ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಪಿಟಿ ಉ‍ಷಾ ವಿರುದ್ಧ ಎರಡು ಬಾರಿ ಗೆಲುವು ಸಾಧಿಸಿದ್ದ ಕನ್ನಡತಿ ಅಥ್ಲೀಟ್ ಅಶ್ವಿನಿ ನಾಚಪ್ಪ

Nammura Pratibhe: Indian athlete Ashwini Nachappa life story and her achivement

ಕ್ರೀಡಾಲೋಕಕ್ಕೆ ಕರ್ನಾಟಕ ಹಲವಾರು ಪ್ರತಿಭೆಗಳನ್ನು ನೀಡಿದೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಹಲವರು ಸಾಧನೆ ಮಾಡಿದ್ದಾರೆ ಮಾಡುತ್ತಿದ್ದಾರೆ. ಈ ಮೂಲಕ ಕ್ರೀಡಾಲೋಕದಲ್ಲಿ ಕರ್ನಾಟಕದ ಹೆಸರನ್ನು ಉತ್ತುಂಗಕ್ಕೇರಿಸುತ್ತಿದ್ದಾರೆ. 80ರ ದಶಕದಲ್ಲಿಯೇ ಅಟ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದ ಕನ್ನಡತಿ ಎಂದರೆ ಅದು ಅಶ್ವಿನಿ ನಾಚಪ್ಪ. ಟ್ರ್ಯಾಕ್ ಹಾಗೂ ಫಿಲ್ಡ್ ವಿಭಾಗದಲ್ಲಿ ಅಶ್ವಿನಿ ನಾಚಪ್ಪ ಮಾಡಿದ ಸಾಧನೆ ಸ್ಮರಣೀಯ.

ಕೊಡಗು ಮೂಲದ ಅಶ್ವಿನಿ ನಾಚಪ್ಪ ಅಥ್ಲೆಟಿಕ್ಸ್ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಿದ ಸಾಧಕಿ. ಅದಾದ ಬಳಿಕ ಸಿನಿಮಾ ರಂಗದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದು ಅಲ್ಲಿಯೂ ಸೈ ಎನಿಸಿಕೊಂಡ ಪ್ರತಿಭೆ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ, ಸಮಾಜ ಸೇವೆ, ಕ್ರೀಡಾ ಅಕಾಡೆಮಿಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಶ್ವಿನಿ ನಾಚಪ್ಪ. ಈ ಕನ್ನಡದ ಹೆಮ್ಮೆಯ ಕ್ರೀಡಾ ಸಾಧಕಿಯ ಕೆಲ ಪ್ರಮುಖ ಸಾಧನೆಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

Ind vs WI: ಭಾರತದ ಪರ ಯಾರೂ ಮಾಡದ ಸಾಧನೆ ಮಾಡಿ ಇತಿಹಾಸ ಬರೆದ ಶಿಖರ್ ಧವನ್Ind vs WI: ಭಾರತದ ಪರ ಯಾರೂ ಮಾಡದ ಸಾಧನೆ ಮಾಡಿ ಇತಿಹಾಸ ಬರೆದ ಶಿಖರ್ ಧವನ್

ಗಗನಸಖಿಯಾಗುವ ಕನಸು, ಕ್ರೀಡಾಕ್ಷೇತ್ರದಲ್ಲಿ ಸಾಧನೆ

ಗಗನಸಖಿಯಾಗುವ ಕನಸು, ಕ್ರೀಡಾಕ್ಷೇತ್ರದಲ್ಲಿ ಸಾಧನೆ

1967 ಅಕ್ಟೋಬರ್ 21ರಂದು ಜನಿಸಿದ ಅಶ್ವಿನಿ ನಾಚಪ್ಪ ಅವರಿಗೆ ಗಗನಸಖಿಯಾಗಬೇಕು ಎಂಬುದು ಕನಸಾಗಿತ್ತು. ಆದರೆ ಕ್ರೀಡಾಲೋಕ ಅವರನ್ನು ಕೈಬೀಸಿ ಕರೆದಿತ್ತು. ತಮ್ಮ ಮನೆಯ ಹತ್ತಿರದಲ್ಲಿಯೇ ಕ್ರೀಡಾಂಗಣ ಕುಡ ಇದ್ದದ್ದು ಇದಕ್ಕೆ ಪ್ರಮುಖ ಕಾರಣವಾಯಿತು. ಈ ಮೂಲಕ ತಮ್ಮ ಆರಂಭದ ಕನಸನ್ನು ತೊರೆದು ಅಥ್ಲಿಟಿಕ್ಸ್‌ನತ್ತ ಗಮನಹರಿಸಿದರು. ನಳಿಕ ಒಂದಾದ ನಂತರ ಮತ್ತೊಂದರಂತೆ ಸಾಧನೆ ಮಾಡುತ್ತಾ ಮುನ್ನುಗ್ಗಿ ಕ್ರೀಡಾಕ್ಷೇತ್ರದಲ್ಲಿ ಮನೆ ಮಾತಾದರು.

ಪಿಟಿ ಉಷಾ ಅವರನ್ನೇ ಮಣಿಸಿದ್ದರು ಅಶ್ವಿನಿ ನಾಚಪ್ಪ

ಪಿಟಿ ಉಷಾ ಅವರನ್ನೇ ಮಣಿಸಿದ್ದರು ಅಶ್ವಿನಿ ನಾಚಪ್ಪ

ಭಾರತ ಕಂಡ ಶ್ರೇಷ್ಠ ಮಹಿಳಾ ಅಥ್ಲೀಟ್‌ಗಳಲ್ಲಿ ಪಿಟಿ ಉಷಾ ಪ್ರಮುಖರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಪಿಟಿ ಉಷಾ ಅವರನ್ನು ಎರಡು ಬಾರಿ ಸೋಲಿಸಿ ಸುದ್ದಿಯಾಗಿದ್ದರು ಅಶ್ವಿನಿ ನಾಚಪ್ಪ. 1980ರ ದಶಕದ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಿಟಿ ಉಷಾ ಅವರನ್ನು ಹಿಂದಿಕ್ಕಿ ಅಶ್ವಿನಿ ನಾಚಪ್ಪ ಚಿನ್ನದ ಪದಕ ಗೆದ್ದುಕೊಂಡಿದ್ದರು. ನಂತರ 1988ರಲ್ಲಿ ಸಿಯೋನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರ ರಿಲೆ ತಂಡದ ಸದಸ್ಯೆಯಾಗಿ ಭಾಗಿಯಾಗಿದ್ದರು. ಇನ್ನು 1992ರಲ್ಲಿ ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿಯೂ ನಾಲ್ಕು ಚಿನ್ನದ ಪದಕವನ್ನು ಗೆದ್ದಿದ್ದರು ಅಶ್ವಿನಿ ನಾಚಪ್ಪ.

ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಸಾಹಸಿ

ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಸಾಹಸಿ

ಇನ್ನು ಗಾಯದ ಕಾರಣದಿಂದಾಗಿ ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿದ ಅಶ್ವಿನಿ ನಾಚಪ್ಪ ಬಳಿಕ ಸಿನಿಮಾ ಕ್ಷೇತ್ರದತ್ತ ಚಿತ್ತ ಹರಿಸಿದರು. ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲಿ ನಟಿಯಾಗಿಯೂ ಮಿಂಚಿದ್ದಾರೆ. ಇದರಲ್ಲಿ ತಮ್ಮದೇ ಜೀವನಾಧಾರಿತ 'ಅಶ್ವಿನಿ' ಚಲನಚಿತ್ರವೂ ಸೇರಿದೆ. ಈ ಚಿತ್ರದ ನಟನೆಗಾಗಿ ಅಶ್ವಿನಿ ನಾಚಪ್ಪ ಆಂದ್ರಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿಗೂ ಪಾತ್ರವಾಗಿದ್ದಾರೆ. ಬಳಿಕ ಸಿನಿಮಾ ಕ್ಷೇತ್ರದಿಂದಲೂ ಅವರು ದೂರವಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ನಿರ್ಧಾರವನ್ನು ಮಾಡಿದರು.

ಅರ್ಜುನ ಪ್ರಶಸ್ತಿ ವಿಜೇತೆ ಅಶ್ವಿನಿ ನಾಚಪ್ಪ

ಅರ್ಜುನ ಪ್ರಶಸ್ತಿ ವಿಜೇತೆ ಅಶ್ವಿನಿ ನಾಚಪ್ಪ

ಕನ್ನಡದ ಹೆಮ್ಮೆಯ ಅಥ್ಲೀಟ್ ಅಶ್ವಿನಿ ನಾಚಪ್ಪ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸರ್ಕಾರ ನೀಡುವ ಅರ್ಜುನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕರುಂಬಯ್ಯ ಎಂಬ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಿದ ಅಶ್ವಿನಿ ನಾಚಪ್ಪ ಅವರು ಸಾಕಷ್ಟು ಕ್ರೀಡಾ ಪ್ರತಿಭೆಗಳಿಗೆ ವೇದಿಕೆಯನ್ನೂ ಒದಗಿಸಿದ್ದಾರೆ. ಇನ್ನು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಬಡ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇನ್ನು ಅಶ್ವಿನಿ ನಾಚಪ್ಪ ಅವರಿಗೆ ಇಬ್ಬರು ಪುತ್ರಿಯರಿದ್ದು ಇಬ್ಬರು ಕೂಡ ಬ್ಯಾಡ್ಮಿಂಟನ್ ಆಟಗಾರ್ತಿಯರು.

Story first published: Thursday, July 28, 2022, 22:14 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X