ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ಗೆ ವಿದ್ಯುಕ್ತ ಚಾಲನೆ ನೀಡಿದ ನವೋಮಿ ಒಸಾಕಾ

Naomi Osaka lights flame as Tokyos games of hope open

ಟೋಕಿಯೋ: ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ 32ನೇ ಒಲಿಂಪಿಯಾಡ್ ಕ್ರೀಡಾಕೂಟ ವಿದ್ಯುಕ್ತವಾಗಿ ಚಾಲನೆಗೊಂಡಿದೆ. ಟೋಕಿಯೋದಲ್ಲಿ ಜುಲೈ 23ರಂದು ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದಿದೆ. ಜಪಾನ್‌ನ ಖ್ಯಾತ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಈ ಬಾರಿಯ ಒಲಿಂಪಿಕ್ಸ್‌ಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್ ವಿಕೆಟ್‌ಗೆ ಸಂಭ್ರಮಾಚರಿಸಿ ಟ್ರೋಲಿಗೀಡಾದ ಶ್ರೀಲಂಕಾ ಆಟಗಾರರು: ವಿಡಿಯೋಸೂರ್ಯಕುಮಾರ್ ಯಾದವ್ ವಿಕೆಟ್‌ಗೆ ಸಂಭ್ರಮಾಚರಿಸಿ ಟ್ರೋಲಿಗೀಡಾದ ಶ್ರೀಲಂಕಾ ಆಟಗಾರರು: ವಿಡಿಯೋ

ಟೋಕಿಯೋದಲ್ಲಿರುವ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಜುಲೈ 23ರ ಶುಕ್ರವಾರ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಒಲಿಂಪಿಕ್ಸ್ ದೀಪಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ನವೋಮಿ ಒಸಾಕಾ ಜಾಗತಿಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಕ್ರೀಡಾಪಟುಗಳ ಪಥಸಂಚಲನ, ವಿವಿಧ ಸಂಗೀತ, ನೃತ್ಯ ಕಾರ್ಯಕ್ರಮಗಳು ಮನರಂಜಿಸಿದವು. ಜಪಾನ್‌ನ ಸಿನಿಮಾ ನಟರು, ಕಲಾವಿದರು ಆರಂಭೋತ್ಸವಕ್ಕೆ ಮೆರಗು ತಂದಿದ್ದರು. ಜೊತೆಗೆ ಸಿಡಿಮದ್ದು, ದೀಪಾಲಂಕಾರ ಕಾರ್ಯಕ್ರಮಕ್ಕೆ ಕಳೆ ನೀಡಿತ್ತು.

ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳಿಗೆ ಶುಭಹಾರೈಸಿದ ದಿನೇಶ್ ಕಾರ್ತಿಕ್ಒಲಿಂಪಿಕ್ಸ್: ಭಾರತೀಯ ಅಥ್ಲೀಟ್‌ಗಳಿಗೆ ಶುಭಹಾರೈಸಿದ ದಿನೇಶ್ ಕಾರ್ತಿಕ್

ಜುಲೈ 23ರ ಉದ್ಘಾಟನಾ ದಿನ ಹೆಚ್ಚಿನ ಸ್ಪರ್ಧೆಗಳಿರಲಿಲ್ಲ. ಜುಲೈ 24ರಿಂದ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಆಗಸ್ಟ್ 8ರಂದು ಸಮಾರೋಪ ಸಮಾರಂಭದ ಮೂಲಕ ಟೋಕಿಯೋ ಒಲಿಂಪಿಕ್ಸ್‌ ತೆರೆಕಾಣಲಿದೆ. ಈ ಒಲಿಂಪಿಕ್ಸ್‌ನಲ್ಲಿ 205 ರಾಷ್ಟ್ರಗಳಿಂದ ಬರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

Story first published: Friday, July 23, 2021, 22:50 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X