ನಮ್ಮೂರ ಪ್ರತಿಭೆ: ಬೆಂಗಳೂರಿನ ಮಿಂಚಿನ ಓಟಗಾರ್ತಿ ರೀನಾ ಜಾರ್ಜ್‌

ರೀನಾ ಜಾರ್ಜ್‌, ರಾಷ್ಟ್ರಮಟ್ಟದ ಟ್ರ್ಯಾಕ್‌ ಅಂಡ್ ಫೀಲ್ಡ್‌ ಓಟಗಾರ್ತಿ. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಹೆಮ್ಮೆಯ ಓಟಗಾರ್ತಿ. ಬೆಂಗಳೂರು ಮೂಲದ ರೀನಾ ಜಾರ್ಜ್‌ ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ , ಚಾಂಪಿಯನ್‌ಶಿಪ್‌ಗಳಲ್ಲಿ ಭಾಗಿಯಾಗಿ ತಮ್ಮ ವೇಗದ ಓಟವನ್ನ ಪ್ರದರ್ಶಿಸಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ಅಂತರಾಷ್ಟ್ರೀಯ ಅಥ್ಲೀಟ್‌ ಕನ್ನಡತಿ ರೀನಾ ಜಾರ್ಜ್‌ ಕುರಿತಾಗಿ ಪ್ರಮುಖ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ರೀನಾ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಬಾಲ್ಯ ಜೀವನ ಮತ್ತು ಪರಿಚಯ

ಬಾಲ್ಯ ಜೀವನ ಮತ್ತು ಪರಿಚಯ

ವರ್ಗೀಶ್ ಜಾರ್ಜ್ ಮತ್ತು ಕ್ಯಾಥರೀನ್ ದಂಪತಿಯ ಮಗಳೇ ರೀನಾ ಜಾರ್ಜ್. ಬೆಂಗಳೂರಿನ ವಿದ್ಯಾನಗರದ ಕ್ರೀಡಾನಿಲಯದಲ್ಲಿ ಪ್ರೌಢಶಾಲೆ ಹಂತದಲ್ಲಿ ತನ್ನ ಕ್ರೀಡಾಭ್ಯಾಸ ಶುರುಮಾಡಿದ ರೀನಾ, ನಂತರದಲ್ಲಿ ಮೈಸೂರಿನ ಕ್ರೀಡಾನಿಲಯದಲ್ಲಿದ್ದು, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ತೆರಿಶನ್ ಕಾಲೇಜಿನಲ್ಲಿ ಪಡೆದರು.

2005ರಲ್ಲಿ ತನ್ನ ಕ್ರೀಡಾಸ್ಪರ್ಧೆಯನ್ನು ಪ್ರಾರಂಭಿಸಿದ ಇವರು 2007ರಲ್ಲಿ ಮೈಸೂರಿನ ಸೆಂಟ್ರಲ್ ಟ್ರ್ಯಾಕ್ಸ್‌ ವಿಭಾಗದ ಟ್ಯಾಕ್ಸ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೀನಾ ತಮ್ಮ ವಿದ್ಯಾಭ್ಯಾಸದ ನಡುವೆ ಕ್ರೀಡೆಯಲ್ಲಿ ಭಾಗವಹಿಸಿ ಅನೇಕ ರಾಜ್ಯ ಹಾಗೂ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್‌ಗೂ, ಟಾಮ್ & ಜೆರ್ರಿಗೂ ಏನು ಸಂಬಂಧ?

ರೀನಾ ಜಾರ್ಜ್‌ ಸಾಧನೆಗಳು

ರೀನಾ ಜಾರ್ಜ್‌ ಸಾಧನೆಗಳು

* 2017ರಲ್ಲಿ ಆಲ್ಮಟ್ಟಿಯಲ್ಲಿ ನಡೆದ 27ನೇ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ರೀನಾ 4*4 ರಿಲೇ ಸ್ಪರ್ಧೆಯಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

* ಚೀನಾ, ಜಪಾನ್ ಮತ್ತು ತೈಪು ದೇಶದಲ್ಲಿ ನಡೆದ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್‌ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 100 ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

* ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿ ನಡೆದ ಆಲ್‌ ಇಂಡಿಯಾ ಇಂಟರ್ ಯೂನಿವರ್ಸಿಟಿ ಕ್ರೀಡಾಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ. 4*4 ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ತಮ್ಮ ದಾಗಿಸಿಕೊಂಡಿದ್ದಾರೆ.

2012ರಲ್ಲಿ ಬೆಂಗಳೂರಿನಲ್ಲಿ ನಡೆದ 24ನೇ ರಾಜ್ಯ ಜ್ಯೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ 20 ವಯಸ್ಸಿನ ವಯೋಮಿತಿಯಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪದಕ.

2013ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸುವ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕೂಟದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ 4*4 ರಿಲೇ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರು.

2015ರಲ್ಲಿ ನಡೆದ ಕ್ರೀಡಾಕೂಟದ 4*4 ರಿಲೇ ಸ್ಪರ್ಧೆಯಲ್ಲಿ ತಮ್ಮದೇ ದಾಖಲೆಯನ್ನು ಮುರಿದರು. ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅತಿಯಾದ ನಾಯಕತ್ವ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

ಪ್ರಥಮ ಗುರಿ ಮತ್ತು ಪ್ರಮುಖ ಗುರಿ

ಪ್ರಥಮ ಗುರಿ ಮತ್ತು ಪ್ರಮುಖ ಗುರಿ

ರೀನಾ ಜಾರ್ಜ್ ಆರಂಭದಲ್ಲಿ ಹಾಸ್ಟೆಲ್ ಜೀವನದಲ್ಲಿ ಆರಂಭದಲ್ಲಿ ರಾಜ್ಯವನ್ನ ಪ್ರತಿನಿಧಿಸುವ ಕನಸು ಹೊಂದಿದ್ದರು. 2007ರಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಈಕೆ ನಂತರದ ದಿನಗಳಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ.

2017ರಲ್ಲಿ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅರ್ಹತೆ ಪಡೆದಿದ್ದ ರೀನಾ ಜಾರ್ಜ್, ಕೊನೆಯ ಹಂತದಲ್ಲಿ ಆ್ಯಂಕಲ್ ಟ್ವಿಸ್ಟ್ ಆದ ಪರಿಣಾಮ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಯಾವುದೇ ರೋಲ್ ಮಾಡೆಲ್ ಇಲ್ಲದೆ ಕ್ರೀಡೆಯನ್ನ ಪ್ರಾರಂಭಿಸಿದ ಈಕೆ ಭವಿಷ್ಯದಲ್ಲಿ ಒಲಿಂಪಿಕ್‌ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ. ಇವರ ಸಾಧನೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಮುಂಬರುವ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ರೀನಾ ಜಾರ್ಜ್ ಅವಕಾಶ ಪಡೆದು ಭಾರತಕ್ಕೆ ಪದಕ ಗೆದ್ದು ತರಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 6, 2022, 19:46 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X