ನಮ್ಮೂರ ಪ್ರತಿಭೆ: ತಾಯಿಯಂತೆಯೇ ಕ್ರೀಡಾ ಸಾಧನೆಯ ಹಾದಿಯಲ್ಲಿ ಮಗಳು ಉನ್ನತಿ ಅಯ್ಯಪ್ಪ

ಉನ್ನತಿ ಅಯ್ಯಪ್ಪ ಜೂನ್ 5 2005ರಲ್ಲಿ ಜನಿಸಿದ ಪ್ರತಿಭೆ. ಮೂಲತಃ ಕರ್ನಾಟಕದ ಮಂಗಳೂರು ಮೂಲದ ಉನ್ನತಿ ಅಯ್ಯಪ್ಪ 17 ವರ್ಷ ವಯಸ್ಸಿನವರಾಗಿದ್ದು, ಬಾಲ್ಡ್ ವಿನ್ ಗರ್ಲ್ಸ್ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ, ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಲವಾರು ಸಾಧನೆಗಳನ್ನು ಮಾಡಿದ್ದಾರೆ.

ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲ!ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲ!

ಉನ್ನತಿ ಅಯ್ಯಪ್ಪ ಹೆಪ್ಟಾಥ್ಲೀಟ್ ಪ್ರಮೀಳಾ ಅಯ್ಯಪ್ಪ ಹಾಗೂ ಕ್ವಾರ್ಟರ್ ಮೈಲರ್ ಬಿ ಪಿ ಅಯ್ಯಪ್ಪ ಅವರ ಪುತ್ರಿ. ತಂದೆ ತಾಯಿಯ ಹಾಗೆ ತಾನೂ ಕೂಡ ಕ್ರೀಡೆಯತ್ತ ಒಲವನ್ನು ಹೊಂದಿದ್ದು, ಕಿರಿಯ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರಕ್ಕೆ ಉನ್ನತಿ ಧುಮುಕಿದ್ದಾರೆ.

ಮಹಿಳಾ ಕ್ರಿಕೆಟ್: ಭಾರತ vs ಶ್ರೀಲಂಕಾ 2ನೇ ಟಿ20 ಪಂದ್ಯದ ಟಾಸ್ ವರದಿ & ಆಡುವ ಬಳಗಮಹಿಳಾ ಕ್ರಿಕೆಟ್: ಭಾರತ vs ಶ್ರೀಲಂಕಾ 2ನೇ ಟಿ20 ಪಂದ್ಯದ ಟಾಸ್ ವರದಿ & ಆಡುವ ಬಳಗ

ತಂದೆ ತಾಯಿ ಇಬ್ಬರೂ ಸಹ ಕ್ರೀಡಾಕ್ಷೇತ್ರದಲ್ಲಿರುವುದರಿಂದ, ಮಗಳೂ ಸಹ ಅದೇ ಕ್ಷೇತ್ರಕ್ಕೆ ಕಾಲಿಟ್ಟಾಗ ನಿರೀಕ್ಷೆ ಇತರರಿಗಿಂತ ತುಸು ಹೆಚ್ಚೇ ಇರಲಿದೆ ಎಂದು ಹೇಳಬಹುದು. ಹೌದು, ಉನ್ನತಿ ಅಯ್ಯಪ್ಪ ಮೇಲೆ ನಿರೀಕ್ಷೆ ದೊಡ್ಡದಾಗಿತ್ತು ಹಾಗೂ ಈ ನಿರೀಕ್ಷೆಯನ್ನು ಹುಸಿಗೊಳಿಸದ ಉನ್ನತಿ ಅಯ್ಯಪ್ಪ ಈಗಾಗಲೇ 4 ಚಿನ್ನದ ಪದಕಗಳನ್ನು ಗೆದ್ದು ಮಿಂಚಿದ್ದಾರೆ.

ಉನ್ನತಿ ಅಯ್ಯಪ್ಪ ಸಾಧನೆ ಮತ್ತು ಪದಕಗಳು

ಉನ್ನತಿ ಅಯ್ಯಪ್ಪ ಸಾಧನೆ ಮತ್ತು ಪದಕಗಳು

• ತನ್ನ ತಾಯಿಯಂತೆಯೇ ಕ್ರೀಡಾ ಕ್ಷೇತ್ರಕ್ಕೆ ಧುಮುಕಿರುವ ಉನ್ನತಿ ಅಯ್ಯಪ್ಪ ರಾಂಚಿಯಲ್ಲಿ ನಡೆದ ಸ್ಟೇಟ್ಸ್ ಚಾಂಪಿಯನ್‍ಶಿಪ್ ಟ್ರಯಥ್ಲಾನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಲಾಂಗ್ ಜಂಪ್ ವಿಭಾಗದಲ್ಲಿ 5.40 ಮೀಟರ್ ಸಾಧನೆ ಮಾಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

• ಅಸ್ಸಾಂನಲ್ಲಿ ನಡೆದ ನ್ಯಾಷನಲ್ ಮೀಟ್ 2021ರಲ್ಲಿ ಭಾಗವಹಿಸಿದ್ದ ಉನ್ನತಿ ಅಯ್ಯಪ್ಪ ಅಂಡರ್ 16 ಹರ್ಡಲ್ಸ್ ವಿಭಾಗದಲ್ಲಿ ಚಿನ್ನ ಹಾಗೂ ಅಂಡರ್ 16 300 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

• ಇತ್ತೀಚೆಗಷ್ಟೇ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಉನ್ನತಿ ಅಯ್ಯಪ್ಪ 100 ಮೀಟರ್ ಬಾಲಕಿಯರ ಹರ್ಡಲ್ಸ್ ವಿಭಾಗದಲ್ಲಿ 14 ಸೆಕೆಂಡುಗಳಿಗೆ ಗುರಿಯನ್ನು ಮುಟ್ಟಿ ಚಿನ್ನದ ಪದಕವನ್ನು ಗೆದ್ದರು.

ಗುವಾಹತಿಯಲ್ಲಿ ದಾಖಲೆ ಬರೆದಿದ್ದ ಉನ್ನತಿ

ಗುವಾಹತಿಯಲ್ಲಿ ದಾಖಲೆ ಬರೆದಿದ್ದ ಉನ್ನತಿ

ಗುವಾಹತಿಯಲ್ಲಿ 2021ರ ಫೆಬ್ರವರಿಯಲ್ಲಿ ನಡೆದಿದ್ದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ 80 ಮೀಟರ್ ಹರ್ಡಲ್ಸ್ ಓಟವನ್ನು 11.50 ಸೆಕೆಂಡುಗಳಲ್ಲಿ ಪೂರೈಸಿದ್ದ ಉನ್ನತಿ ಅಯ್ಯಪ್ಪ ಈ ಹಿಂದೆ ಇದೇ ಅಂತರವನ್ನು ಪೂರೈಸಲು ಪಿಟಿ ಉಷಾ ತೆಗೆದುಕೊಂಡಿದ್ದ 12.20 ಸೆಕೆಂಡುಗಳ ದಾಖಲೆಯನ್ನು ಮುರಿದು ಹಾಕಿದ್ದರು. ಇದೇ ಕ್ರೀಡಾಕೂಟದಲ್ಲಿ 300 ಮೀಟರ್‌ನ್ನು 40.11 ಸೆಕೆಂಡುಗಳಲ್ಲಿ ಪೂರೈಸಿದ ಉನ್ನತಿ ಅಯ್ಯಪ್ಪ ಮತ್ತೊಂದು ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದರು. ಈ ಹಿಂದೆ ಈ ಅಂತರವನ್ನು ವೇಗವಾಗಿ ಪೂರೈಸಿದ್ದ ದಾಖಲೆಯನ್ನು ಪಶ್ಚಿಮ ಬಂಗಾಳದ ಸೌಮಿತಾ ಪಾಟೀಲ್ ( 40.15 ಸೆಕೆಂಡ್ ) ತಮ್ಮ ಹೆಸರಿನಲ್ಲಿ ಹೊಂದಿದ್ದರು.

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದ ತಾಯಿ ಪ್ರಮೀಳಾ ಅಯ್ಯಪ್ಪ

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದ ತಾಯಿ ಪ್ರಮೀಳಾ ಅಯ್ಯಪ್ಪ

ಇನ್ನು ಉನ್ನತಿ ಅಯ್ಯಪ್ಪ ಅವರ ತಾಯಿ ಪ್ರಮೀಳಾ ಅಯ್ಯಪ್ಪ ಗುವಾಂಗ್ ಜೌನಲ್ಲಿ ನಡೆದಿದ್ದ 2010ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದೀಗ ಮಗಳು ತಮಗಿಂತ ಹೆಚ್ಚಿನ ಸಾಧನೆಯನ್ನು ಮಾಡಿ ಚಿನ್ನದ ಪದಕಗಳನ್ನು ಗೆದ್ದಿರುವುದು ಪೋಷಕರ ಹಿರಿಮೆಯನ್ನು ಹೆಚ್ಚಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, June 25, 2022, 16:50 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X