ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ನೂರಾರು ಚಿನ್ನದ ಪದಕಗಳ ಒಡತಿ ಮಂಗಳೂರಿನ ಭವಾನಿ ಜೋಗಿ

Nammura Pratibhe: Mangalore multi talent sports women Bhavani Jogi life and her achievement

ಇವರ ವಯಸ್ಸು 64 ವರ್ಷ. ವೃತ್ತಿಯಲ್ಲಿ ನರ್ಸ್ ಆಗಿದ್ದವರು. ಆದರೆ ಅವರ ಸಾಧನೆ ಎಂಥಾ ವಯಸ್ಸಿನವರಿಗೂ ಸ್ಪೂರ್ತಿ ನೀಡುವಂತಾದ್ದು. ಫೀಲ್ಡ್ ಮತ್ತು ಟ್ರ್ಯಾಕ್ ಕ್ರೀಡಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ನೂರಾರು ಪದಕಗಳನ್ನು ಭಾರತಕ್ಕೆ ಗೆದ್ದಿರುವ ಕ್ರೀಡಾ ಸಾಧಕಿ. ಇವರ ಹೆಸರು ಭವಾನಿ ಜೋಗಿ. ಮಂಗಳೂರಿನ ನಿವಾಸಿಯಾಗಿರುವ ಇವರು ಮೂಲತಃ ಹಾಸನ ಜಿಲ್ಲೆಯವರು.

ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿರುವ ಭವಾನಿ ಜೋಗಿ ಅವರಿಗೆ ಕ್ರೀಡಾ ಕ್ಷೇತ್ರದ ಒಲವು ಒಂದಷ್ಟೂ ಕಡಿಮೆಯಾಗಿಲ್ಲ. ಈ ವರ್ಷವೂ ಭವಾನಿ ಜೋಗಿ ಶ್ರೀಲಂಕಾದಲ್ಲಿ ನಡೆದ ವಾರ್ಷಿಕ ಅಥ್ಲೆಟಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಶ್ರೇಷ್ಠ ಸಾಧಕಿಯ ಜೀವನದ ಹಾದಿ ಹೇಗಿತ್ತು. ಅವರ ಸಾಧನೆಗಳೇನು? ಮುಂದೆ ಓದಿ..

ನಮ್ಮೂರ ಪ್ರತಿಭೆ: ಪ್ರೋ ಕಬಡ್ಡಿ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈನಮ್ಮೂರ ಪ್ರತಿಭೆ: ಪ್ರೋ ಕಬಡ್ಡಿ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈ

ಬಾಲ್ಯದಿಂದಲೇ ಕ್ರೀಡೆಯ ಮೇಲೆ ಆಸಕ್ತಿ

ಬಾಲ್ಯದಿಂದಲೇ ಕ್ರೀಡೆಯ ಮೇಲೆ ಆಸಕ್ತಿ

ಭವಾನಿ ಜೋಗಿ ಅವರಿಗೆ ಕ್ರೀಡೆಯ ಮೇಲೆ ಬಾಲ್ಯದಿಂದಲೇ ಆಸಕ್ತಿಯಿತ್ತು. ಆದರೆ ಮನೆಯವರಿಂದ ಒಪ್ಪಿಗೆ ಸಿಗದಿದ್ದ ಕಾರಣ ತಮ್ಮ ಆಸಕ್ತಿಯನ್ನು ಹಾಗೆಯೇ ಹಿಡಿದಿಟ್ಟುಕೊಂಡಿದ್ದರು. ಅದರೆ ವೃತ್ತಿ ಜೀವನ ಆರಂಬಿಸಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಭವಾನಿ ಜೋಗಿ ಅವರು ಇಲಾಖೆಯಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ ಪತಿಯಿಂದ ಉತ್ತಮ ಬೆಂಬಲ ದೊರೆಯಿತು. ಹೀಗಾಗಿ ಕ್ರೀಡಾ ಕ್ಷೇತ್ರದ ತಮ್ಮ ಒಲವಿಗೆ ಬೆಂಬಲ ದೊರೆಯಿತು. ಆದರೆ ಮದುವೆಯಾದ ಕೆಲ ವರ್ಷಗಳಲ್ಲಿಯೇ ಪತಿಯನ್ನು ಕಳೆದುಕೊಂಡ ಇವರು ನಂತರ ಮತ್ತೆ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ಮುಂದುವರಿಸಿದರು.

ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ

ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ

ಭವಾನಿ ಜೋಗಿ ಅವರ ವಿಶೇಷತೆಯೆಂದರೆ ಅಥ್ಲೆಟಿಕ್ಸ್‌ನಲ್ಲಿ ಯಾವುದೇ ಒಂದು ಕ್ರೀಡೆಗೆ ಸೀಮಿತವಾಗಲಿಲ್ಲ. ಸರ್ಕಾರಿ ನೌಕರಿಯಲ್ಲಿದ್ದಾಗಲೇ ಸರ್ಕಾರಿ ನೌಕರರ ರಾಜ್ಯ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಟ್ರಪಲ್ ಜಂಪ್, ಡಿಸ್ಕಸ್ ಥ್ರೋ, ಶಾಟ್‌ಪುಟ್ ಎಸೆತಗಳಲ್ಲಿ ದೇಶ ವಿದೇಶಗಳಲ್ಲಿಯೂ ಭವಾನಿದೇವಿ ಮಿಂಚಿದ್ದಾರೆ. ಪವರ್‌ಲಿಫ್ಟಿಂಗ್‌ನಲ್ಲಿಯೂ ಸಾಧನೆ ಮಾಡಿರುವ ಅವರು 39ನೇ ವಯಸ್ಸಿನಲ್ಲಿ 6 ತಿಂಗಳಲ್ಲಿ ಈಜು ಕಲಿತು ರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದ ಸಾಧನೆ ಮಾಡಿದ್ದಾರೆ.

1998ರಿಂದ ಓಪನ್ ಮಾಸ್ಟರ್ಸ್‌ನಲ್ಲಿ ಸ್ಪರ್ಧೆ

1998ರಿಂದ ಓಪನ್ ಮಾಸ್ಟರ್ಸ್‌ನಲ್ಲಿ ಸ್ಪರ್ಧೆ

ಭವಾನಿ ಜೋಗಿ ಅವರು 1998ರ ನಂತರ ಓಪನ್ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈವರೆಗೆ 100 ಚಿನ್ನದ ಪದಕವನ್ನು ಗೆದ್ದಿರುವ ಭವಾನಿ ದೇವಿ 70 ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ವರ್ಷ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ 35ನೇ ವಾರ್ಷಿಕ ಮಾಸ್ಟರ್ಸ್ ಆಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅವರು ಮೂರು ಚಿನ್ನದ ಪದಕವನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ. ಜೊತೆಗೆ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಯಕ್ಷಗಾನದ ಮೇಲೆಯೂ ಆಸಕ್ತಿ

ಯಕ್ಷಗಾನದ ಮೇಲೆಯೂ ಆಸಕ್ತಿ

ಕ್ರೀಡಾ ಕ್ಷೇತ್ರದ ಸಾಧನೆಯ ಜೊತೆಗೆ ಕಲಾವಿದರಾಗಿಯೂ ಭವಾನಿ ಜೋಗಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಯಕ್ಷಗಾನದಲ್ಲಿಯೂ ಬಣ್ಣ ಹಚ್ಚಿರುವ ಭವಾನಿ ಜೋಗಿ ಅವರಿಗೆ ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್ ಸೋದರ ಉಪ್ಪಾಳ ಕೃಷ್ಣ ಮಾಸ್ಟರ್ ಮಾರ್ಗದರ್ಶನದಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ್ದಾರೆ. ಮಂಗಳೂರಿನ ಕರಾವಳಿ ಉತ್ಸವದಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

Story first published: Friday, June 3, 2022, 19:50 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X