2021ರ ಸೀಸನ್ ಮುಗಿಸಲು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ನಿರ್ಧಾರ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಥ್ಲೀಟ್ ನೀರಜ್ ಚೋಪ್ರಾ 2021ರ ಸ್ಪರ್ಧಾತ್ಮಕ ಸೀಸನ್ ಕೊನೆಗೊಳಿಸಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಬೆನ್ನು ಬೆನ್ನಿಗೆ ಪ್ರಯಾಣಗಳ ವೇಳಾಪಟ್ಟಿ ಮತ್ತು ಅನಾರೋಗ್ಯದ ಕಾರಣ ಈ ನಿರ್ಧಾರ ತಾಳಿರುವುದಾಗಿ ತಿಳಿಸಿದ್ದಾರೆ. ಆದರೆ 2021ರ ಸೀಸನ್‌ಗೆ ಸಂಪೂರ್ಣ ಗಮನ ಹರಿಸುವುದಾಗಿ ನೀರಜ್ ಹೇಳಿದ್ದಾರೆ. ಟೋಕಿಯೋದಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚೋಪ್ರಾ ಬಂಗಾರ ಗೆದ್ದಿದ್ದರು.

ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ ಐಸಿಸಿ ಟಿ20ಐ ಟಾಪ್ 4 ಶ್ರೇಯಾಂಕಿತ ಬೌಲರ್ಸ್!ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ ಐಸಿಸಿ ಟಿ20ಐ ಟಾಪ್ 4 ಶ್ರೇಯಾಂಕಿತ ಬೌಲರ್ಸ್!

'ಟೋಕಿಯೋ ಬಳಿಕ ಬೇರೆ ಬೇರೆ ಕಡೆ ಪ್ರಯಾಣದ ವೇಳಾಪಟ್ಟಿ ಮತ್ತು ಅನಾರೋಗ್ಯದ ಕಾರಣ ಟೋಕಿಯೋ ಬಳಿಕ ನನಗೆ ಅಭ್ಯಾಸ ಪುನರಾರಂಭಿಸಲು ಸಾಧ್ಯವಾಗುತ್ತಿಲ್ಲ' ಎಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಾಕ್ ಅಥ್ಲೀಟ್‌ ಅರ್ಷದ್ ನದೀಮ್ ವಿಚಾರದಲ್ಲಿ ನೀರಜ್ ವಿವಾದಕ್ಕೆ ಸಿಲುಕಿದ್ದರು.

2022ರ ಸೀಸನ್‌ಗೆ ರೀಚಾರ್ಜ್ ಆಗಿ ಮತ್ತೆ ವಾಪಸ್ಸಾಗುತ್ತೇನೆ

2022ರ ಸೀಸನ್‌ಗೆ ರೀಚಾರ್ಜ್ ಆಗಿ ಮತ್ತೆ ವಾಪಸ್ಸಾಗುತ್ತೇನೆ

"ಅನೇಕ ಪ್ರಯಾಣಗಳ ವೇಳಾಪಟ್ಟಿಯಿರುವುದರಿಂದ ಮತ್ತು ಆರೋಗ್ಯ ಸ್ಥಿತಿ ಚೆನ್ನಾಗಿಲ್ಲವಾದ್ದರಿಂದ ನನ್ನ ತಂಡದೊಂದಿಗೆ ನನ್ನ 2021ರ ಸ್ಪರ್ಧಾತ್ಮಕ ಸೀಸನ್‌ ಅನ್ನು ಕಡಿತಗೊಳಿಸಲ ನಿರ್ಧರಿಸಿದ್ದೇನೆ. ಸ್ವಲ್ಪ ಸಮಯ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ವರ್ಲ್ಡ್ ಚಾಂಪಿಯನ್‌ಶಿಪ್‌, ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಸೇರಿ 2022ರ ಸೀಸನ್‌ಗೆ ರೀಚಾರ್ಜ್ ಆಗಿ ಮತ್ತೆ ವಾಪಸ್ಸಾಗುತ್ತೇನೆ. ಕಳೆದ ಕೆಲವು ವಾರಗಳಿಂದ ಭಾರತೀಯ ಅಥ್ಲೆಟಿಕ್ಸ್‌ ನೀಡಿದ ಎಲ್ಲ ಬೆಂಬಲದಿಂದ ನಾನು ಪ್ರೋತ್ಸಾಹಿತನಾಗಿದ್ದೇನೆ. ಮುಂಬರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ಭಾರತ ಮತ್ತು ಭಾರತೀಯ ಅಥ್ಲೆಟಿಕ್ಸ್‌ಗೆ ಬೆಂಬಲವನ್ನು ನೀಡುವಂತೆ ನಿಮ್ಮೆಲ್ಲರನ್ನೂ ನಾನು ಒತ್ತಾಯಿಸುತ್ತಿದ್ದೇನೆ," ಎಂದು ನೀರಜ್ ಚೋಪ್ರಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಿವಾದಗಳಿಗೆ ಸಿಲುಕಿದ್ದ ನೀರಜ್ ಚೋಪ್ರಾ

ವಿವಾದಗಳಿಗೆ ಸಿಲುಕಿದ್ದ ನೀರಜ್ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್‌ನಿಂದ ವಾಪಸ್ ಆಗ ಬಳಿಕ ನೀರಜ್ ಚೋಪ್ರಾ ಒಂದೆರಡು ವಿವಾದಗಳಲ್ಲಿ ಥಳುಕು ಹಾಕಿಕೊಂಡಿದ್ದರು. ರೆಡ್‌ ಎಫ್‌ನ ಆರ್‌ಜೆ ಮಲಿಷ್ಕಾ ಅವರು ವಿಡಿಯೋ ಸಂದರ್ಶನದ ವೇಳೆ ಡ್ಯಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು. ಆದರೆ ಈ ಘಟನೆಯಲ್ಲಿ ನೀರಜ್ ಅವರದ್ದು ತಪ್ಪೇನೂ ಇರಲಿಲ್ಲ. ಆರ್‌ಜೆ ಮಿಲಿಷ್ಕಾ ಬಗ್ಗೆ ಹೆಚ್ಚಿನವರು ಅಸಮಾಧಾನ ತೋರಿಕೊಂಡಿದ್ದರು. ಟೋಕಿಯೋ ಒಲಿಂಪಿಕ್ಸ್ ವೇಳೆ ನೀರಜ್ ಅವರ ಜಾವೆಲಿನ್ ಅನ್ನು ಪಾಕ್‌ ಅಥ್ಲೀಟ್‌ ಅರ್ಷದ್ ನದೀಮ್ ಹಿಡಿದುಕೊಂಡಿದ್ದರು ಎಂದು ನೀರಜ್ ಹೇಳಿದ್ದನ್ನು ಮಾಧ್ಯಮಗಳು ಬೇರೆಯೇ ರೀತಿ ಅರ್ಥೈಸಿಕೊಂಡಿದ್ದವು. ಈ ಬಗ್ಗೆಯೂ ಸ್ಪಷ್ಟನೆ ನೀಡಿದ ಚೋಪ್ರಾ, ನನ್ನ ಜಾವೆಲಿನ್ ಹಿಡಿದುಕೊಂಡ ಮಾತ್ರಕ್ಕೆ ಅರ್ಷದ್ ತಪ್ಪೇನೂ ಇಲ್ಲ. ಅಭ್ಯಾಸಕ್ಕಾಗಿ ಕೆಲವು ಸಾರಿ ಹೀಗೆ ಬೇರೆ ಅಥ್ಲೀಟ್‌ಗಳು ಇನ್ನೊಬ್ಬರ ವಸ್ತುಗಳನ್ನು ಹಿಡಿದುಕೊಳ್ಳೋದಿದೆ. ಇದು ನಿಯಮದೊಳಗೇ ಬರುತ್ತದೆ. ಈ ಸಂಗತಿಯನ್ನು ದೊಡ್ಡದಾಗಿ ಮಾಡಬೇಡಿ. ಕ್ರೀಡೆ ನಮಗೆ ಒಗ್ಗಟ್ಟನ್ನು ಕಲಿಸುತ್ತದೆ. ಜೊತೆಯಾಗಿ ಬದುಕೋದನ್ನು ಹೇಳಿಕೊಡುತ್ತದೆ. ಕೋಮುವಾದದ ವಿಚಾರಕ್ಕೆಲ್ಲ ನಾನು, ನನ್ನ ಹೇಳಿಕೆಯನ್ನು ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಟೋಕಿಯೋದಲ್ಲಿ ಇತಿಹಾಸ ನಿರ್ಮಿಸಿದ್ದ ನೀರಜ್

ಟೋಕಿಯೋದಲ್ಲಿ ಇತಿಹಾಸ ನಿರ್ಮಿಸಿದ್ದ ನೀರಜ್

23ರ ಹರೆಯದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕೆನ್ನುವ ಭಾರತದ ಆಸೆಯನ್ನು ಈಡೇರಿಸಿದ್ದರು. ಟೋಕಿಯೋದಿಂದ ವಾಪಸ್ಸಾದ ಬಳಿಕ ಬ್ಯುಸಿ ಶೆಡ್ಯೂಲ್‌ನಿಂದಾಗಿ ಓಡಾಟ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದ್ಯ ನೀರಜ್ ಚೋಪ್ರಾ ಸ್ಥಿತಿ ಚೆನ್ನಾಗಿಲ್ಲ. ಅವರಿಗೆ ಸ್ವಲ್ಪ ಜ್ವರವೂ ಇದೆ. ಹೀಗಾಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ನೀರಜ್ ಬಯಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ (ಈಟಿ) ಎಸೆತದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಚೋಪ್ರಾ, 87.58 ಮೀಟರ್ ಸಾಧನೆಯೊಂದಿಗೆ ಬಂಗಾರ ಗೆದ್ದಿದ್ದರು. ಈ ಬಂಗಾರದ ಪದಕ ಹಲವಾರು ದಾಖಲೆಗಳಿಗೆ ಕಾರಣವಾಗಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲನೇ ಚಿನ್ನವಾಗಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಮೊದಲನೇ ಬಂಗಾರದ ಪದಕವಾಗಿ, ಒಲಿಂಪಿಕ್ಸ್‌ನಲ್ಲಿ ಭಾರತದ ಪರ ವೈಯಕ್ತಿಕ ವಿಭಾಗದಲ್ಲಿ ಗೆದ್ದ ಎರಡನೇ ಪದಕವಾಗಿ, ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಪದಕವಾಗಿ ಈ ಸಾಧನೆ ಗುರುತಿಸಿಕೊಂಡಿದೆ. ಭಾರತಕ್ಕೆ ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಬಂದಿದ್ದು ಬ್ರಿಟಿಷ್-ಇಂಡಿಯನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಅವರಿಗೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿಚರ್ಡ್ 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಮೊದಲ ವೈಯಕ್ತಿಕ ಬಂಗಾರ ಗೆದ್ದ ಹಿರಿಮೆ ಶೂಟರ್ ಅಭಿನವ್ ಬಿಂದ್ರಾಗೆ ಸಲ್ಲುತ್ತದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ 10 ಮೀಟರ್ ಏರ್ ರೈಫಲ್‌ನಲ್ಲಿ ಬಂಗಾರ ಗೆದ್ದಿದ್ದರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Friday, August 27, 2021, 8:55 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X