ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಈಜಿನಲ್ಲಿ 'ಗೋಲ್ಡನ್ ಬಾಯ್' ಎಂದೇ ಖ್ಯಾತಿ ಪಡೆದ ಬೆಂಗಳೂರಿನ ಅನೀಶ್ ಗೌಡ

Nammura Pratibhe: Karnaraka Swimmer Aneesh Gowda bagged 6 gold medals in KIYG 2021

ಅನೀಶ್ ಗೌಡ ರಾಜ್ಯ, ರಾಷ್ಟ್ರಮಟ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಹೆಚ್ಚಾಗಿ ಕೇಳಿಬರುವ ಕರ್ನಾಟಕ ಮೂಲದ ಕ್ರೀಡಾ ಪಟುವಿನ ಹೆಸರು. ಈಗಾಗಲೇ ಸಾಕಷ್ಟು ಪದಕಗಳನ್ನು ತನ್ನ ಪ್ರತಿಭೆಯ ಮೂಲಕ ಸಂಪಾದನೆ ಮಾಡಿರುವ ಬೆಂಗಳೂರು ಮೂಲದ ಅನೀಶ್ ಗೌಡ ಕಳೆದ ಜೂನ್ ತಿಂಗಳಿನಲ್ಲಿ ಅಂಬಾಲದಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟದಲ್ಲಿ 6 ಚಿನ್ನದ ಪದಕಗಳನ್ನು ಪಡೆಯುವುದರ ಮೂಲಕ ಈ ಬಾರಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಕ್ರೀಡಾಪಟು ಎಂಬ ಸಾಧನೆಯನ್ನು ಕೂಡ ಮಾಡಿದರು.

IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!

18 ವರ್ಷದ ಅನೀಶ್ ಗೌಡ ಈಜು ಕ್ರೀಡೆಯ ಮೂಲಕ ಈಗಾಗಲೇ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬೆಂಗಳೂರು ಮತ್ತು ಕರ್ನಾಟಕಕ್ಕೆ ಉತ್ತಮ ಹೆಸರನ್ನು ತಂದುಕೊಟ್ಟಿದ್ದು, ಅವರು ಗೆದ್ದ ಪದಕಗಳು ಹಾಗೂ ಮಾಡಿದ ಸಾಧನೆಗಳ ಕುರಿತಾದ ಕಿರು ವಿವರ ಮುಂದೆ ಇದೆ ಓದಿ.

ಅನೀಶ್ ಗೌಡ ಸಾಧನೆಯನ್ನು ಕೊಂಡಾಡಿ ಟ್ವೀಟ್ ಮಾಡಿದ್ದ ಖೇಲೋ ಇಂಡಿಯಾ

ಕಳೆದ ಜೂನ್ ತಿಂಗಳ 12ರಂದು ಅಂಬಾಲದಲ್ಲಿ ನಡೆದಿದ್ದ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅನೀಶ್ ಗೌಡ 6 ಚಿನ್ನದ ಪದಕಗಳನ್ನು ಗೆದ್ದು ಟೂರ್ನಿಯ ಅತಿ ಯಶಸ್ವಿಯುತ ಕ್ರೀಡಾಪಟುವಾಗಿ ಹೊರಹೊಮ್ಮಿದ್ದರು. ಹೀಗೆ ಅನೀಶ್ ಗೌಡ ಮಾಡಿದ ಸಾಧನೆಯನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಖೇಲೋ ಇಂಡಿಯಾ ಅನೀಶ್ ಪದಕಗಳ ಜತೆಗಿರುವ ಫೋಟೋವನ್ನು ಹಂಚಿಕೊಂಡು, ಪ್ರೌಡ್ ಆಫ್ ಯು ಅನೀಶ್ ಎಂದು ಬರೆದುಕೊಂಡಿತ್ತು.

ಸ್ಟೇಟ್ ಮೀಟ್ ಜ್ಯೂನಿಯರ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ 8 ಪದಕ ಗೆದ್ದಿದ್ದ ಅನೀಶ್

ಸ್ಟೇಟ್ ಮೀಟ್ ಜ್ಯೂನಿಯರ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ 8 ಪದಕ ಗೆದ್ದಿದ್ದ ಅನೀಶ್

ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಅನೀಶ್ ಗೌಡ 2021ರ ಮಾರ್ಚ್ 5ರಿಂದ 7ರವರೆಗೆ ನಡೆದಿದ್ದ ಕರ್ನಾಟಕ ಸ್ಟೇಟ್ ಮೀಟ್ ಜ್ಯೂನಿಯರ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಹಾಗೂ ಗ್ರೂಪ್ ರಿಲೆ ವಿಭಾಗಗಳಲ್ಲಿ ಭಾಗವಹಿಸಿದ್ದರು. ವೈಯಕ್ತಿಕವಾಗಿ 3 ಚಿನ್ನದ ಪದಕ ಹಾಗೂ 2 ಬೆಳ್ಳಿ ಪದಕಗಳನ್ನು ಗೆದ್ದ ಅನೀಶ್ ಗೌಡ ರಿಲೇ ಟೀಮ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಗೆದ್ದಿದ್ದರು.

ಅನೀಶ್ ಇತರೆ ಸಾಧನೆಗಳ ಪಟ್ಟಿ

ಅನೀಶ್ ಇತರೆ ಸಾಧನೆಗಳ ಪಟ್ಟಿ

• ಕಳೆದ ಜೂನ್ ತಿಂಗಳಿನಲ್ಲಿ ಸಿಂಗಾಪುರದಲ್ಲಿ ನಡೆದ ನ್ಯಾಶನಲ್ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ 200 ಮೀಟರ್ ಫ್ರೀಸ್ಟೈಲ್ ಇವೆಂಟ್ ವಿಭಾಗದಲ್ಲಿ ಭಾಗವಹಿಸಿದ್ದ ಅನೀಶ್ ಗೌಡ ಚಿನ್ನದ ಪದಕವನ್ನು ಗೆದ್ದಿದ್ದರು.


• 2021ರ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅನೀಶ್ ಗೌಡ 200 ಮೀಟರ್ ಸುತ್ತಿನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಅನೀಶ್ ಗೌಡ 1 ನಿಮಿಷ 53.54 ಸೆಕೆಂಡುಗಳಲ್ಲಿ ಅಂತರವನ್ನು ಪೂರೈಸಿದ್ದರು.

Story first published: Friday, July 1, 2022, 23:06 [IST]
Other articles published on Jul 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X