ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಪ್ಯಾರಾ ಈಜು ಚಾಂಪಿಯನ್‌ಷಿಗೆ ಅರ್ಹತೆ ಪಡೆದ ಕನ್ನಡಿಗ ನಿರಂಜನ್‌ ಮುಕುಂದನ್‌

Niranjan Mukundan qualifies for World Para Swimming Cships

ಬೆಂಗಳೂರು, ಮೇ 03: ಬೆಂಗಳೂರಿನ ಪ್ಯಾರಾ ಈಜುಪಟು ನಿರಂಜನ್‌ ಮುಕುಂದನ್‌, ಇದೇ ವರ್ಷ ಲಂಡನ್‌ನಲ್ಲಿ ನಡೆಯಲಿರುವ ಪ್ಯಾರಾ ಈಜು ವಿಶ್ವ ಚಾಂಪಿಯನ್‌ಷಿಪ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

 2019ರ ಐಪಿಎಲ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ರಬಾಡ ಔಟ್‌! 2019ರ ಐಪಿಎಲ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ರಬಾಡ ಔಟ್‌!

ಇತ್ತೀಚೆಗಷ್ಟೇ ಬ್ರೆಜಿಲ್‌ನಲ್ಲಿ ನಡೆದ ವಿಶ್ವ ಸೀರೀಸ್‌ ಪ್ಯಾರಾ ಈಜು ಚಾಂಪಿಯನ್‌ಷಿಪ್‌ನ 200 ಮೀ. ವೈಯಕ್ತಿಕ ಮೆಡ್ಲೇ ವಿಭಾಗದಲ್ಲಿ ಚಿನ್ನ ಮತ್ತು 50 ಮೀ, ಬಟರ್‌ಫ್ಲೈ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ನಿರಂಜನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ಬೆನ್ನು ಮೂಳೆಯ ಅಸಹಜ ಬೆಳವಣಿಗೆಯೊಂದಿಗೆ ಹುಟ್ಟಿದ ನಿರಂಜನ್‌ ಈವರೆಗೆ ಒಟ್ಟಾರೆ 17 ಶಸ್ತ್ರಚಿಕಿತ್ಸೆಗಳಿಗೆ ಒಳಪಟ್ಟಿದ್ದಾರೆ. ಆಕ್ವಾಥೆರಪಿ ಮೂಲಕ ತಮ್ಮ ಕಾಲುಗಳಿಗೆ ಶಕ್ತಿ ತುಂಬುವ ಉದ್ದೇಶದಿಂದ ಅವರು ಬಾಲ್ಯದಲ್ಲೇ ಈಜು ಆಯ್ಕೆ ಮಾಡಿಕೊಂಡರು.

 ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿಯ ನಿಜವಾದ ವಯಸ್ಸು ಬಹಿರಂಗ ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿಯ ನಿಜವಾದ ವಯಸ್ಸು ಬಹಿರಂಗ

"ನೀರಿನಲ್ಲಿ ಇಳಿದಾಕ್ಷಣ ನಾನು ಮೀನಿನಂತೆ ಎಂಬ ಅನುಭವವಾಗುತ್ತದೆ. ಮೀನಿನಂತೆಯೇ ಈಜುತ್ತೇನೆ ಕೂಡ. ಸಾಮಾನ್ಯವಾಗಿ ಮಕ್ಕಳು ಈಜು ಕಲಿಯಲು 15-20 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ನಾನು ಕೇವಲ 10 ದಿನಗಳಲ್ಲಿ ಕಲಿತೆ. ಇದು ಈಜಿನಲ್ಲಿ ಮುಂದುವರಿಯಲು ನನ್ನನ್ನು ಪ್ರೇರೇಪಿಸಿತು,'' ಎಂದು ನಿರಂಜನ್‌ ಹೇಳಿದ್ದಾರೆ.

"2003ರಲ್ಲಿ ಈಜು ಆರಂಭಿಸಿದೆ. 6 ತಿಂಗಳ ಅಭ್ಯಾಸದ ಬಳಿಕ ಕೋಚ್‌ ಜಾನ್‌ ಕ್ರಿಸ್ಟೋಫರ್‌ ನನ್ನಲ್ಲಿನ ಪ್ರತಿಭೆ ಗುರುತಿಸಿ ಪ್ಯಾರಾ ಈಜಿನಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು. ಅಂತೆಯೇ ಮುಂಬಯಿನಲ್ಲಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಬೆಳ್ಳಿ ಪದಕ ಗೆದ್ದೆ,'' ಎಂದು ತಮ್ಮ ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ನಿರಂಜನ್‌ ನೆನೆದಿದ್ದಾರೆ.

ಬಾಂಗ್ಲಾದೇಶ ತಂಡದ ಜರ್ಸಿ ಪಾಕಿಸ್ತಾನದಂತಿದೆ ಎಂದ ಬಾಂಗ್ಲಾ ಅಭಿಮಾನಿಗಳು


ಪ್ಯಾರಾ ಈಜಿನಲ್ಲಿ ಸದ್ಯ ಭಾರತದ 3ನೇ ಶ್ರೇಷ್ಠ ಹಾಗೂ ವಿಶ್ವದ 14ನೇ ಶ್ರೇಷ್ಠ ಈಜುಪಟುವಾಗಿರುವ ನಿರಂಜನ್‌, ಇದೇ ವರ್ಷದ ಅಂತ್ಯದ ಹೊತ್ತಿಗೆ ಪ್ಯಾರಾ ಈಜಿನಲ್ಲಿ ವಿಶ್ವದ ಟಾಪ್‌ 10 ಶ್ರೇಯಾಂಕದಲ್ಲಿ ಗುರುತಿಸಿಕೊಳ್ಳುವ ಗುರಿ ಹೊಂದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಎದುರಾದ ಮಂಡಿ ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದ ನಿರಂಜನ್‌ ಕೆಲ ಸಮಯ ಈಜಿನಿಂದ ದೂರ ಉಳಿದಿದ್ದರು. ಆದರೀಗ ಭರ್ಜರಿ ಕಮ್‌ಬ್ಯಾಕ್‌ ಮಾಡಿ ಎರಡು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ಗೆ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.

 ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಇನ್ಮುಂದೆ ಇಂಟರ್ ನ್ಯಾಷನಲ್ ಕ್ರಿಕೆಟರ್! ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಇನ್ಮುಂದೆ ಇಂಟರ್ ನ್ಯಾಷನಲ್ ಕ್ರಿಕೆಟರ್!

ಜೂನಿಯರ್‌ ಪ್ಯಾರಾ ಈಜು ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ 5 ಚಿನ್ನ ಗೆಲ್ಲುವ ಮೂಲಕ ವಿಶ್ವ ದಾಖಲೆಯನ್ನೂ ಬರೆದಿದ್ದ ನಿರಂಜನ್‌, ಕಳೆದ ತಿಂಗಳು ಫೋಬ್ಸ್‌ ಪ್ರಕಟಿಸಿದ ಏಷ್ಯಾ ವಿಭಾಗದಲ್ಲಿ 30 ವರ್ಷದೊಳಗಿನವರ ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡು 23ನೇ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು.

Story first published: Friday, May 3, 2019, 13:29 [IST]
Other articles published on May 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X