ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಡಿಸ್ಕಸ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕ ವಿಕಾಸ್ ಗೌಡ

Nammura Pratibhe: Indian former athlete Vikas Gowda life story and her achivement

ಕರ್ನಾಟಕ ಕಂಡ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಮೈಸೂರು ಮೂಲದ ವಿಕಾಸ್ ಗೌಡ ಕೂಡ ಒಬ್ಬರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಸ್ಕಸ್ ಎಸೆತದಲ್ಲಿ ಹಲವು ಪದಕ ಗೆದ್ದಿರುವ ವಿಕಾಸ್ ಗೌಡ್ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 56 ವರ್ಷಗಳ ಬಳಿಕ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಕಾಸ್ ಗೌಡ ಕ್ರೀಡಾ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಕಾಲ ಸಕ್ರಿಯವಾಗಿದ್ದು ಅನೇಕ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ. ಕಾಮನ್‌ವೆಲ್ತ್‌ ಪುರುಷರ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ವಿಕಾಸ್ ಗೌಡ ತಮ್ಮದಾಗಿಸಿದ್ದಾರೆ. ಕ್ರೀಡಾ ಲೋಕದ ಈ ಸಾಧಕನ ಜೀವನದ ಕೆಲ ಕುತೂಹಲಕಾರಿ ಮಾಹಿತಿಗಳನ್ನು ನೋಡೋಣ..

ನಮ್ಮೂರ ಪ್ರತಿಭೆ: ನೂರಾರು ಚಿನ್ನದ ಪದಕಗಳ ಒಡತಿ ಮಂಗಳೂರಿನ ಭವಾನಿ ಜೋಗಿನಮ್ಮೂರ ಪ್ರತಿಭೆ: ನೂರಾರು ಚಿನ್ನದ ಪದಕಗಳ ಒಡತಿ ಮಂಗಳೂರಿನ ಭವಾನಿ ಜೋಗಿ

ತಂದೆಯಿಂದಾಗಿ ಕ್ರೀಡಾ ಕ್ಷೇತ್ರದ ಮೇಲೆ ಆಸಕ್ತಿ

ತಂದೆಯಿಂದಾಗಿ ಕ್ರೀಡಾ ಕ್ಷೇತ್ರದ ಮೇಲೆ ಆಸಕ್ತಿ

ಕರ್ನಾಟಕದ ಮೈಸೂರ ಮೂಲದ ವಿಕಾಸ್ ಗೌಡ ಯುನೈಟೆಡ್ ಸ್ಟೇಟ್ಸ್‌ನ ಮೆರಿ ಲ್ಯಾಂಡ್‌ನಲ್ಲಿ ಬೆಳೆದರು. ವಿಕಾಸ್ ಗೌಡ ಅವರ ತಂದೆ ಶಿವೇ ಗೌಡ ಅವರು ಕೂಡ ಕ್ರೀಡಾಪಟು. ಶಾಟ್‌ಪುಟ್ ಹಾಗೂ ಡಿಸ್ಕಸ್ ಎಸೆತದ ಕ್ರೀಡಾಪಟುವಾಗಿದ್ದರು. 1988ರ ಭಾರತೀಯ ಒಲಿಂಪಿಕ್ಸ್‌ನ ಟ್ರ್ಯಾಕ್ ಟೀಮ್‌ಗೆ ಕೋಚ್ ಆಗಿದ್ದರು ಶಿವೇ ಗೌಡ ಅವರು. ಹೀಗಾಗಿ ಬಾಲ್ಯದಿಂದಲೇ ಈ ಕ್ಷೇತ್ರದ ಕಡೆಗೆ ಒಲವು ಮೂಡಿತ್ತು. ತಂದೆಯಿಂದಲೇ ತರಬೇತಿ ಪಡೆದ ವಿಕಾಸ್ ಗೌಡ ಅವರು ಪ್ರತಿ ಹಂತದಲ್ಲಿಯೂ ಬೆಳವಣಿಗೆ ಸಾಧಿಸುತ್ತಾ ಬಂದರು. ನಂತರ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತಾದರು.

ವಿಕಾಸ್ ಹೆಸರಿನಲ್ಲಿದೆ ರಾಷ್ಟ್ರೀಯ ದಾಖಲೆ

ವಿಕಾಸ್ ಹೆಸರಿನಲ್ಲಿದೆ ರಾಷ್ಟ್ರೀಯ ದಾಖಲೆ

ಡಿಸ್ಕಸ್ ಥ್ರೋನಲ್ಲಿ ವಿಕಾಸ್ ಗೌಡ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. 66.28ಮೀ. ದೂರ ಎಸೆಯುವ ಮೂಲಕ 2012ರಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ವಿಕಾಸ್ ಭಾರತೀಯ ಅಗ್ರ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 2013 ಮತ್ತು 2015ರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ ವಿಕಾಸ್. ಜೊತೆಗೆ 2010ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ, 2014ರ ಗ್ಲಾಸ್ಗೋ ಗೇಮ್ಸ್ ನಲ್ಲಿ ಚಿನ್ನ ಜಯಿಸಿದ ಸಾಧನೆ ಮಾಡಿದ್ದರಲ್ಲದೆ 2010 ಏಷ್ಯನ್ ಗೇಮ್ಸ್ ನಲ್ಲಿ ಕಂಚು, 2014ರಲ್ಲಿ ಬೆಳ್ಳಿ ಪದಕವನ್ನು ಕೂಡ ಗೆದ್ದಿದ್ದಾರೆ.

ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ

ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ

ಇನ್ನು ಕಾಮನ್‌ವೆಲ್ತ್‌ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಪಡೆಕ ಗೆದ್ದಿರುವ ವಿಕಾಸ್ ಗೌಡ ವಿಶ್ವದ ಶ್ರೇಷ್ಠ ಕ್ರೀಡಾಕೂಟವಾಗಿರುವ ಒಲಿಂಪಿಕ್ಸ್‌ನಲ್ಲಿ ಕೂಡ ಸ್ಪರ್ಧಿಸಿದ್ದಾರೆ. ನಾಲ್ಕು ಒಲಿಂಪಿಕ್ಸ್‌ನಲ್ಲಿ ವಿಕಾಸ್ ಗೌಡ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಥೆನ್ಸ್‌, ಬೀಜಿಂಗ್‌, ಲಂಡನ್‌ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ವಿಕಾಸ್ ಗೌಡ. ಬೀಜಿಂಗ್‌ ಒಲಿಂಪಿಕ್ಸ್‌ ವಿಕಾಸ್‌ ಅವರ ಪಾಲಿನ ಮೊದಲ ಒಲಿಂಪಿಕ್ಸ್‌ ಆಗಿದ್ದು ಅಲ್ಲಿ 22ನೇ ಸ್ಥಾನ ಗಳಿಸಿ ಫೈನಲ್‌ ತಲುಪುವಲ್ಲಿ ವಿಫಲರಾಗಿದ್ದರು. ಆದರೆ ಲಂಡನ್‌ ಒಲಿಂಪಿಕ್ಸ್‌ನಲ್ಲಿ 65.20 ಮೀ. ದೂರಕ್ಕೆ ಎಸೆದು ಎಂಟನೇ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.

ಐತಿಹಾಸಿಕ ಸಾಧನೆ ಮಾಡಿದ ವಿಕಾಸ್ ಗೌಡ

ಐತಿಹಾಸಿಕ ಸಾಧನೆ ಮಾಡಿದ ವಿಕಾಸ್ ಗೌಡ

ವಿಕಾಸ್ ಗೌಡ ಕಾಮನ್‌ವೆಲ್ತ್ ಕ್ರೀಡಾಕೂಡದಲ್ಲಿ ಚಿನ್ನದ ಪದಕ ಗೆದ್ದ ಕೇವಲ ಎರಡನೇ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದಾರೆ. 1958ರಲ್ಲಿ ಕಾರ್ಡಿಪ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 'ಫ್ಲೈಯಿಂಗ್‌ ಸಿಖ್‌' ಖ್ಯಾತಿಯ ಮಿಲ್ಖಾ ಸಿಂಗ್‌ 440 ಯಾರ್ಡ್‌ಗಳ ಓಟದಲ್ಲಿ ಚಿನ್ನ ಗೆದ್ದ ಬಳಿಕ 56 ವರ್ಷಗಳ ನಂತರ ವಿಕಾಸ್‌ ಗೌಡ ಅಥ್ಲೀಟ್ ವಿಭಾಗದಲ್ಲಿ ಈ ಸಾಧನೆ ಮತ್ತೊಮ್ಮೆ ಮಾಡಿದ್ದಾರೆ. 2014ರ ಗ್ಲಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಿಸ್ಕಸ್‌ ಎಸೆತದಲ್ಲಿ 63.64 ಮೀ. ದೂರಕ್ಕೆ ಎಸೆದು ಚಿನ್ನದ ಪದಕ ಗೆದ್ದು ಈ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು. ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶ್ಸತಿ ನೀಡಿ ಗೌರವಿಸಿದೆ. ಇವರು 2018ರಲ್ಲಿ ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದರು.

Story first published: Wednesday, June 8, 2022, 17:52 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X