ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಮನ್‍ವೆಲ್ತ್ ಗೇಮ್ಸ್‌ನಿಂದ ಹೊರಕ್ಕೆ?

ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಜಾವೆಲಿನ್ ಪಟು ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಈ ಬಾರಿಯ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಿಂದ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಸತತವಾಗಿ 23 ಮತ್ತು 22 ಏಕದಿನ ಪಂದ್ಯ ಸೋತ ಕಳಪೆ ತಂಡವಿದು; ಅಪಾಯದಲ್ಲಿ ವಿಂಡೀಸ್!ಸತತವಾಗಿ 23 ಮತ್ತು 22 ಏಕದಿನ ಪಂದ್ಯ ಸೋತ ಕಳಪೆ ತಂಡವಿದು; ಅಪಾಯದಲ್ಲಿ ವಿಂಡೀಸ್!

ಇತ್ತೀಚೆಗಷ್ಟೇ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿ ಹೊರಹೊಮ್ಮಿದ್ದ ನೀರಜ್ ಚೋಪ್ರಾ ಗಾಯದ ಸಮಸ್ಯೆಗೆ ಒಳಗಾಗಿದ್ದರು ಫಿಟ್‌ನೆಸ್ ಹೊಂದಿಲ್ಲದ ಕಾರಣ ಇದೇ ಜುಲೈ 28ರಿಂದ ಆರಂಭವಾಗಲಿರುವ ಕಾಮನ್ ವೆಲ್ತ್ ಗೇಮ್ಸ್‌ಗೆ ಗೈರಾಗಲಿದ್ದಾರೆ.

ಭಾರತ ಮತ್ತು ವಿಂಡೀಸ್ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?ಭಾರತ ಮತ್ತು ವಿಂಡೀಸ್ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ತಾನಾಡಿರುವ ಹಲವಾರು ಕ್ರೀಡಾಕೂಟಗಳಲ್ಲಿ ಪದಕದ ಬೇಟೆಯಾಡಿರುವ ನೀರಜ್ ಚೋಪ್ರಾ ಈ ಬಾರಿಯ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಹುಟ್ಟುಹಾಕಿದ್ದಂತಹ ಕ್ರೀಡಾಪಟು. ಹೀಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ನೀರಜ್ ಚೋಪ್ರಾ ಈ ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿ ಸದ್ಯ ಕ್ರೀಡಾಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ

ಸದ್ಯ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿರುವ ನೀರಜ್ ಚೋಪ್ರಾ ಮೊನ್ನೆಯಷ್ಟೇ ( ಜುಲೈ 24 ) ಓರೆಗಾನ್‌ನ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 88.13 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಮೂಲಕ 2003ರಿಂದ ಇಲ್ಲಿಯವರೆಗೂ ನಡೆದಿರುವ ಯಾವುದೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿಯೂ ಪದಕ ಗೆಲ್ಲದೇ ಇದ್ದ ಭಾರತದ ಪರ ನೀರಜ್ ಚೋಪ್ರಾ ಪದಕವನ್ನು ಗೆದ್ದು 19 ವರ್ಷಗಳ ಪದಕದ ಬರವನ್ನು ನೀಗಿಸಿದರು. ಈ ಕ್ರೀಡಾಕೂಟದ ಫೈನಲ್‌ನಲ್ಲಿ ಮೊದಲಿಗೆ 82.39 ಮೀಟರ್ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ ಎರಡನೇ ಪ್ರಯತ್ನದಲ್ಲಿ ಕೂಡಾ ಕಳಪೆಯಾಗಿದ್ದರು. ನಂತರ ಮೂರನೇ ಎಸೆತದಲ್ಲಿ 86.37 ಮೀಟರ್ ಜಾವೆಲಿನ್ ಎಸೆದ ನೀರಜ್ ಚೋಪ್ರಾ ನಾಲ್ಕನೇ ಎಸೆತದಲ್ಲಿ 88.13 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರ ಮೂಲಕ ಎರಡನೇ ಸ್ಥಾನ ಗಿಟ್ಟಿಸಿಕೊಂಡು ರಜಕ ಪದಕ ವಿಜೇತರಾದರು.

ಕಳೆದ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ನೀರಜ್

ಕಳೆದ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ನೀರಜ್

2018ರಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನೀರಜ್ ಚೋಪ್ರಾ ಫೈನಲ್ ಸುತ್ತಿನಲ್ಲಿ 86.47 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದರು.

ನೀರಜ್ ಚೋಪ್ರಾ ಗೆದ್ದಿರುವ ಪದಕಗಳ ಪಟ್ಟಿ

ನೀರಜ್ ಚೋಪ್ರಾ ಗೆದ್ದಿರುವ ಪದಕಗಳ ಪಟ್ಟಿ

• 2016 - ಸೌತ್ ಏಷ್ಯನ್ ಗೇಮ್ಸ್ - ಚಿನ್ನ

• 2016 - ಏಷ್ಯನ್ ಜೂನಿಯರ್ ಚಾಂಪಿಯನ್‍ಶಿಪ್ - ಬೆಳ್ಳಿ

• 2016 - ವಿಶ್ವ ಅಂಡರ್ 20 ಚಾಂಪಿಯನ್‍ಶಿಪ್ - ಚಿನ್ನ

• 2017 - ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸರಣಿ - ಬೆಳ್ಳಿ

• 2017 - ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸರಣಿ - ಬೆಳ್ಳಿ

• 2017 - ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸರಣಿ - ಕಂಚು

• 2018 - ಆಫೆನ್‌ಬರ್ಗ್ ಜಾವೆಲಿನ್ ಥ್ರೋ ಮೀಟ್ - ಬೆಳ್ಳಿ

• 2018 - ಕಾಮನ್ ವೆಲ್ತ್ ಗೇಮ್ಸ್ - ಚಿನ್ನ

• 2018 - ಸಾಟ್ ವಿಲ್ಲೆ ಅಥ್ಲೆಟಿಕ್ಸ್ ಮೀಟ್ - ಚಿನ್ನ

• 2018 - ಏಷ್ಯನ್ ಗೇಮ್ಸ್ - ಚಿನ್ನ

• 2020 - ಅಥ್ಲೆಟಿಕ್ಸ್ ಸೆಂಟ್ರಲ್ ನಾರ್ತ್ ವೆಸ್ಟ್ ಲೀಗ್ ಮೀಟ್ - ಚಿನ್ನ

• 2021 - ಮೀಟಿಂಗ್ ಸಿಡಡ್ ಡಿ ಲಿಸ್ಬೊವಾ - ಚಿನ್ನ

• 2021 - ಫೋಲ್ಕ್ ಸ್ಕಾಮ್ ಗ್ರ್ಯಾಂಡ್ ಪ್ರಿಕ್ಸ್ - ಚಿನ್ನ

• 2021 - ಕೌರ್ಟೆನ್ ಗೇಮ್ಸ್ - ಕಂಚು

• 2021 - ಒಲಿಂಪಿಕ್ ಕ್ರೀಡಾಕೂಟ - ಚಿನ್ನ

• 2022 - ಪಾವೋ ನುರ್ಮಿ ಗೇಮ್ಸ್ - ಬೆಳ್ಳಿ

• 2022 - ಕೌರ್ಟೆನ್ ಗೇಮ್ಸ್ - ಚಿನ್ನ

• 2022 - ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ - ಬೆಳ್ಳಿ

For Quick Alerts
ALLOW NOTIFICATIONS
For Daily Alerts
Story first published: Tuesday, July 26, 2022, 12:57 [IST]
Other articles published on Jul 26, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X