ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿದ ಒಲಿಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು

Olympic silver medalist Mirabai Chanu celebrates special birthday with family

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೊದಲ ದಿನ ಬೆಳ್ಳಿಯ ಪದಕ ಗೆದ್ದು ಭಾರತದ ಪರವಾಗಿ ಪದಕ ಬೇಟೆಯಾಡಿದ್ದ ಮೀರಾಬಾಯಿ ಚಾನು ಭಾನುವಾರ ತಮ್ಮ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿರುವುದರಿಂದಾಗಿ ಈ ಹುಟ್ಟುಹಬ್ಬ ಮತ್ತಷ್ಟು ವಿಶೇಷವಾಗಿದೆ ಎಂದು ಮೀರಾಬಾಯಿ ಚಾನು ಹೇಳಿಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅವರು ಸುದೀರ್ಘ ಕಾಲದ ಬಳಿಕ ಕುಟುಂಬದ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. "ಸುದೀರ್ಘ ಕಾಲದ ಬಳಿಕ ಕುಟುಂಬದ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಹರ್ಷವಾಗುತ್ತದೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ನಾನು ಬೆಳ್ಳಿ ಪದಕವನ್ನು ಗೆದ್ದಿರುವುದಕ್ಕೆ ಈ ಹುಟ್ಟುಹಬ್ಬ ಮತ್ತಷ್ಟು ವಿಶೇಷವಾಗಿದೆ. ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಮೀರಾಬಾತಿ ಚಾನು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿದ್ದರು. ಈ ಮೂಲಕ ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆಯನ್ನು ತೆರೆದಿತ್ತು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಮೀರಾಬಾಯಿ ಚಾನು ಕಳೆದ ವಾರ ಟೋಕಿಯೋದಿಂದ ತವರಿಗೆ ಮರಳಿದ್ದರು. ಈ ಸಂದರ್ಭದಲ್ಲಿ ಅದ್ಭುತವಾದ ಸ್ವಾಗತ ಅವರಿಗೆ ತವರಿನಲ್ಲಿ ಕಾದಿತ್ತು. ತವರು ರಾಜ್ಯವಾದ ಮಣಿಪುರದಲ್ಲಿ ಮೀರಾಭಾಯಿ ಚಾನು ಅವರಿಗೆ ಸಾಕಷ್ಟು ಅದ್ಭುತವಾದ ಸ್ವಾಗತವನ್ನು ನೀಡುವ ಮೂಲಕ ಬರಮಾಡಿಕೊಳ್ಳಲಾಗಿತ್ತು.

2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು ಚಾನು. 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿಯೇ ಮೀರಾಬಾಯಿ ಪದಕ ಗೆಲ್ಲುವ ಅಥ್ಲೀಟ್‌ಗಳಲ್ಲಿ ಗುರುತಿಸಿಕೊಂಡಿದ್ದರು.

ವೈಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಗೆದ್ದ ಪದಕ 2000ನೇ ಇಸವಿಯ ಬಳಿಕ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಪದಕವಾಗಿದೆ. ಸಿಡ್ನಿಯಲ್ಲಿ ನಡೆದ ಅಂದಿನ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ನಾಲ್ಕು ಒಲಿಂಪಿಕ್ಸ್‌ನಲ್ಲಿಯೂ ಭಾರತದ ವೈಟ್‌ಲಿಫ್ಟರ್‌ಗಳಿಂದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗ ಆ ಕೊರತೆಯನ್ನು ಮೀರಾಬಾಯಿ ಚಾನು ನೀಗಿಸಿದ್ದಾರೆ.

ನೀರಜ್ ಚೋಪ್ರಾ ಮತ್ತು ಅದಿತಿ ಅಶೋಕ್ ಗೆ KSRTC ಇಂದ ಬಂಪರ್ ಗಿಫ್ಟ್ | Oneindia Kannada

ಇನ್ನು ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. 7 ಪದಕವನ್ನು ಗೆಲ್ಲುವ ಮೂಲಕ ಭಾರತ ಈವರೆಗಿನ ಅತ್ಯುತ್ತಮ ಸಾಧನೆ ಮಾಡಿದೆ. ಪದಕದ ನಿರೀಕ್ಷೆಯನ್ನು ಮಾಡಿದ್ದ ಶೂಟಿಂಗ್ ಹಾಗೂ ಬಾಕ್ಸಿಂಗ್‌ನಂತಾ ಕ್ರೀಡೆಗಳಲ್ಲಿ ಭಾರತ ಈ ಬಾರಿ ನಿರಾಸೆಯನ್ನು ಅನುಭವಿಸಿದೆ. ಆದರೆ ಹಾಕಿ ಕ್ರೀಡೆಯಲ್ಲಿ ಭಾರತ ತಂಡದ ಪ್ರದರ್ಶನ ಸಾಕಷ್ಟು ಭರವಸೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಒಲಿಂಪಿಕ್ಸ್ ಕ್ರೀಡಾಕೂಟ ಭಾರತದ ಹಾಕಿಯ ಪುನರುಜ್ಜೀವನಕ್ಕೆ ನಾಂದಿ ಹಾಡಲಿದೆ ಎಂದೇ ವಿಶ್ಲೇಷಣೆಗಳು ನಡೆಯುತ್ತಿದೆ. ಭಾರತ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಇದೇ ಮೊದಲ ಬಾರಿಗೆ ಸೆಮಿಫೈನಲ್ ಹಂತಕ್ಕೆ ಜೊತೆಯಾಗಿ ಕಾಲಿಟ್ಟಿದ್ದವು. ಇದರಲ್ಲಿ ಪುರುಷರ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಗಾಲ್ಫ್‌ನಲ್ಲಿ ಆದಿತಿ ಆಶೋಕ್ ನೀಡಿದ ಪ್ರದರ್ಶನ ಹಾಗೂ ರೋವಿಂಗ್ ಹಾಗೂ ರೇಸ್‌ವಾಕಿಂಗ್ ಪ್ರದರ್ಶನಗಳು ಕೂಡ ಗಮನಾರ್ಹವಾಗಿದ್ದವು.

Story first published: Monday, August 9, 2021, 0:08 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X