ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಬಲು ಕಠಿಣ 'ಐರನ್‌ಮ್ಯಾನ್ ಟ್ರಯಥ್ಲಾನ್' ಪೂರ್ತಿಗೊಳಿಸಿ ದಾಖಲೆ ಬರೆದ ಕನ್ನಡಿಗ ಶ್ರೇಯಸ್ ಹೊಸೂರು

Nammura Pratibhe: IRAS officer Shreyas Hosur becomes the first kannadiga to finish Ironman triathlon

'ಐರನ್‌ಮ್ಯಾನ್ ಟ್ರಯಥ್ಲಾನ್' ಅತ್ಯಂತ ಕಠಿಣವಾದ ಕ್ರೀಡೆಯೆಂದೇ ಹೆಸರನ್ನು ಹೊಂದಿರುವಂತಹ ಹಣಾಹಣಿ ಇದಾಗಿದೆ. ಈ 'ಐರನ್‌ಮ್ಯಾನ್ ಟ್ರಯಥ್ಲಾನ್' ಒಂದು ದಿನದ ಸಮಯದಲ್ಲಿ ನಡೆಯುವ ರೇಸ್ ಆಗಿದ್ದು, ಇದರಲ್ಲಿ 3.8 ಕಿಲೋ ಮೀಟರ್ ಈಜು, 180 ಕಿಲೋ ಮೀಟರ್ ಸೈಕ್ಲಿಂಗ್ ಮತ್ತು 42.2 ಕಿಲೋ ಮೀಟರ್ ಓಟವಿರಲಿದೆ.

ಸಚಿನ್, ಜಯಸೂರ್ಯ ಅಲ್ಲ, ಅತಿಹೆಚ್ಚು ವರ್ಷ ಏಕದಿನ ಕ್ರಿಕೆಟ್ ಆಡಿದ ದಾಖಲೆ ಇರುವುದು ಇವರ ಹೆಸರಲ್ಲಿ!ಸಚಿನ್, ಜಯಸೂರ್ಯ ಅಲ್ಲ, ಅತಿಹೆಚ್ಚು ವರ್ಷ ಏಕದಿನ ಕ್ರಿಕೆಟ್ ಆಡಿದ ದಾಖಲೆ ಇರುವುದು ಇವರ ಹೆಸರಲ್ಲಿ!

ಹೀಗೆ ಸತತವಾಗಿ ಈ 3 ಬೃಹತ್ ಕ್ರೀಡೆಗಳನ್ನು ಪೂರೈಸಿದರೆ ಯಶಸ್ವಿಯಾಗಿ ಈ 'ಐರನ್‌ಮ್ಯಾನ್ ಟ್ರಯಥ್ಲಾನ್' ಅನ್ನು ಸಂಪೂರ್ಣವಾಗಿ ಮುಗಿಸಿದಂತೆ ಲೆಕ್ಕ. ಇಷ್ಟು ದೊಡ್ಡ ದೂರವನ್ನು ತಲುಪಲು ಓರ್ವ ಕ್ರೀಡಾಪಟುವಿಗೆ 1 ದಿನದ ಕಾಲಾವಕಾಶವಿರುತ್ತದೆ.

ತಂದೆಯಾಗುತ್ತಿರುವ ಖುಷಿಯಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್ ಕುಮಾರ್ತಂದೆಯಾಗುತ್ತಿರುವ ಖುಷಿಯಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್ ಕುಮಾರ್

ಆದರೆ ಈ ಸವಾಲನ್ನು ಕರ್ನಾಟಕದ ರೈಲ್ವೆ ಅಧಿಕಾರಿಯಾದ ಶ್ರೇಯಸ್ ಹೊಸೂರು ಅವರು ಕೇವಲ 13 ಗಂಟೆ 26 ನಿಮಿಷಗಳಲ್ಲಿ ಪೂರೈಸುವುದರ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಮುಂದೆ ಇದೆ ಓದಿ.

ದಾಖಲೆ ಬರೆದ ಶ್ರೇಯಸ್ ಹೊಸೂರು

ದಾಖಲೆ ಬರೆದ ಶ್ರೇಯಸ್ ಹೊಸೂರು

ಕರ್ನಾಟಕದ ಶ್ರೇಯಸ್ ಹೊಸೂರು ಇಷ್ಟು ದೊಡ್ಡ ಸವಾಲನ್ನು 13 ಗಂಟೆ 26 ನಿಮಿಷಗಳಲ್ಲಿಯೇ ಸಂಪೂರ್ಣವಾಗಿ ಮುಗಿಸಿದ್ದು, ಇದನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ರೈಲ್ವೆ ಇಲಾಖೆ ಅಧಿಕಾರಿ ಹಾಗೂ ಮೊದಲ ಕನ್ನಡಿಗ ಎಂಬ ದಾಖಲೆಯನ್ನು ಬರೆದಿದ್ದಾರೆ. ಜರ್ಮನಿಯಲ್ಲಿ ನಡೆದ ಈ ಕ್ರೀಡೆಯನ್ನು ಪೂರೈಸಲು ಸಾಮಾನ್ಯವಾಗಿ 16ರಿಂದ 17 ಗಂಟೆಗಳ ಕಾಲಾವಕಾಶವಿತ್ತು. ಆದರೆ ಇದಕ್ಕೂ ಮುನ್ನ ಈ ಸವಾಲನ್ನು ಪೂರ್ಣಗೊಳಿಸಿರುವ ಶ್ರೇಯಸ್ ಹೊಸೂರು ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಶ್ರೇಯಸ್ ಹೊಸೂರು ಕಿರುಪರಿಚಯ

ಶ್ರೇಯಸ್ ಹೊಸೂರು ಕಿರುಪರಿಚಯ

ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಗೋಪಾಲ್ ಹೊಸೂರು ಅವರ ಪುತ್ರನಾಗಿರುವ ಶ್ರೇಯಸ್ ಹೊಸೂರು ಅವರು ಮೂಲತಃ ಧಾರವಾಡ ಜಿಲ್ಲೆಯವರು. 2012ರಲ್ಲಿ ರೈಲ್ವೆ ಅಧಿಕಾರಿಯಾದ ಇವರು ಪ್ರಸ್ತುತ ನೈರುತ್ಯ ರೈಲ್ವೆ, ಬೆಂಗಳೂರಿನಲ್ಲಿ ಆರ್ಥಿಕ ಸಲಹೆಗಾರ ಮತ್ತು ಮುಖ್ಯ ಖಾತಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

4 ಬಾರಿ ಹಾಫ್ ಐರನ್‌ಮ್ಯಾನ್ ಪೂರೈಸಿದ್ದ ಶ್ರೇಯಸ್

4 ಬಾರಿ ಹಾಫ್ ಐರನ್‌ಮ್ಯಾನ್ ಪೂರೈಸಿದ್ದ ಶ್ರೇಯಸ್

ಇನ್ನು 4 ಬಾರಿ ಹಾಫ್ ಐರನ್‌ಮ್ಯಾನ್ ಅನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದ ಶ್ರೇಯಸ್ ಹೊಸೂರು ಅವರು ಪೂರ್ಣ ಐರನ್‌ಮ್ಯಾನ್ ಟ್ರಯಥ್ಲಾನ್ ಪೂರೈಸಬೇಕೆಂದು ಹಾತೊರೆಯುತ್ತಿದ್ದರು. ಅವರ ಕನಸು ಈ ಬಾರಿ ನನಸಾಗಿದ್ದು, ತಮ್ಮ ಈ ಸಾಧನೆಯನ್ನು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಅರ್ಪಣೆ ಮಾಡುವುದಕ್ಕೆ ಇಚ್ಛೆ ಪಡುತ್ತೇನೆ ಎಂದು ಶ್ರೇಯಸ್ ಹೊಸೂರು ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Story first published: Saturday, June 11, 2022, 22:18 [IST]
Other articles published on Jun 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X