ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಪಿಟಿ ಉಷಾ ದಾಖಲೆ ಮುರಿದು ಸಾಧನೆ ಮಾಡಿರುವ ವಿಶೇಷ ಪ್ರತಿಭೆ ಶರತ್ ಗಾಯಕ್ವಾಡ್

Nammura Pratibhe: Para swimmer Sharath Gayakwad life story and his Achievements

ಹುಟ್ಟುತ್ತಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಬಾಲಕನನ್ನು ಶಾಲೆ ಸೇರಿಸಿದಾಗ ಅಲ್ಲಿನ ನಿಯಮವೊಂದಕ್ಕೆ ಆ ಬಾಲಕನ ಹೆತ್ತವರು ಹೆದರಿದ್ದರು. ಆದರೆ ಅದೇ ಬಳಿಕ ಆ ಹುಡುಗ ಹೆತ್ತವರ ಆ ಭಯವನ್ನು ಮೀರಿ ಸಾಧನೆಯ ಮೇಲೆ ಸಾಧನೆ ಮಾಡಿ ಕರ್ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ ಪ್ಯಾರಾ ಸ್ವಿಮ್ಮರ್ ಶರತ್ ಗಾಯಕ್ವಾಡ್.

ಶರತ್ ಗಾಯಕ್ವಾಡ್ ದೈಹಿಕವಾಗಿ ಸವಾಲನ್ನು ಹೊಂದಿದ್ದರೂ ಈಜುವಿಕೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಹಾಗಾದರೆ ಶರತ್ ಗಾಯಕ್ವಾಡ್ ದೈಹಿಕವಾಗಿ ಸವಾಲುಗಳಿದ್ದರೂ ಅದನ್ನು ಮೀರಿ ನಿಂತಿದ್ದು ಹೇಗೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ದೊಡ್ಡ ಮಟ್ಟದ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು? ಈ ಬಗ್ಗೆ ಮಾಹಿತಿ ಇಲ್ಲಿದೆ.

ನಮ್ಮೂರ ಪ್ರತಿಭೆ: ಐಎಎಸ್ ಅಧಿಕಾರಿಯಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹೆಮ್ಮೆಯ ಕನ್ನಡಿಗ ಸುಹಾಸ್ ಯತಿರಾಜ್ನಮ್ಮೂರ ಪ್ರತಿಭೆ: ಐಎಎಸ್ ಅಧಿಕಾರಿಯಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹೆಮ್ಮೆಯ ಕನ್ನಡಿಗ ಸುಹಾಸ್ ಯತಿರಾಜ್

ಪಿಟಿ ಉಷಾ ದಾಖಲೆ ಮುರಿದ ಶರತ್

ಪಿಟಿ ಉಷಾ ದಾಖಲೆ ಮುರಿದ ಶರತ್

ಬೆಂಗಳೂರು ಮೂಲದ ಶರತ್ ಗಾಯಕ್ವಾಡ್ 2012ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಸ್ವಿಮ್ಮರ್ ಎನಿಸಿಕೊಂಡರು. 2014ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶ್ರೇಷ್ಠ ಕ್ರೀಡಾಪಟು ಪಿಟಿ ಉಷಾ ಅವರ ದಾಖಲೆಯೊಂದನ್ನು ಮುರಿದ ಸಾಧನೆ ಮಾಡಿದ್ದಾರೆ ಕನ್ನಡದ ಹೆಮ್ಮೆಯ ಕ್ರೀಡಾಪಟು ಶರತ್ ಗಾಯಕ್ವಾಡ್. 1986ರ ಏಷ್ಯಾ ಕ್ರೀಡಾಕೂಟದಲ್ಲಿ ಪಿಟಿ ಉಷಾ ಅವರು ಐದು ಪದಕ ಗೆದ್ದು ಹೊಸ ದಾಖಲೆ ಬರೆದಿದ್ದರು. ಈ ದಾಖಲೆಯನ್ನು 2014ರ ಏಷ್ಯನ್ ಗೇಮ್ಸ್‌ನಲ್ಲಿ ಶರತ್ ಗಾಯಕ್ವಾಡ್ ಆರು ಪದಕ ಗೆಲ್ಲುವ ಮೂಲಕ ಮುರಿದಿದ್ದಾರೆ. ಶರತ್ ಅವರು 200 ಮೀ ದೂರದ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು 100 ಮೀ ಬಟರ್ ಫ್ಲೈ, 100ಮೀ ಬ್ರೆಸ್ಟ್ ಸ್ಟ್ರೋಕ್, 100ಮೀ ಬ್ಯಾಕ್ ಸ್ಟ್ರೋಕ್ ಹಾಗೂ 50 ಮೀ ಫ್ರೀ ಸ್ಟೈಲ್ ನಲ್ಲಿ ಕಂಚು ಗೆದ್ದಿದ್ದಾರೆ ಜೊತೆಗೆ ತಮ್ಮ ತಂಡದ ಪ್ರಸನ್ನ ಕರ್ಮಾಕರ್, ಸ್ವಪ್ನಿಲ್ ಪಾಟೀಲ್, ನಿರಂಜನ್ ಮುಕುಂದನ್ ಜೊತೆಗೂಡಿ 4X100 ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಸೇರಿದಂತೆ ಒಟ್ಟಾರೆ 6 ಪದಕ ಕೊರಳಿಗೇರಿಸಿಕೊಂಡರು.

ಈಜು ಸ್ಪರ್ಧೆಯಲ್ಲಿ ಆಸಕ್ತಿಗೆ ಕಾರಣವಾಯ್ತು ಶಾಲೆಯ ನಿಯಮ

ಈಜು ಸ್ಪರ್ಧೆಯಲ್ಲಿ ಆಸಕ್ತಿಗೆ ಕಾರಣವಾಯ್ತು ಶಾಲೆಯ ನಿಯಮ

ಶರತ್ ಅವರನ್ನು ಬಾಲ್ಯದಲ್ಲಿ ಶಾಲೆಗೆ ಸೇರಿಸಿದಾಗ ಆ ಶಾಲೆಯಲ್ಲಿ ಸ್ವಿಮ್ಮಿಂಗ್ ತರಬೇತಿಗೆ ಸೇರಿಕೊಳ್ಳುವುದು ಕಡ್ಡಾಯವಾಗಿತ್ತು. ಸ್ವತಃ ಶರತ್ ಹೆತ್ತವರಿಗೆ ಕುಡ ಈಜು ಬರುತ್ತಿರಲಿಲ್ಲ. ಹೀಗಾಗಿ ದೈಹಿಕವಾಗಿ ಸಮರ್ಥವಾಗಿದ್ದರೂ ನಮಗೆ ಈಜು ಸಾಧ್ಯವಿಲ್ಲ ಹಾಗಾದರೆ ಒಂದು ಕೈ ಸ್ವಾಧೀನವಿಲ್ಲದ ತಮ್ಮ ಮಗನಿಂದ ಈಜು ಹೇಗೆ ಸಾಧ್ಯ ಎಂದು ಶರತ್ ಹೆತ್ತವರು ಆತಂಕ ಪಟ್ಟರು. ಆದರೆ ನಂತರ ಶರತ್ ಈಜುವಿಕೆಯಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್

ಶರತ್ ಕನಸಿಗೆ ಬೆಂಬಲ ನೀಡಿದ ಹೆತ್ತವರು

ಶರತ್ ಕನಸಿಗೆ ಬೆಂಬಲ ನೀಡಿದ ಹೆತ್ತವರು

ಈಜುವಿಕೆಯಲ್ಲಿನ ಆಸಕ್ತಿಯನ್ನು ಗಮನಿಸಿದ ಶರತ್ ಗಾಯಕ್ವಾಡ್ ಅವರ ಹೆತ್ತವರು ಉತ್ತಮ ಮಟ್ಟದ ತರಬೇತಿಗೆ ಪೂರಕ ವ್ಯವಸ್ಥೆಗಳನ್ನು ಮಾಡಿದರು. 2003ರಲ್ಲಿ ಈಜು ತರಬೇತುದಾರರಾದ ಜಾನ್ ಕ್ರಿಸ್ಟೋಫರ್ ಅವರ ಕಣ್ಣಿಗೆ ಬಿದ್ದ ಶರತ್ ನಂತರ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದರು. ನಂತರ 2012ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಂತರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ದಾಖಲೆ ಮಾಡಿದ್ದಾರೆ. ಪ್ರಸ್ತುತ ಶರತ್ ಸ್ಪರ್ಧಾತ್ಮಕ ಈಜುಗಾರಿಕೆಯಿಂದ ನಿವೃತ್ತರಾಗಿದ್ದು ಕೋಚ್ ಆಗಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ

Story first published: Thursday, June 23, 2022, 20:36 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X