ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಾರ್ವೆ ಚೆಸ್ ಇವೆಂಟ್: ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಸೋಲಿಸಿದ ಭಾರತದ ವಿಶ್ವನಾಥನ್ ಆನಂದ್

Norway Chess Event: Indias Vishwanathan Anand Defeated World Champion Magnus Carlson

ಭಾರತದ ಖ್ಯಾತ ಚೆಸ್ ಪಟು ವಿಶ್ವನಾಥನ್ ಆನಂದ್ ಅವರು ನಾರ್ವೆ ಚೆಸ್‌ನ ಬ್ಲಿಟ್ಜ್ ಸ್ಪರ್ಧೆಯ ಏಳನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿ ನಾಲ್ಕನೇ ಸ್ಥಾನ ಪಡೆದರು.

ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ನಾಲ್ಕು ಮತ್ತು ಒಂಬತ್ತನೇ ಸುತ್ತಿನಲ್ಲಿ ಕ್ರಮವಾಗಿ ನೆದರ್‌ಲ್ಯಾಂಡ್‌ನ ಅನೀಶ್ ಗಿರಿ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ವಿರುದ್ಧ ಸೋಲು ಅನುಭವಿಸಿದರು. ಮಂಗಳವಾರ ಆರಂಭದಲ್ಲಿ 10 ಆಟಗಾರರ ಬ್ಲಿಟ್ಜ್ ಸ್ಪರ್ಧೆಯಲ್ಲಿ 5 ಅಂಕಗಳೊಂದಿಗೆ ಮುಗಿಸಿದರು.

ನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ; ಹಾರ್ದಿಕ್ ಪತ್ನಿ ನತಾಶನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ; ಹಾರ್ದಿಕ್ ಪತ್ನಿ ನತಾಶ

ಎರಡನೇ ಸುತ್ತಿನಲ್ಲಿ ವೆಸ್ಲಿ ಸೋ ಅವರೊಂದಿಗೆ ಡ್ರಾ ಮಾಡುವ ಮೊದಲು ಭಾರತೀಯ ಗ್ರಾಂಡ್ ಮಾಸ್ಟರ್ ಬ್ಲಿಟ್ಜ್‌ನಲ್ಲಿ ನಾರ್ವೆಯ ಆರ್ಯನ್ ತಾರಿ ವಿರುದ್ಧ ಗೆಲುವಿನೊಂದಿಗೆ ಪ್ರಾರಂಭಿಸಿದರು. ವಿಶ್ವನಾಥನ್ ಆನಂದ್ ಮೂರನೇ ಸುತ್ತಿನಲ್ಲಿ ಅನುಭವಿ ವೆಸೆಲಿನ್ ಟೊಪಲೋವ್ ವಿರುದ್ಧ ಜಯ ಸಾಧಿಸಿದರೆ, ತೈಮೂರ್ ರಾಡ್ಜಬೊವ್ ಅವರೊಂದಿಗೆ ಪಾಯಿಂಟ್ ಹಂಚಿಕೊಂಡರು.

Norway Chess Event: Indias Vishwanathan Anand Defeated World Champion Magnus Carlson

ನೆದರ್‌ಲ್ಯಾಂಡ್‌ನ ಅನೀಶ್ ಗಿರಿ ವಿರುದ್ಧ ಸೋತರು ಮತ್ತು ಚೀನಾದ ಹಾವೊ ವಾಂಗ್ ಜೊತೆ ಡ್ರಾ ಮಾಡಿಕೊಂಡ ನಂತರ ವಿಶ್ವನಾಥನ್ ಆನಂದ್, ಕಾರ್ಲ್‌ಸನ್ ವಿರುದ್ಧ ಗೆಲುವು ಸಾಧಿಸಿದರು. ಇತ್ತೀಚೆಗೆ ಆನ್‌ಲೈನ್ ಬ್ಲಿಟ್ಜ್ ಟೂರ್ನಮೆಂಟ್‌ನಲ್ಲಿ ನಾರ್ವೇಜಿಯನ್ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ ಭಾರತದ ಹದಿಹರೆಯದ ಬಾಲಕ ಆರ್. ಪ್ರಗ್ನ್ಯಾನಂದ ಬೆನ್ನಲ್ಲೇ ಮಾಗ್ನಸ್ ಕಾರ್ಲ್‌ಸನ್ ವಿರುದ್ಧ ವಿಶ್ವನಾಥನ್ ಆನಂದ್ ಅವರು ಗೆಲುವು ಸಲ್ಲಿಸಿದರು.

ಅಮೆರಿಕದ ವೆಸ್ಲಿ ಸೋ 6.5 ಅಂಕಗಳೊಂದಿಗೆ ಬ್ಲಿಟ್ಜ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮಾಗ್ನಸ್ ಕಾರ್ಲ್‌ಸನ್‌ಗಿಂತ ಒಂದು ಅಂಕ ಕಡಿಮೆ ಹೊಂದಿರುವ ಅನೀಶ್ ಗಿರಿ ಮೂರನೇ ಸ್ಥಾನ ಪಡೆದರು. ಹೀಗಾಗಿ ಅವರು ಕ್ಲಾಸಿಕಲ್ ಇವೆಂಟ್‌ಗಾಗಿ ತಮ್ಮ ಆರಂಭಿಕ ಸಂಖ್ಯೆಯನ್ನು ಆಯ್ಕೆ ಮಾಡುವ ಹಕ್ಕನ್ನು ಗಳಿಸಿದರು.

ಮಂಗಳವಾರದ ನಂತರ 10 ಆಟಗಾರರು ಕ್ಲಾಸಿಕಲ್ ಇವೆಂಟ್‌ ಅನ್ನು ಆಡಲಿದ್ದಾರೆ. ಭಾರತದ ಮಾಜಿ ವಿಶ್ವನಾಥನ್ ಆನಂದ್ ಕ್ಲಾಸಿಕಲ್ ಈವೆಂಟ್‌ನಲ್ಲಿ ವಾಚಿಯರ್-ಲಾಗ್ರೇವ್ ವಿರುದ್ಧದ ಆಟದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತಾನೆ.

Story first published: Tuesday, May 31, 2022, 14:05 [IST]
Other articles published on May 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X