ನಮ್ಮೂರ ಪ್ರತಿಭೆ: ಅಂತರಾಷ್ಟ್ರೀಯ ಚೆಸ್ ಆಟಗಾರ ಮತ್ತು ತರಬೇತುದಾರ ಅಜಿತ್ ಎಂ.ಪಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಚೆಸ್‌ ಸ್ಪರ್ಧೆಯಲ್ಲಿ ಪ್ರತಿನಿಧಿಸುವ ಜೊತೆಗೆ ಅನೇಕ ಪ್ರಶಸ್ತಿಗಳನ್ನ ಗೆದ್ದಿರುವ ಅಜಿತ್ ಎಂ.ಪಿ, ದೇಶದುದ್ದಲಕ್ಕೂ ತಮ್ಮ ಕೀರ್ತಿ ಪತಾಕೆ ಹಾರಿಸಿದ್ದಾರೆ. ಜೊತೆಗೆ ಯುವ ಪ್ರತಿಭೆಗಳ ಚೆಸ್‌ ಆಸೆಯ ಚಿಗುರಿಗೆ ನೀರೆರೆದು ಪೋಷಿಸುತ್ತಿರುವ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಅಜಿತ್ ಸಾಕಷ್ಟು ಯುವ ಪ್ರತಿಭೆಗಳಿಗೆ ನೆರವಾಗಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚೆಸ್ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿದ ಅಜಿತ್ ಎಂ.ಪಿ ಕುರಿತಾಗಿ ನಿಮಗೆ ಪರಿಚಯ ಮಾಡಿಕೊಡುವ ಪ್ರಯತ್ನ ನಡೆಸಲಾಗಿದೆ. ಅಜಿತ್ ಕುರಿತು ಇಂಟ್ರೆಸ್ಟಿಂಗ್ ಮಾಹಿತಿಗಳು ಈ ಕೆಳಗಿವೆ.

ಮೈಸೂರಿನಲ್ಲಿ ಚೆಸ್ ಅಕಾಡೆಮಿ ನಡೆಸುತ್ತಿರುವ ಅಜಿತ್

ಮೈಸೂರಿನಲ್ಲಿ ಚೆಸ್ ಅಕಾಡೆಮಿ ನಡೆಸುತ್ತಿರುವ ಅಜಿತ್

ಪ್ರಸ್ತುತ ಮೈಸೂರಿನಲ್ಲಿ ಕ್ರಿಯೆಟಿವ್ ಚೆಸ್ ಅಕಾಡೆಮಿಯನ್ನು ನಡೆಸುತ್ತಿರುವ ಅಜಿತ್ ಎಂ.ಪಿ ಯುವ ಚೆಸ್ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಮಕ್ಕಳ ಆಸೆಗೆ ಮತ್ತು ಗುರಿಗೆ ದಾರಿದೀಪವಾಗಿರುವ ಅಜಿತ್ ತನ್ನ ಬಹುವರ್ಷಗಳ ಚೆಸ್ ಅನುಭವವನ್ನ ಧಾರೆಯೆರೆಯುತ್ತಿದ್ದಾರೆ.

ನಮ್ಮೂರ ಪ್ರತಿಭೆ: ಬೆಂಗಳೂರಿನ ಯುವ ಫಾರ್ಮುಲಾ 2, DTM ರೇಸರ್‌ ಅರ್ಜುನ್ ಮೈನಿ

ಅಜಿತ್ ಬಾಲ್ಯ ಜೀವನದ ಕಿರು ಪರಿಚಯ

ಅಜಿತ್ ಬಾಲ್ಯ ಜೀವನದ ಕಿರು ಪರಿಚಯ

ಮೈಸೂರಿನ ಬನ್ನೂರಿನ ಪ್ರಕಾಶ್ ಎಂ.ಆರ್ ಮತ್ತು ಪದ್ಮಾವತಿ ಎಂಬ ದಂಪತಿಗೆ 1986 ಜೂನ್ 26ರಲ್ಲಿ ಜನಿಸಿದ ಅಜಿತ್ ಎಂ.ಪಿ ಬಾಲ್ಯದಿಂದಲೇ ಚೆಸ್ ಸ್ಪರ್ಧೆಯ ಕುರಿತಾಗಿ ವಿಶೇಷ ಆಸಕ್ತಿ ಹೊಂದಿದ್ದರು.

ಅಜಿತ್‌ ಕುಟುಂಬವು 1994ರಲ್ಲಿ ಮೈಸೂರಿಗೆ ಸ್ಥಳಾಂತರಗೊಂಡ ಬಳಿಕ ಅಜಿತ್‌ರ ದೊಡ್ಡಪ್ಪ ಪಿ.ಜಿ ರಾಮಚಂದ್ರರಾವ್‌ರಿಂದ ಚೆಸ್‌ ಕಲಿತರು. ಚಿಕ್ಕಂದಿನಲ್ಲಿ ತುಂಬ ತುಂಟನಾಗಿದ್ದ ಅಜಿತ್ ಶಿಸ್ತು ಕಲಿಯಲಿ, ಸೌಮ್ಯ ಸ್ವಭಾವ ಬೆಳೆಸಿಕೊಳ್ಳಲಿ ಎಂದು ಅವರ ದೊಡ್ಡಪ್ಪ ಚೆಸ್‌ ಅನ್ನು ಹೇಳಿಕೊಟ್ಟರು.

ದೊಡ್ಡಪ್ಪ ಪಿ.ಜಿ ರಾಮಚಂದ್ರರಾವ್‌ರಿಂದ ಕಲಿತ ಚೆಸ್ ಅಜಿತ್‌, ಶಾಲಾ ದಿನಗಳಲ್ಲಿ ಚೆಸ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅಜಿತ್‌ ಅವರ ಪ್ರತಿಭೆಯನ್ನ ಪೋಷಕರು ಸಹ ಪ್ರೋತ್ಸಾಹಿಸಿದರು. ಇದರ ಫಲವಾಗಿಯೇ ಅಜಿತ್ ಚೆಸ್‌ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.

ನಾರ್ವೆ ಚೆಸ್: ವಿಶ್ವ ಚಾಂಪಿಯನ್ ಕಾರ್ಲ್‌ಸನ್ ಮಣಿಸಿ ಅಗ್ರಸ್ಥಾನಕ್ಕೇರಿದ ವಿಶ್ವನಾಥನ್ ಆನಂದ್

 ಅಜಿತ್ ಎಂ.ಪಿ ಚೆಸ್‌ ಸಾಧನೆಗಳು

ಅಜಿತ್ ಎಂ.ಪಿ ಚೆಸ್‌ ಸಾಧನೆಗಳು

2015ರಲ್ಲಿ ದೆಹಲಿಯಲ್ಲಿ ನಡೆದ ಅಮೆಚೂರ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಗೆಲುವು.

2016ರಲ್ಲಿ ಯೂರೋಪಿನ ಗ್ರೀಸ್‌ನಲ್ಲಿ ನಡೆದ ವಿಶ್ವ ಅಮೆಚೂರ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದು ಅಜಿತ್‌ರ ಬೆಸ್ಟ್ ಪದಕವಾಗಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ದೇಶದ ನಾನಾ ಮೂಲೆಗಳಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪದಕ ಹಾಗೂ ಟ್ರೋಫಿಯನ್ನ ತನ್ನದಾಗಿಸಿಕೊಂಡಿದ್ದಾರೆ. ಇದಲ್ಲದೆ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ಅನೇಕ ಪ್ರಶಸ್ತಿಗಳನ್ನು ಗೆಲ್ಲುವಂತೆ ಮಾಡಿದ ಸಾಧನೆ ಇವರದ್ದಾಗಿದೆ.

ಅಜಿತ್ ಎಂ.ಪಿ ಮಾರ್ಗದರ್ಶದಲ್ಲಿ ವಿದ್ಯಾರ್ಥಿಗಳ ಚೆಸ್‌ ಸಾಧನೆಗಳು

ಅಜಿತ್ ಎಂ.ಪಿ ಮಾರ್ಗದರ್ಶದಲ್ಲಿ ವಿದ್ಯಾರ್ಥಿಗಳ ಚೆಸ್‌ ಸಾಧನೆಗಳು

ಸನತ್ ಜೆ. ರಾವ್ 2019: ವಿಶ್ವ ವಿಕಲಚೇತರ ಚೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ

ಜಿತಿನ್ ಎಸ್. ಎನ್: ವಿಶ್ವ ಅಮೆಚೂರ್ಸ್ ಚೆಸ್ ಚಾಂಪಿಯನ್‌ಶಿಪ್‌ ಚಿನ್ನದ ಪದಕ

ಸಫಾಲಿ ಎ.ಎನ್: ಅಂಡರ್ 17ನಲ್ಲಿ ಗರ್ಲ್ಸ್‌ ಕಾಮನ್‌ವೆಲ್ತ್‌ ಚಾಂಪಿಯನ್

ಚಿರಂಜೀವ್ ಕುಮಾರ್‌: ಶ್ರೀಲಂಕಾದಲ್ಲಿ ನಡೆದ ಅಂಡರ್-12 ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ

ವಿನಾಯಕ ಹರಿವಲ್ : ತಮಿಳುನಾಡಿನಲ್ಲಿ ನಡೆದ ಆಲ್ ಇಂಡಿಯಾ 1600 ರೇಟಿಂಗ್ ಚಾಂಪಿಯನ್

ಹೀಗೆ ಅನೇಕ ಕ್ರೀಡಾಪಟುಗಳನ್ನ ತಯಾರು ಮಾಡುವ ಜೊತೆಗೆ ದೇಶಕ್ಕೆ ಭವಿಷ್ಯದ ಚೆಸ್ ಚಾಂಪಿಯನ್‌ಗಳನ್ನ ತಯಾರು ಮಾಡುವುದರಲ್ಲಿ ಅಜಿತ್ ನಿರತರಾಗಿದ್ದಾರೆ. ಇವರ ಈ ಮಾರ್ಗದರ್ಶನ ನೂರಾರು ಪ್ರತಿಭೆಗಳನ್ನ ಹುಟ್ಟುಹಾಕಲಿ, ದೇಶಕ್ಕೆ ಪದಕಗಳನ್ನ ಗೆದ್ದು ತರಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ

For Quick Alerts
ALLOW NOTIFICATIONS
For Daily Alerts
Story first published: Friday, June 10, 2022, 19:18 [IST]
Other articles published on Jun 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X