ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ ಪ್ರಶಸ್ತಿಗಳ ಬೇಟೆಗಾರ ರಾಕೇಶ್ ಎಸ್‌.

Rakesh S

ರಾಕೇಶ್ ಎಸ್‌. ರಾಷ್ಟ್ರೀಯ ಮಟ್ಟದಕುಸ್ತಿ ಪಟು. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಯುವ ಕುಸ್ತಿ ಪ್ರತಿಭೆ. ಮೈಸೂರು ಮೂಲದ ರಾಕೇಶ್ ಎಸ್‌. ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ , ಚಾಂಪಿಯನ್‌ಶಿಪ್‌ಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನ, ಪದಕಗಳನ್ನ ಗೆದ್ದಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ಕನ್ನಡಿಗ ರಾಕೇಶ್ ಎಸ್‌. ಕುರಿತಾಗಿ ಪ್ರಮುಖ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ರಾಕೇಶ್ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಬಾಲ್ಯ ಜೀವನ ಮತ್ತು ಪರಿಚಯ

ಬಾಲ್ಯ ಜೀವನ ಮತ್ತು ಪರಿಚಯ

ಜನವರಿ 3, 2000ರಲ್ಲಿ ಶಂಕರ ಚಕ್ರವರ್ತಿ ಮತ್ತು ಜೆ. ಲಲಿತಾರವರ ಪುತ್ರರಾಗಿ ಜನಿಸಿದರು. ಮೂಲತಃ ಮೈಸೂರಿನ ಸುಣ್ಣದಕೇರಿಯವರಾದ ರಾಕೇಶ್, ವಾಸುದೇವ ಸೋಮಾನಿ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿದರು. ಇವರು 13ನೇ ವಯಸ್ಸಿನಲ್ಲಿ ತನ್ನ ಕ್ರೀಡಾ ಅಭ್ಯಾಸ ಆರಂಭಿಸಿದ ರಾಕೇಶ್ ಕುಸ್ತಿಯ ಕಡೆಗೆ ಹೆಚ್ಚಿನ ಆಸಕ್ತಿ ಪಡೆದುಕೊಂಡರು.

ಭಾರತೀಯ ತರಬೇತಿ ಶಿಬಿರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಕೇಶ್ ಎಸ್‌. ಅನೇಕ ಟೂರ್ನಿಗಳಲ್ಲಿ ಭಾಗಿಯಾಗುವ ಮೂಲಕ ಪ್ರಶಸ್ತಿಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ನಮ್ಮೂರ ಪ್ರತಿಭೆ: ಪಿಟಿ ಉಷಾ ದಾಖಲೆ ಮುರಿದು ಸಾಧನೆ ಮಾಡಿರುವ ವಿಶೇಷ ಪ್ರತಿಭೆ ಶರತ್ ಗಾಯಕ್ವಾಡ್

ರಾಕೇಶ್ ಎಸ್‌. ಪ್ರಮುಖ ಸಾಧನೆಗಳು

ರಾಕೇಶ್ ಎಸ್‌. ಪ್ರಮುಖ ಸಾಧನೆಗಳು

2017ರಲ್ಲಿ ದೆಹಲಿಯಲ್ಲಿ ನಡೆದ ಎಸ್‌ಜಿಎಫ್‌ಐ ಅಂಡರ್-19 ನ್ಯಾಷನಲ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ಸಬ್ ಜ್ಯೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಪದಕ

2018ರಲ್ಲಿ ದೆಹಲಿಯಲ್ಲಿ ನಡೆದ ಎಸ್‌ಜಿಎಫ್‌ಐ ಅಂಡರ್-19 ನ್ಯಾಷನಲ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

2018ರಲ್ಲಿ ಹರಿಯಾಣದ ಬಿಯಾನಿಯಲ್ಲಿ ನಡೆದ ಆಲ್‌ ಇಂಡಿಯಾ ಇಂಟರ್ ಯೂನಿವರ್ಸಿಟಿ ವ್ರೆಸ್ಲಿಂಗ್ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಯಲವನ್ನ ಪ್ರತಿನಿಧಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

2021ರ ಫೆಬ್ರವರಿ-ಮಾರ್ಚ್‌ನಲ್ಲಿ ಜ್ಯೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ

ನಮ್ಮೂರ ಪ್ರತಿಭೆ: ಕೊಹಿನೂರಿನ ಚಿನ್ನದ ಹುಡುಗ ಉಮೇಶ್ ಜಮಾದಾರ್: ಕುಸ್ತಿಯಲ್ಲಿ ಭರವಸೆ ಮೂಡಿಸಿದ ದೇಸಿ ಪ್ರತಿಭೆ

ರಾಕೇಶ್ ಕೋಚ್ ಎಲ್. ಮಂಜಪ್ಪ

ರಾಕೇಶ್ ಕೋಚ್ ಎಲ್. ಮಂಜಪ್ಪ

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ಪದಕಗಳನ್ನು ಬೇಟೆಯಾಡಿರುವ ರಾಕೇಶ್, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ರಾಷ್ಟ್ರೀಯ ಮಟ್ಟದ ಕೋಚ್ ಎಲ್. ಮಂಜಪ್ಪರವರ ಅಡಿಯಲ್ಲಿ ಪಳಗಿರುವ ರಾಕೇಶ್ ಅನೇಕ ಪ್ರಶಸ್ತಿಗಳನ್ನ ಗೆಲ್ಲುವ ಪಣತೊಟ್ಟಿದ್ದಾರೆ. ಇವರ ಸಾಧನೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ರಾಷ್ಟ್ರ ಮಟ್ಟದಲ್ಲಿ ದೊಡ್ಡ ಕುಸ್ತಿ ಪಟು ಆಗುವುದರ ಜೊತೆಗೆ, ದೇಶಕ್ಕೆ ಪದಕ ಬೇಟೆಯಾಡುವ ಮಹಾದಾಸೆಯನ್ನು ಹೊಂದಿದ್ದಾರೆ. ರಾಕೇಶ್ ತಮ್ಮ ವೃತ್ತಿಜೀವನದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ, ಕಾಮನ್‌ವೆಲ್ತ್‌, ಒಲಿಂಪಿಕ್ಸ್‌ನಲ್ಲಿ ಭಾರತವನ್ನ ಪ್ರತಿನಿಧಿಸಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.

Story first published: Friday, June 24, 2022, 14:23 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X