ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಸಾಫ್ಟ್‌ವೇರ್ ವೃತ್ತಿಗೆ ಗುಡ್ ಬೈ ಹೇಳಿ, ಅಥ್ಲಿಟ್​ಗೆ ಜೈ ಎಂದ ಸಾಗರ ಮೂಲದ ಅಶ್ವಿನಿ

Nammura Pratibhe: Sagara-based Ashwini Bhat Goodbye to Software Career To Become Athlete

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಕೈ ತುಂಬಾ ಸಂಬಳ ಬರುತ್ತಿತ್ತು. ಕುಳಿತಲ್ಲೇ ಸುಂದರವಾದ ಬದುಕು ಕಟ್ಟಿ ಜೀವನ ಸಾಗಿಸಬಹುದಾಗಿತ್ತು. ಆದರೆ ಅಲ್ಲಿಗೆ ಸುಮ್ಮನಾಗದ ಅವರು ಗುರಿ ಬಲುದೂರ ದಾರಿ ನಿಗೂಢ ಎಂಬಂತೆ ದೊಡ್ದದೊಂದು ಕನಸು ಕಂಡರು. ಈಗ ಆ ಕನಸು ಕೈಗೆಟಕುವ ದೂರದಲ್ಲಿದೆ.

ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಎಲ್ಲರ ಆಸೆ. ಎದೆಯ ಮೇಲೆ ತ್ರಿವರ್ಣ ಧ್ವಜ ಇಟ್ಟು ದೇಶದ ಹೆಮ್ಮೆ ಎನಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ಆ ಕನಸು ಸಕಾರ ಮಾಡುವುದು ಎಲ್ಲರಿಗೂ ಸಾಧ್ಯವಾಗಲ್ಲ.‌ ಆದರೆ ಇವರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಈಗ ಭಾರತದ ಪ್ರತನಿಧಿಯಾಗಿ ಅಂತಾರಾಷ್ಟ್ರೀಯ ಅಂಗಳದಲ್ಲಿ ಮಿಂಚಲು ಸಜ್ಜಾಗಿದ್ದಾರೆ ಅಶ್ವಿನಿ ಗಣಪತಿ ಭಟ್.

ನಮ್ಮೂರ ಪ್ರತಿಭೆ: ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ ಗೆದ್ದ ಕುಸ್ತಿ ಪೈಲ್ವಾನ್ ಮುಧೋಳದ ನಿಂಗಪ್ಪನಮ್ಮೂರ ಪ್ರತಿಭೆ: ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ ಗೆದ್ದ ಕುಸ್ತಿ ಪೈಲ್ವಾನ್ ಮುಧೋಳದ ನಿಂಗಪ್ಪ

ಅಶ್ವಿನಿ ಗಣಪತಿ ಭಟ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಆದರೆ ಈಗ ಅಥ್ಲೀಟ್ ಆಗಿದ್ದಾರೆ. ಮುಂಬರುವ ಏಷ್ಯಾ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್​ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. 24 ತಾಸು ಓಡುವ ದೀರ್ಘ ಮ್ಯಾರಥಾನ್ ಇದಾಗಿದ್ದು, ಈ‌ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲು ಅಶ್ವಿನಿ ಭಟ್ ಎದುರು ನೋಡುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಅಶ್ವಿನಿ ಭಟ್

ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಅಶ್ವಿನಿ ಭಟ್

ಜುಲೈ 2ರಂದು ಕಂಠೀರವ ಸ್ಟೇಡಿಯಂನಲ್ಲಿ ಏಷ್ಯಾ ಅಲ್ಟ್ರಾ ಮ್ಯಾರಾಥನ್ ಚಾಂಪಿಯನ್​ ಶಿಪ್ ನಲ್ಲಿ ಭಾರತದ ಪರವಾಗಿ ಕಣಕ್ಕಿಳಿದಿದ್ದಾರೆ. ಈ ಮೊದಲು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೈ ತುಂಬಾ ಸಂಬಳಕ್ಕೆ ಉದ್ಯೋಗಲ್ಲಿದ್ದ ಅಶ್ವಿನಿ, ಆದರೀಗ ಕ್ರೀಡೆಯನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವರಾಗಿರುವ ಅಶ್ವಿನಿ ಭಟ್, 9 ವರ್ಷಗಳ ಟೆಕ್ಕಿ ವೃತ್ತಿಗೆ ಗುಡ್ ಬೈ ಹೇಳಿ ಹವ್ಯಾಸವಾಗಿ ಆರಂಭಿಸಿದ ಓಟ, ದೇಶಕ್ಕಾಗಿ ಓಡುವಂತೆ ಮಾಡಿದೆ. 2016ರಲ್ಲಿ ಸಾಫ್ಟ್‌ವೇರ್ ಬದುಕಿಗೆ ಗುಡ್ ಬೈ ಹೇಳಿ ಅಲ್ಟ್ರಾ ಮ್ಯಾರಾಥನ್ ಎಂಬ ಅಥ್ಲೀಟ್ ಮಾದರಿಗೆ ಪಾದಾರ್ಪಣೆ ಮಾಡಿದ್ದರು. ಸಾಮಾನ್ಯವಾಗಿ ಯಾರೂ ಆಯ್ದುಕೊಳ್ಳದ ಅಥ್ಲೀಟ್ ಮಾದರಿ ಇದಾಗಿದ್ದು, ಇದರಲ್ಲಿ ದೇಶವನ್ನು ಪ್ರತಿನಿಧಿಸುವ ಸಾಧ್ಯತೆ ಕಂಡುಕೊಳ್ಳುತ್ತಾರೆ.

ಅಶ್ವನಿ ಕನಸಿಗೆ ಬೆನ್ನೆಲುಬಾಗಿ ನಿಂತ ಪತಿ

ಅಶ್ವನಿ ಕನಸಿಗೆ ಬೆನ್ನೆಲುಬಾಗಿ ನಿಂತ ಪತಿ

2020ರಲ್ಲಿ ನಡೆದ ದೇಶೀಯ ಮಟ್ಟದ ಅಲ್ಟ್ರಾ ಮ್ಯಾರಥಾನ್‌ನಲ್ಲಿ 112 ಕಿಮೀ ಕ್ರಮಿಸಿದ ಅಶ್ವಿನಿ ಭಟ್ ದಾಖಲೆ ಬರೆದಿದ್ದರು. ಅದಾಗಿ ಮುಂದಿನ ವರ್ಷವೇ 2021ರಲ್ಲಿ ಈ ಈವೆಂಟ್‌ಗೆ ನಡೆದ ಅರ್ಹತಾ ಓಟದಲ್ಲಿ 175 ಕಿಮೀ ಕ್ರಮಿಸಿ ದೇಶದ ತ್ರಿವರ್ಣ ಧ್ವಜವನ್ನು ಎದೆಯ ಮೇಲೆ ಧರಿಸುವ ಅರ್ಹತೆ ಪಡೆದುಕೊಳ್ಳುತ್ತಾರೆ.

ತನ್ನ ಈ ಅಸಾಮಾನ್ಯ ಸಾಧನೆಗೆ ಮನಸ್ಥೈರ್ಯವೇ ಕಾರಣ ಎಂದು ಮುಖದಲ್ಲಿ ನಗು ಬೀರುತ್ತಾ ಅಲ್ಟ್ರಾ ಅಥ್ಲಿಟ್ ಅಶ್ವಿನಿ ಹೇಳುತ್ತಾರೆ.‌ ಕೌಟುಂಬಿಕ ಬದುಕು ಆರಂಭಿಸಿ 10 ವರ್ಷಗಳೇ ಕಳೆದಿದೆ. ನನ್ನೊಳಗಿನ ಈ ಆಸೆಯನ್ನು ಪತಿ ಸಂದೀಪ್ ಸತ್ಯನಾರಾಯಣರಿಗೆ ಹೇಳಿದಾಗ, ನನಗೆ ಮಾತ್ರವಲ್ಲದೆ ನನ್ನ ಕನಸಿಗೂ ಬೆನ್ನೆಲುಬಾಗಿ ನಿಂತರು. ಅವರಿಲ್ಲದೆ ಹೋಗಿದ್ದರೆ ನನ್ನ ಈ ಕನಸು ನನಸಾಗುತ್ತಿರಲಿಲ್ಲವೇನೋ ಎಂದು ಹೇಳಿದರು.

ಅಶ್ವಿನಿ ಭಟ್ ಒಬ್ಬರೇ ಕರ್ನಾಟಕದವರು

ಅಶ್ವಿನಿ ಭಟ್ ಒಬ್ಬರೇ ಕರ್ನಾಟಕದವರು

IAU Asia oscenia 24 hr Championshipನಲ್ಲಿ ದೇಶವನ್ನು ಒಟ್ಟು 12 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಪೈಕಿ 6 ಪುರುಷರು, 6 ಮಹಿಳೆಯರು ಇರಲಿದ್ದಾರೆ. ಇದರಲ್ಲಿ ಅಶ್ವಿನಿ ಭಟ್ ಒಬ್ಬರೇ ಕರ್ನಾಟಕದವರು. ದೇಶದಲ್ಲಿ ಹೆಚ್ಚು ಕ್ರೀಡಾಪಟುಗಳಿಲ್ಲದ ಅಲ್ಟ್ರಾ ಮ್ಯಾರಾಥನ್‌ಗೆ ಅಸಾಮಾನ್ಯ ಕ್ಷೇತ್ರ ಇದು. ದಿನದ 24 ಗಂಟೆಗಳ ಕಾಲವೂ ಓಡುವ ಸ್ಪರ್ಧೆ ಇದಾಗಿದ್ದು, ಎಲ್ಲರಿಂದಲೂ ಸಾಧ್ಯವಿಲ್ಲ ಎಂಬುವುದು ನಿಚ್ಚಳವಾಗಿದೆ.

ನಾನು ಓಡುತ್ತೇನೆ ಎಂದು ಅಲ್ಟ್ರಾ ಮ್ಯಾರಾಥನ್‌ಗೆ ಇಳಿದ ಅಶ್ವಿನಿ ಭಟ್, ಈಗ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ""ಅವಳು ಈ ವಿಚಾರ ಹೇಳಿದಾಗ ನಾನು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಟ್ಟೆ, ಎಂದು ಅಶ್ವಿನಿ ಪತಿ ಸಂದೀಪ್ ಸತ್ಯನಾರಾಯಣ ಹೇಳಿದ್ದಾರೆ. ಸಾಫ್ಟ್‌ವೇರ್ ಟೆಕ್ಕಿಯಾದ ಅಶ್ವಿನಿ ಗಣಪತಿ ಭಟ್, ಈಗ ಫುಲ್ ಟೈಮ್ ಅಥ್ಲೀಟ್ ಆಗಿ ರೂಪುಗೊಂಡಿದ್ದಾರೆ.

Story first published: Monday, July 4, 2022, 23:04 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X