ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಕ್ರೀಡಾಪಟುವಾಗಿ ಮಿಂಚಿ ಈಗ ಕೋಚ್ ಆಗಿ ಪ್ರತಿಭೆಗಳನ್ನು ಹುಟ್ಟುಹಾಕುತ್ತಿದ್ದಾರೆ ಪ್ರಮೀಳಾ ಅಯ್ಯಪ್ಪ

Nammura Pratibhe: Former heptathlete Pramila Aiyappa short story and achievements

ಪ್ರಮೀಳಾ ಅಯ್ಯಪ್ಪ ಭಾರತ ಕಂಡ ಪ್ರತಿಭಾವಂತ ಹೆಪ್ಟಾಥ್ಲೀಟ್. 1977ರ ಮಾರ್ಚ್ 8ರಂದು ಕೊಡಗಿನಲ್ಲಿ ಜನಿಸಿದ ಪ್ರಮೀಳಾ ಅಯ್ಯಪ್ಪ 2000ದಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಚೊಚ್ಚಲ ಕ್ರೀಡಾಕೂಟದಲ್ಲಿ ಕಣಕ್ಕಿಳಿದಿದ್ದರು. ಈ ಕ್ರೀಡಾಕೂಟದ ಮಹಿಳಾ ಹೆಪ್ಟಾಥ್ಲೀಟ್ ವಿಭಾಗದಲ್ಲಿ 5548 ಅಂಕಗಳನ್ನು ಪಡೆದುಕೊಂಡು 24ನೇ ಸ್ಥಾನ ಗಳಿಸಿದ್ದ ಪ್ರಮೀಳಾ ಅಯ್ಯಪ್ಪ ನಂತರ ಸುಮಾರು ಎಂಟು ವರ್ಷಗಳ ಕಾಲ ಯಾವುದೇ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.

ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ಶತಕ ಬಾರಿಸಿರುವ ಕೀಪರ್‌ಗಳ ಪಟ್ಟಿ; 25 ಶತಕ ಹೊಂದಿರುವ ಈತ ನಂಬರ್ 1ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ಶತಕ ಬಾರಿಸಿರುವ ಕೀಪರ್‌ಗಳ ಪಟ್ಟಿ; 25 ಶತಕ ಹೊಂದಿರುವ ಈತ ನಂಬರ್ 1

ನಂತರ ಎಂಟು ವರ್ಷಗಳ ಬಳಿಕ ಮತ್ತೆ 2008ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಪ್ರಮೀಳಾ ಅಯ್ಯಪ್ಪ ಮೊದಲಿಗೆ 5771 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 28ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಉಕ್ರೇನ್‌ನ ಲ್ಯುಡ್ಮಿಲಾ ಬ್ಲೋನ್ಸ್ಕಾ ಅವರು ಮಿಥೈಲ್‌ಟೆಸ್ಟೋಸ್ಟೆರಾನ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದ ಕಾರಣ ಬೆಳ್ಳಿ ಪದಕದಿಂದ ವಂಚಿತರಾದರು ಹಾಗೂ ಈ ಮೂಲಕ ಪ್ರಮೀಳಾ ಅಯ್ಯಪ್ಪ ಉನ್ನತ ಸ್ಥಾನವನ್ನು ಹೊಂದಿದರು.

Chess Olympiad 2022: ಚೆನ್ನೈ ಹೊಟೇಲ್ ಆತಿಥ್ಯಕ್ಕೆ ಮನಸೋತ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್Chess Olympiad 2022: ಚೆನ್ನೈ ಹೊಟೇಲ್ ಆತಿಥ್ಯಕ್ಕೆ ಮನಸೋತ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್

ಇನ್ನು 2010ರಲ್ಲಿ ಡೆಲ್ಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಪ್ರಮೀಳಾ ಅಯ್ಯಪ್ಪ ಐದನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪ ಅಂತರದಲ್ಲಿ ಕೈತಪ್ಪಿಸಿಕೊಂಡರು. ಸದ್ಯ ಕೋಚ್ ಆಗಿ ತೊಡಗಿಸಿಕೊಂಡಿರುವ ಪ್ರಮೀಳಾ ಅಯ್ಯಪ್ಪ ಹಲವಾರು ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಮುಂದಿನ ಪೀಳಿಗೆಗೆ ಉತ್ತಮ ಕ್ರೀಡಾಪಟುಗಳನ್ನು ರೂಪಿಸುತ್ತಿದ್ದಾರೆ.

ಪ್ರಮೀಳಾ ಅಯ್ಯಪ್ಪ ಸಾಧನೆ

ಪ್ರಮೀಳಾ ಅಯ್ಯಪ್ಪ ಸಾಧನೆ

ಒಮ್ಮೆ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಬೆಳ್ಳಿ

ಒಮ್ಮೆ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಮ್ಮೆ ಟಾಪ್ ಎಂಟರಲ್ಲಿ ಸ್ಥಾನ

ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದ ಟಾಪ್ ಎಂಟರಲ್ಲಿ ಎರಡು ಬಾರಿ ಸ್ಥಾನ

ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್

ಕ್ರಾರ್ಟರ್ ಮೈಲರ್‌ ಜತೆ ವಿವಾಹ, ಮಗಳೂ ಸಹ ಕ್ರೀಡಾಪಟು

ಕ್ರಾರ್ಟರ್ ಮೈಲರ್‌ ಜತೆ ವಿವಾಹ, ಮಗಳೂ ಸಹ ಕ್ರೀಡಾಪಟು

ಇನ್ನು ಪ್ರಮೀಳಾ ಅಯ್ಯಪ್ಪ ಕ್ವಾರ್ಟರ್ ಮೈಲರ್ ಬಿ ಪಿ ಅಯ್ಯಪ್ಪ ಅವರನ್ನು ವಿವಾಹವಾಗಿದ್ದು, ಇವರದ್ದು ಕ್ರೀಡಾಪಟುಗಳ ಕುಟುಂಬವೆನ್ನಬಹುದು. ಹೌದು, ದಂಪತಿಗಳು ಮಾತ್ರವಲ್ಲದೇ ಇವರ ಪುತ್ರಿ ಉನ್ನತಿ ಅಯ್ಯಪ್ಪ ಕೂಡ ಕ್ರೀಡಾಕ್ಷೇತ್ರಕ್ಕೆ ಧುಮುಕಿದ್ದು, ಹರ್ಡಲ್ಸ್ ವಿಭಾಗದಲ್ಲಿ ಭಾಗವಹಿಸಿ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.

ಉನ್ನತಿ ಅಯ್ಯಪ್ಪ ಸಾಧನೆ

ಉನ್ನತಿ ಅಯ್ಯಪ್ಪ ಸಾಧನೆ

ಇನ್ನು ಹಲವು ಪ್ರತಿಭೆಗಳಿಗೆ ತರಬೇತಿ ನೀಡುತ್ತಿರುವ ಪ್ರಮೀಳಾ ಅಯ್ಯಪ್ಪ ತಮ್ಮ ಮಗಳನ್ನೂ ಸಹ ಯಶಸ್ವಿ ಕ್ರೀಡಾಪಟುವನ್ನಾಗಿ ಮಾಡುವಲ್ಲಿ ಸಫಲರಾಗಿದ್ದಾರೆ. ಹದಿನೇಳು ವರ್ಷದ ಉನ್ನತಿ ಅಯ್ಯಪ್ಪ ಮಾಡಿರುವ ಸಾಧನೆಗಳ ಕಿರುಪಟ್ಟಿ ಈ ಕೆಳಕಂಡಂತಿದೆ.

• ತನ್ನ ತಾಯಿಯಂತೆಯೇ ಕ್ರೀಡಾ ಕ್ಷೇತ್ರಕ್ಕೆ ಧುಮುಕಿರುವ ಉನ್ನತಿ ಅಯ್ಯಪ್ಪ ರಾಂಚಿಯಲ್ಲಿ ನಡೆದ ಸ್ಟೇಟ್ಸ್ ಚಾಂಪಿಯನ್‍ಶಿಪ್ ಟ್ರಯಥ್ಲಾನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಲಾಂಗ್ ಜಂಪ್ ವಿಭಾಗದಲ್ಲಿ 5.40 ಮೀಟರ್ ಸಾಧನೆ ಮಾಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

• ಅಸ್ಸಾಂನಲ್ಲಿ ನಡೆದ ನ್ಯಾಷನಲ್ ಮೀಟ್ 2021ರಲ್ಲಿ ಭಾಗವಹಿಸಿದ್ದ ಉನ್ನತಿ ಅಯ್ಯಪ್ಪ ಅಂಡರ್ 16 ಹರ್ಡಲ್ಸ್ ವಿಭಾಗದಲ್ಲಿ ಚಿನ್ನ ಹಾಗೂ ಅಂಡರ್ 16 300 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

• ಇತ್ತೀಚೆಗಷ್ಟೇ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಉನ್ನತಿ ಅಯ್ಯಪ್ಪ 100 ಮೀಟರ್ ಬಾಲಕಿಯರ ಹರ್ಡಲ್ಸ್ ವಿಭಾಗದಲ್ಲಿ 14 ಸೆಕೆಂಡುಗಳಿಗೆ ಗುರಿಯನ್ನು ಮುಟ್ಟಿ ಚಿನ್ನದ ಪದಕವನ್ನು ಗೆದ್ದರು.

Story first published: Wednesday, July 27, 2022, 18:57 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X