ನ್ಯೂಯಾರ್ಕ್, ಜೂನ್ 24: ನವೆಂಬರ್ 1ರಂದು ನಡೆಯಲಿದ್ದ 'ದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್' ಸ್ಪರ್ಧೆ ರದ್ದುಗೊಂಡಿದೆ. ವಿಶ್ವದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಿಂದಾಗಿ ಪ್ರತಿಷ್ಠಿತ ಮ್ಯಾರಥಾನ್ ಸ್ಪರ್ಧೆ ರದ್ದೆನಿಸಿದೆ.
ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!
ವಿಶ್ವದ ಅತೀ ದೊಡ್ಡ ಮ್ಯಾರಥಾನ್ ಸ್ಪರ್ಧೆ ರದ್ದಾಗಿರುವುದನ್ನು ನ್ಯೂಯಾರ್ಕ್ ರೋಡ್ ರನ್ನರ್ಸ್ ಘೋಷಿಸಿದೆ. ದೊಡ್ಡ ಸಂಖ್ಯೆಯ ಓಟಗಾರರು, ಸ್ವಯಂಸೇವಕರು ಮತ್ತು ವೀಕ್ಷಕರ ಆರೋಗ್ಯ ಮತ್ತು ಸುರಕ್ಷಾ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಮೇಯರ್ ಆಫೀಸ್ ಜೊತೆ ಚರ್ಚಿಸಿ ಸ್ಪರ್ಧೆ ರದ್ದಿಗೊಳಿಸುವ ನಿರ್ಧಾರ ತಾಳಿರುವುದಾಗಿ ನ್ಯೂಯಾರ್ಕ್ ರೋಡ್ ರನ್ನರ್ಸ್ ಹೇಳಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!
'ನಮ್ಮ ಸಿಟಿಯಲ್ಲಿ ಮ್ಯಾರಥಾನ್ ಹೆಚ್ಚು ಹೆಸರಾಂತ ಮತ್ತು ಹೆಚ್ಚು ಮಂದಿ ಪ್ರೀತಿಸುವ ಕ್ರೀಡೆ. ನ್ಯೂಯಾರ್ಕ್ ರೋಡ್ ರನ್ನರ್ಸ್, ವೀಕ್ಷಕರ ಮತ್ತು ಓಟಗಾರರ ಆರೋಗ್ಯ ಮತ್ತು ಸುರಕ್ಷೆಗೆ ಹೆಚ್ಚು ಆದ್ಯತೆ ನೀಡಿ ರೇಸ್ ರದ್ದುಗೊಳಿಸಿರುವುದನ್ನು ನಾನು ಶ್ಲಾಘಿಸುತ್ತೇನೆ,' ಎಂದು ಮೇಯರ್ ಬಿಲ್ ಡೆ ಬ್ಲಾಸಿಯೊ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಪಿಸಿಬಿ ವರದಿಯಲ್ಲಿ ಕೊರೊನಾ ಪಾಸಿಟಿವ್: ತನ್ನದು ನೆಗೆಟಿವ್ ಎಂದು ಘೋಷಿಸಿಕೊಂಡ ಮೊಹಮ್ಮದ್ ಹಫೀಜ್
ಕಳೆದ ವರ್ಷ ಈ ಮ್ಯಾರಥಾನ್ ಸ್ಪರ್ಧೆಯಲ್ಲಿ 53,640 ಸ್ಪರ್ಧಾಳುಗಳು ಓಟ ಪೂರೈಸಿ ವಿಶ್ವ ದಾಖಲೆಯ ನಿರ್ಮಿಸಿದ್ದರು. 2020ರ ಸ್ಪರ್ಧೆಗೆ ಪ್ರವೇಶಾತಿ ಪಡೆದುಕೊಂಡವರ ಪ್ರವೇಶ ಹಣವನ್ನು ಹಿಂದಿರುಗಿನಲಾಗುವು ಅಥವಾ 2021, 2022, 2023ರ ಸೀಸನ್ನಲ್ಲಿ ಪ್ರವೇಶದ ಭರವಸೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.