ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ

National Sports Awards: Ministry extends deadline

ನವದೆಹಲಿ, ಜೂನ್ 3: ಕ್ರೀಡಾ ಸಚಿವಾಲಯವು 2020ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಿಸಿದೆ. ಕೊರೊನಾವೈರಸ್ ಪಿಡುಗಿನ ಕಾರಣಕ್ಕೆ ಅರ್ಜಿ ಸಲ್ಲಿಸಲು ಇದ್ದ ಕಡೇಯ ದಿನಾಂಕವನ್ನು ಜೂನ್ 22ಕ್ಕೆ ವಿಸ್ತರಿಸಲಾಗಿದೆ.

ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

ಬದಲಾದ ಮಾರ್ಗಸೂಚಿಯಲ್ಲಿ ಕ್ರೀಡಾಪಟುಗಳು ಸ್ವ-ನಾಮನಿರ್ದೇಶಿಸಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ಕ್ರೀಡಾ ಫೆಡರೇಶನ್‌ಗಳ ಮೂಲಕ ಅರ್ಜಿ ಸಲ್ಲಿಸಲು ತೊಂದರೆಯಾಗಿದ್ದರಿಂದ ಅಥ್ಲೀಟ್‌ಗಳು ತಾವೇ ಅರ್ಜಿ ಸಲ್ಲಿಸಲು ಕ್ರೀಡಾ ಸಚಿವಾಲಯ ಅವಕಾಶ ನೀಡಿದೆ.

'ಖೇಲ್ ರತ್ನ'ಕ್ಕೆ ಟಿಟಿ ಸುಂದರಿ ಮಣಿಕಾ ಬಾತ್ರಾ ಹೆಸರು ಶಿಫಾರಸು'ಖೇಲ್ ರತ್ನ'ಕ್ಕೆ ಟಿಟಿ ಸುಂದರಿ ಮಣಿಕಾ ಬಾತ್ರಾ ಹೆಸರು ಶಿಫಾರಸು

ಜೂನ್ 3 (ಬುಧವಾರ) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿ ಅರ್ಜಿ ಸಲ್ಲಿಸಲು ಕಡೇಯ ದಿನಾಂಕವಾಗಿತ್ತು. ಆದರೆ ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಸಚಿವಾಲಯ ಅರ್ಜಿ ಸಲ್ಲಿಸಲಿದ್ದ ಕಡೇ ದಿನಾಂಕವನ್ನು ವಿಸ್ತರಿಸಿದೆ.

ವಿರಾಟ್ ಕೊಹ್ಲಿಯ ಅಭ್ಯಾಸ ನೋಡಿ ನಾಚಿಕೆಯಾಗಿತ್ತು: ತಮೀಮ್ ಇಕ್ಬಾಲ್ವಿರಾಟ್ ಕೊಹ್ಲಿಯ ಅಭ್ಯಾಸ ನೋಡಿ ನಾಚಿಕೆಯಾಗಿತ್ತು: ತಮೀಮ್ ಇಕ್ಬಾಲ್

'ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ನಿಗದಿತ ಅಧಿಕಾರಿಗಳು/ವ್ಯಕ್ತಿಗಳ ಶಿಫಾರಸು ಪಡೆಯುವುದು ಕಷ್ಟವಾಗಿದೆ. ಹೀಗಾಗಿ ಪ್ರಶಸ್ತಿ ಯೋಜನೆಯಲ್ಲಿ ಸೂಚಿಸಲಾದ ಅಧಿಕಾರಿಗಳು/ವ್ಯಕ್ತಿಗಳ ಶಿಫಾರಸುಗಳೊಂದಿಗೆ ಮಾತ್ರ ಸಲ್ಲಿಸುವ ಷರತ್ತನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ,' ಎಂದು ಸಚಿವಾಲಯದ ಸುತ್ತೋಲೆಯಲ್ಲಿ ಹೇಳಿದೆ.

Story first published: Wednesday, June 3, 2020, 16:35 [IST]
Other articles published on Jun 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X