ ಕೊಟ್ಟ ಪಾಠದ ಫಲವೇ ನಾನು ಇಂದು ಈ ಮಟ್ಟಕ್ಕೇರಲು ಕಾರಣ ಎಂದು ಫವಾದ್ ಹಲವು ಬಾರಿ ಹೇಳಿಕೊಂಡಿದ್ದಾರೆ.

ಕೇವಲ ಕುದುರೆ ಸವಾರಿ ಅಷ್ಟೇ ಅಲ್ಲದೆ ಫವಾದ್ ಲಂಡನ್‌ನ ನಾರ್ಥಾಂಪ್ಟನ್ ವಿಶ್ವವಿದ್ಯಾನಿಲಯದಲ್ಲಿ ಮಾನವ ಸಂಪನ್ಮೂಲ ಹಾಗೂ ಮನಃಶಾಸ್ತ್ರದಲ್ಲಿ ಪದವಿ ಸಹ ಪಡೆದಿದ್ದಾರೆ.

ನಮ್ಮೂರ ಪ್ರತಿಭೆ: ಜೋಧಪುರದಿಂದ ಬಂದು ಕರ್ನಾಟಕದಲ್ಲಿ ಮಿಂಚಿದ ಕರುಣ್ ನಾಯರ್

2014ರಲ್ಲಿ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗಿ

2014ರಲ್ಲಿ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗಿ

2014ರಲ್ಲಿ ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಫವಾದ್ 10ನೇ ಸ್ಥಾನ ಪಡೆದಿದ್ದರು. ಅಲ್ಲದೇ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡಿದ್ದರು. ಆದರೆ, ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದರು. ಬಳಿಕ ಫವಾದ್, ತರಬೇತಿಗೆಂದು ಜರ್ಮನಿಯ ಬೆಟಿನಾ ಹಾಯ್ಗೆ ತೆರಳಿದರು. ಈ ಜಾಗದಲ್ಲಿ ಕುದುರೆ ಸವಾರಿಯ ಮತ್ತಷ್ಟು ಕೌಶಲ್ಯಗಳನ್ನ ಕಲಿತ ಫವಾದ್‌ರ ಪ್ರದರ್ಶನ ಮತ್ತಷ್ಟು ಉತ್ತಮಗೊಂಡಿತು. ಇಟಲಿ, ಜರ್ಮನಿ ಹಾಗೂ ಹಾಲೆಂಡ್‌ನಲ್ಲಿ ನಡೆದ ಇಕ್ವೆಸ್ಟ್ರಿಯನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದರು.

ನಮ್ಮೂರ ಪ್ರತಿಭೆ: ಭಾರತೀಯ ವಾಲಿಬಾಲ್‌ನಲ್ಲಿ ಮಿಂಚುತ್ತಿರುವ ಅಶ್ವಲ್ ರೈ

2018ರ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಫವಾದ್

2018ರ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಫವಾದ್

ಇಂಡೋನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್‌ನ ಇಕ್ವೆಸ್ಟ್ರಿಯನ್ ಸ್ಪರ್ಧೆಯ ತಂಡದ ವಿಭಾಗದಲ್ಲಿ ಮತ್ತು ವೈಯಕ್ತಿಕ ವಿಭಾಗದಲ್ಲಿ ಫವಾದ್ ಮಿರ್ಜಾ ಎರಡು ಬೆಳ್ಳಿ ಪದಕಗಳನ್ನ ಮುಡಿಗೇರಿಸಿಕೊಂಡ ಭಾರತದ ಮೊದಲ ಅಥ್ಲಿಟ್ ಎಂಬ ಸಾಧನೆಯನ್ನ ಮಾಡಿದರು.
ಅದ್ರಲ್ಲೂ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದರು. ಏಷ್ಯಾಡ್ ಇಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ ಫವಾದ್ ಮಿರ್ಜಾ ಅಪರೂಪದ ಸಾಧನೆ ಮಾಡಿದರು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ 23ನೇ ಸ್ಥಾನ

ಟೋಕಿಯೋ ಒಲಿಂಪಿಕ್ಸ್ ನಲ್ಲಿ 23ನೇ ಸ್ಥಾನ

2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ, ಅಲ್ಲಿ ಪದಕ ಸಾಧನೆ ಮಾಡಬೇಕೆಂಬ ಗುರಿ ನೆಟ್ಟಿದ್ದ ಫವಾದ್ ಮಿರ್ಜಾ ಹಾಗೂ ಅವರ ಕುದುರೆ ಸೆನಿಯಾರ್ ಮೆಡಿಕಾಟ್ ಫೈನಲ್‌ನಲ್ಲಿ 23ನೇ ಸ್ಥಾನವನ್ನು ಪಡೆದು ಸ್ಪರ್ಧೆಯನ್ನು ಅಂತ್ಯಗೊಳಿಸಿತು. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಇಕ್ವೆಸ್ಟ್ರಿಯನ್ ಫವಾದ್ ಮಿರ್ಜಾ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಒಟ್ಟಾರೆಯಾಗಿ ಆತನ ಪ್ರದರ್ಶನ ಉತ್ತಮವಾಗಿತ್ತು.

ಫವಾದ್ ಮಿರ್ಜಾ ಸಾಧನೆಗಳು

ಫವಾದ್ ಮಿರ್ಜಾ ಸಾಧನೆಗಳು

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ 31 ಚಿನ್ನ, 16 ಬೆಳ್ಳಿ, 22 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುವ ಫವಾದ್ ಮಿರ್ಜಾ, 2019ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರಿಂದ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ.

ಇದೇ ವರ್ಷದಲ್ಲಿ ಫವಾದ್ ಅಕ್ಟೋಬರ್ 2019 ರಲ್ಲಿ, ತಮ್ಮ ಕುದುರೆ ಡಜಾರಾದೊಂದಿಗೆ ಪೋಲೆಂಡ್‌ನ ಸ್ಟ್ರೆಜೆಗೊಮ್‌ನಲ್ಲಿ ನಡೆದ CCI3*-S ಈವೆಂಟ್‌ನಲ್ಲಿ ಚಿನ್ನವನ್ನು ಗೆದ್ದರು.

ಈ ನಂತರದಲ್ಲಿ ಮಿರ್ಜಾ 2020 ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಕಳೆದ 20 ವರ್ಷಗಳಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಅಶ್ವಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದ್ರೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಫವಾದ್ ಮಿರ್ಜಾ ಹಾಗೂ ಅವರ ಕುದುರೆ ಸೆನಿಯಾರ್ ಮೆಡಿಕಾಟ್ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಒಟ್ಟಾರೆಯಾಗಿ ನಿಜಕ್ಕೂ ಅದ್ಭುತವಾದ ಪ್ರದರ್ಶನವಾಗಿತ್ತು.

ಮುಂಬರುವ ಒಲಿಂಪಿಕ್ಸ್‌ನಲ್ಲಿ ಇಕ್ವೆಸ್ಟ್ರಿಯನ್ ವಿಭಾಗದಲ್ಲಿ ಫವಾದ್ ಭಾರತಕ್ಕೆ ಪದಕ ಗೆದ್ದು ತರಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.

Story first published: Monday, May 16, 2022, 13:58 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X