ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ನೀರಜ್ ಹಾದಿಯಲ್ಲಿ ಕನ್ನಡಿಗ: ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಮನು ಶೆಟ್ಟಿ

Nammura Pratibhe: Indian athlete Manu Shetty life story and her achivement

ಕರ್ನಾಟಕದಲ್ಲಿ ಇತ್ತೀಚೆಗೆ ಸಾಕಷ್ಟು ಯುವ ಕ್ರೀಡಾಪಟುಗಳು ಭರವಸೆ ಮುಡಿಸುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳಲ್ಲಿಯೂ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಂಥಾ ಕ್ರೀಡಾಪಟುಗಳ ಪೈಕಿ ಯುವ ಜಾವೆಲಿನ್ ಎಸೆತಗಾರ ಮನು ಶೆಟ್ಟಿ ಕೂಡ ಒಬ್ಬರು. ಮೂಲತಃ ಹಾಸನದವರಾದ ಮನು ಶೆಟ್ಟಿ ಜಾವೆಲಿನ್ ಎಸೆತದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಇದೀಗ ಕಾಮನ್‌ವೆಲ್ತ್ ಗೇಮ್ಸ್‌ಗೂ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದಾರೆ.

ಇತ್ತೀಚೆಗೆ ಕೇರಳದ ತಿರುವನಂತಪುರಂ‌ನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ 82.43 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದರು ಮನು ಶೆಟ್ಟಿ. ಈ ಮೂಲಕ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್ ಹಾಗೂ ನಂತರ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಕನ್ನಡಿಗ ಮನು ಶೆಟ್ಟಿ ಅರ್ಹತೆ ಪಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಿದ್ಧವಾಗಿದ್ದಾರೆ.

ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮನು ಶೆಟ್ಟಿ: ಮನು ಶೆಟ್ಟಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ನಾಗನಹಳ್ಳಿಯ ನಿವಾಸಿಯಾಗಿರುವ ಮನು ಪ್ರಾಥಮಿಕ ಶಿಕ್ಷಣವನ್ನು ಬೇಲೂರಿನಲ್ಲಿಯೇ ಮುಗಿಸಿದ್ದಾರೆ. ಪಿಯುಸಿ ಬಳಿಕ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿತ್ತಾ ಸಾಗಿದ ಮನು ದ್ವಿತೀಯ ವರ್ಷದ ಪಿಯಿಸಿ ವೇಳೆಗೆ ಕ್ರೀಡಾ ಕೋಟಾದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಇದು ಮನು ಅವರ ಕ್ರೀಡಾ ಬದುಕಿಗೆ ಮತ್ತೊಂದು ತಿರುವು ನೀಡಿತು.

ವಾಲಿಬಾಲ್ ಮೇಲೆ ಆಸಕ್ತಿ: ಜಾವೆಲಿನ್ ಎಸೆತದಲ್ಲಿ ಸಾಧನೆ ಮಾಡುವುದಕ್ಕೂ ಮುನ್ನ ಶಾಲಾ ದಿನಗಳಲ್ಲಿ ವಾಲಿಬಾಲ್, ಲಾಂಗ್ ಜಂಪ್ ಮತ್ತು ಹೈಜಂಪ್‌ನಲ್ಲಿ ಆಸಕ್ತಿ ಹೊಂದಿದ್ದರು. 2014-15ರಲ್ಲಿ ಮೊದಲ ಬಾರಿಗೆ ಜಾವಲಿನ್ ಎಸೆತ ಅಬ್ಯಾಸ ಆರಂಭಿಸಿದ್ದರು. ದಯಹಿಕ ಶಿಕ್ಷಕರು ನೀಡಿದ್ದ ಬಿದಿರಿನ ಜಾವೆಲಿನ್ ಕಂಡು ಆಸಕ್ತರಾದ ಅವರಿಗೆ ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತರಬೇತಿ ನಿಡುವವರು ಯಾರೂ ಇರಲಿಲ್ಲ. ಯೂಟ್ಯೂಬ್ ವಿಡಿಯೋಗಳ್ನು ನೀಡಿಕೊಂಡು ಅಭ್ಯಾಸ ನಡೆಸುತ್ತಿದ್ದರು. ತಾಂತ್ರಿಕವಾಗಿ ಹೆಚ್ಚಿನ ನೈಪುಣ್ಯತೆಯನ್ನು ಆರಂಭದಲ್ಲಿ ಗಳಿಸಿರಲಿಲ್ಲ. ಆದರೆ ಸೇನಾ ಕ್ರೀಡಾ ಕೇಂದ್ರದಲ್ಲಿ ಈ ಕುರಿತ ಕೌಶಲ್ಯವನ್ನು ಕರಹತ ಮಾಡಿಕೊಂಡರು.

Breaking: IND vs WI; ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟBreaking: IND vs WI; ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ

ನೀರಜ್ ಚೋಪ್ರಾ ಕೋಚ್ ಮನುವಿಗೂ ಗುರು: ಆರ್ಮಿ ಇನ್‌ಸ್ಟಿಟ್ಯೂಟ್ ಆಪ್ ಸ್ಪೋರ್ಟ್ಸ್‌ನಲ್ಲಿ 2019ರ ಬಳಿಕ ಮನು ಶೆಟ್ಟಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಕೋಚ್ ಕಾಶಿನಾಥ್ ನಾಯ್ಕ್ ಮನು ಅವರಿಗೂ ಕೋಚ್ ತರಬೇತಿ ನೀಡಲು ಆರಂಭಿಸಿದ್ದರು. ಖೇಲೋ ಇಂಡಿಯಾದಲ್ಲಿ ನಿಡಿದ್ದ ಪ್ರದರ್ಶನವನ್ನು ನೋಡಿ ಮವು ಅವರಲ್ಲಿನ ಸಾಮರ್ಥ್ಯವನ್ನು ಮನಗಂಡಿದ್ದರು. ನಂತರ ಹಂತಹಂತವಾಗಿ ಬೆಳಯುತ್ತಾ ಸಾಗಿದ ಮನು ಶೆಟ್ಟಿ ನೀರಜ್ ಚೋಪ್ರಾ ಅವರ ಸಾಧನೆಯಿಂದ ಮತ್ತಷ್ಟು ಹುರುಪು ಪಡೆದುಕೊಂಡರು.

ಆರಂಭಿಕ ದಿನಗಳಿಂದಲೂ ನೀರಜ್ ಚೋಪ್ರಾ ಅವರನ್ನು ನೋಡಿಕೊಂಡು ಬೆಳೆದ ಮನು ಅವರ ಸಾಧನೆಯಿಂದ ಮತ್ತಷ್ಟು ಪ್ರೇರಣೆ ಪಡೆದುಕೊಂಡಿದ್ದಾರೆ. ಇದೀಗ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧೆಗೆ ಮನು ಶೆಟ್ಟಿ ಸಜ್ಜಾಗಿದ್ದು ಭಾರತ ಪರವಾಗಿ ಅತ್ಯುತ್ತಮ ಸಾಧನೆ ಮಾಡುವ ಗುರಿಯಿಟ್ಟುಕೊಂಡಿದ್ದಾರೆ.

Story first published: Friday, July 15, 2022, 10:07 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X