ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಂಧನದ ಭೀತಿಯಲ್ಲಿ ಒಲಿಂಪಿಕ್ ಬಂಗಾರ ವಿಜೇತ ಸ್ವಿಮ್ಮರ್ ಕ್ಲೆಟ್ ಕೆಲ್ಲರ್

Olympic medalist Klete Keller pleads guilty to January riot felony

ವಾಷಿಂಗ್ಟನ್: ಒಲಿಂಪಿಕ್‌ನಲ್ಲಿ ಎರಡು ಬಾರಿ ಬಂಗಾರದ ಪದಕ ಗೆದ್ದಿದ್ದ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ಸ್ವಿಮ್ಮರ್ ಕ್ಲೆಟ್ ಕೆಲ್ಲರ್‌ಗೆ ಬಂಧನದ ಭೀತಿ ಎದುರಾಗಿದೆ. ಕಳೆದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಗಲಭೆ ನಡೆಸಿದ್ದಾಗ ಆ ಗಲಭೆಯಲ್ಲಿ ಕೆಲ್ಲರ್ ಕೂಡ ಪಾಲ್ಗೊಂಡಿದ್ದಾಗಿ ಆರೋಪ ಕೇಳಿ ಬಂದಿತ್ತು. ಕೆಲ್ಲರ್ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ.

ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್

ಕಳೆದ ಜನವರಿ 6ರಂದು ದ ಕ್ಯಾಪಿಟಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಗಲಭೆ ನಡೆಸಿದ್ದರು. ಈ ಗಲಭೆಯಲ್ಲಿ ಕ್ಲೆಟ್ ಕೆಲ್ಲರ್ ಕೂಡ ಭಾಗವಹಿಸಿದ್ದಾಗಿ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಸಂಬಂಧಿಸಿ ಬುಧವಾರ (ಸೆಪ್ಟೆಂಬರ್‌ 29) ವಿಚಾರಣೆ ನಡೆದಿತ್ತು. ಈ ವೇಳೆ ಕೆಲ್ಲರ್ ತಾನು ತಪ್ಪೆಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.

ಒಲಿಂಪಿಕ್‌ನಲ್ಲಿ ಎರಡು ಬಾರಿ ಬಂಗಾರದ ಪದಕವೂ ಸೇರಿ ಒಟ್ಟಿಗೆ ಐದು ಬಾರಿ ಪದಕ ಗೆದ್ದಿದ್ದ ಕೆಲ್ಲರ್, ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷ ಟ್ರಂಪ್‌ ಸೋತು ಜೋ ಬಿಡೆನ್ ಆಯ್ಕೆಯಾದಾಗ ಟ್ರಂಪ್‌ ಬೆಂಬಲಿಗರ ಜೊತೆ ಸೇರಿ ಗಲಭೆಯಲ್ಲಿ ಪಾಲ್ಗೊಂಡಿದ್ದರು. ಮೊದಲ ವಿಚಾರಣೆಯ ವೇಳೆ ಕೆಲ್ಲರ್ ತನ್ನ ತಪ್ಪು ಒಪ್ಪಿಕೊಂಡಿರುವುದರಿಂದ ಅವರನ್ನು ಮತ್ತೊಂದು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಐಪಿಎಲ್ 2021: ಆರ್‌ಸಿಬಿ ಪರ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್ಐಪಿಎಲ್ 2021: ಆರ್‌ಸಿಬಿ ಪರ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್

ಚುನಾವಣೆಯಲ್ಲಿ ಜೋ ಬಿಡೆನ್ ಗೆದ್ದಾಗ ವಿಜಯದ ಮೆರವಣಿಗೆಗೆ ಕೆಲ್ಲರ್ ಜೊತೆಗೆ ಟ್ರಂಪ್ ಬೆಂಬಲಿಗರು ಅಡ್ಡಿ ಪಡಿಸಿದ್ದರು. ಕ್ಯಾಪಿಟಲ್ ರೋಟುಂಡಾದಿಂದ ಕೆಲ್ಲರ್ ಅವರನ್ನು ದೂರ ಸರಿಸಲು ಅಧಿಕಾರಿಗಳು ಯತ್ನಿಸಿದ್ದಾಗ ಅಧಿಕಾರಿಗಳನ್ನು ಕೆಲ್ಲರ್ ತಳ್ಳಿದ್ದರು. ಅಲ್ಲದೆ, ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ಬಹುಮತದ ನಾಯಕ ಚಕ್ ಶುಮರ್ ಅವರ ಬಗ್ಗೆ ಕೆಲ್ಲರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

Story first published: Thursday, September 30, 2021, 13:19 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X