ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಈಕ್ವೆಸ್ಟ್ರಿಯನ್‌ನಲ್ಲಿ 23ನೇ ಸ್ಥಾನ ಪಡೆದ ಬೆಂಗಳೂರಿನ ಫವಾದ್ ಮಿರ್ಜಾ

 Olympics: Equestrian: Indias Fouaad Mirza and Seigneur Medicott finish 23rd in their maiden Games

ಟೋಕಿಯೋ, ಆಗಸ್ಟ್ 2: ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಈಕ್ವೆಸ್ಟ್ರಿಯನ್ ಕ್ರೀಡಾಪಟು ಫವಾದ್ ಮಿರ್ಜಾ ಹಾಗೂ ಅವರ ಕುದುರೆ ಸೆನಿಯಾರ್ ಮೆಡಿಕಾಟ್ ಫೈನಲ್‌ನಲ್ಲಿ 23ನೇ ಸ್ಥಾನವನ್ನು ಪಡೆದು ಸ್ಪರ್ಧೆಯನ್ನು ಅಂತ್ಯಗೊಳಿಸಿದ್ದಾರೆ. ಸೋಮವಾರ ಈಕ್ವೆಸ್ಟ್ರಿಯನ್ ಸ್ಪರ್ಧೆಯ ಅಂತಿಮ ಸುತ್ತು ಶೋ ಜಂಪಿಂಗ್ ಸ್ಪರ್ಧೆ ಮುಕ್ತಾಯವಾದಾಗ ಭಾರತದ ಸ್ಪರ್ಧಿ 23ನೇ ಸ್ಥಾನವನ್ನು ಸಂಪಾದಿಸಿದ್ದಾರೆ.

ಇದಕ್ಕೂ ಮುನ್ನ ಜಂಪಿಂಗ್‌ನ ಪ್ರಥಮ ಸುತ್ತಿನಲ್ಲಿ 8 ಪೆನಾಲ್ಟಿ ಪಡೆಯುವ ಮೂಲಕ ಅಗ್ರ 25ರಲ್ಲಿ ಸ್ಥಾನವನ್ನು ಸಂಪಾದಿಸಿ ಫೈನಲ್‌ಗೆ ಪ್ರವೇಶ ಪಡೆದರು. ಫೈನಲ್‌ ಹಂತದಲ್ಲಿ ಅರ್ಹತಾ ಸುತ್ತಿನಲ್ಲಿನ ಪೆನಾಲ್ಟಿ ಅಂಕಗಳನ್ನು ಕೂಡ ಪರಿಗಣಿಸಲಾಗುತ್ತದೆ. ಫವಾದ್ ಮಿರ್ಜಾ ಮೂರು ಇವೆಂಟಿಂಗ್ ಹಂತದಲ್ಲಿ 47.20 ಅಂಕಗಳನ್ನು ಪಡೆದುಕೊಂಡಿದ್ದರು. ಹೀಗಾಗಿ ಪದಕ ಗೆಲ್ಲುವ ಅವಕಾಶಗಳು ಇರಲಿಲ್ಲ.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಭಾರತದ ಸವಾರ ಫವಾದ್ ಮಿರ್ಜಾ ಹಾಗೂ ಅವರ ಕುದುರೆ ಸೆನಿಯಾರ್ ಮೆಡಿಕಾಟ್ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಒಟ್ಟಾರೆಯಾಗಿ ನಿಜಕ್ಕೂ ಅದ್ಭುತವಾದ ಪ್ರದರ್ಶನವಾಗಿತ್ತು. ಈ ಜೋಡಿ 2018ರಲ್ಲಿ ಜಕಾರ್ತಾದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕವನ್ನು ಗೆದ್ದಿತ್ತು.

ಮೂರು ಹಂತಗಳಲ್ಲಿ ನಡೆಯುವ ಸ್ಪರ್ಧೆ: ಈಕ್ವೆಸ್ಟ್ರಿಯನ್‌ ಸ್ಪರ್ಧೆ ಮೂರು ಹಂತಗಳಲ್ಲಿ ನಡೆಯುತ್ತದೆ. ಇದರಲ್ಲಿ ಡ್ರೆಸ್ಸೇಜ್ ಎಂಬುದು ಈಕ್ವೆಸ್ಟ್ರಿಯನ್ ವಿಭಾಗದ ಮೊದಲ ಹಂತವಾಗಿರುತ್ತದೆ. ಉಳಿದ ಎರಡು ಹಂತಗಳೆಂದರೆ ಕ್ರಾಸ್ ಕಂಟ್ರಿ ಹಾಗೂ ಶೋ ಜಂಪಿಂಗ್. ಈ ಮೂರು ಹಂತಗಳಲ್ಲಿನ ಪೆನಾಲ್ಟಿಗಳ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಎರಡು ದಶಕಗಳ ನಂತರ ಸ್ಪರ್ಧೆ: ಇನ್ನು ಫಾವದ್ ಮಿರ್ಜಾ ಎರಡು ದಶಕಗಳ ನಂತರ ಭಾರತವನ್ನು ಈಕ್ವೆಸ್ಟ್ರಿಯನ್ ವಿಭಾಗದಲ್ಲಿ ಪ್ರತಿನಿಧಿಸಿರುವ ಮೊದಲ ಸವಾರ ಎನಿಸಿದ್ದಾರೆ. ಒಟ್ಟಾರೆಯಾಗಿ ಭಾರತದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕೇವಲ ಮೂರನೇ ಸ್ಪರ್ಧಿಯಾಗಿದ್ದಾರೆ ಫವಾದ್ ಮಿರ್ಜಾ. 2000ನೇ ಇಸವಿಯಲ್ಲಿ ಇಮ್ತಿಯಾಜ್ ಅನೀಸ್ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾಗಿಯಾದ ಬಳಿಕ ಭಾರತದ ಪರವಾಗಿ ಯಾರೂ ಕೂಡ ಈ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದಿರಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಫವಾದ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದರಾದರೂ ಪ್ರಮುಖ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು.

ಅರ್ಜುನ ಪ್ರಶಸ್ತಿ ವಿಜೇತ ಫಾವದ್ ಮಿರ್ಜಾ: ಜರ್ಮನಿಯ ಬೆಟಿನಾ ಹಾಯ್ ಎಂಬವರಲ್ಲಿ ಕಠಿಣ ತರಬೇತಿಯನ್ನು ಪಡೆದಿರುವ ಬೆಂಗಳೂರು ಮೂಲದ ಫವಾದ್ ಇಟೆಲಿ ಜರ್ಮನಿ ಹಾಗೂ ಹಾಲೆಂಡ್‌ನಲ್ಲಿ ನಡೆದ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಮಿಂಚಿದ್ದಾರೆ. ಕ್ರೀಡಾಕ್ಷೇತ್ರದಲ್ಲಿನ ಸಾಧನೆಗೆ ಫವಾದ್ ಮಿರ್ಜಾ ಈಗಾಗಲೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಫವಾದ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಆದರೆ ಭಾರತೀಯ ಕ್ರೀಡಾಪಟುವಿನ ಈ ಸಾಧನೆ ಪ್ರಶಂಸನೀಯ.

ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿರುವ ಜೋಡಿ: ಇನ್ನು ಈ ಸ್ಪರ್ಧೆಯಲ್ಲಿ ಫವಾದ್ ಮಿರ್ಜಾ 'ಸೆನಿಯಾರ್ ಮೆಡಿಕಾಟ್' ಕುದುರೆಯೊಂದಿಗೆ ಕಣಕ್ಕಿಳಿದಿದ್ದಾರೆ. ಈ ಕುದುರೆಯೊಂದಿಗೆ ಫವಾದ್ 2018ರ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಫವಾದ್ ಮಿರ್ಜಾ ಮೊದಲಿಗೆ ಇನ್ನೊಂದು ಕುದುರೆ ಡಜಾರ-4 ಜೊತೆಗೆ ಭಾಗವಹಿಸುವುದಾಗಿ ನಿರ್ಧರಿಸಿದ್ದರು. ಆದರೆ ಬಳಿಕ ನಿರ್ಧಾರವನ್ನು ಬದಲಾಯಿಸಿ 'ಸೆನಿಯಾರ್ ಮೆಡಿಕಾಟ್' ಕುದುರೆಯೊಂದಿಗೆ ಕಣಕ್ಕಿಳಿದಿದ್ದರು.

ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗೆಲ್ಲಲು ಸಫಲವಾಗಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ ಬಳಿಕ ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಸೋಮವಾರ ಭಾರತದ ಮಹಿಳಾ ಹಾಕಿ ತಂಡ ದೊಡ್ಡ ಭರವಸೆ ಮೂಡಿಸಿದೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

Story first published: Monday, August 2, 2021, 22:57 [IST]
Other articles published on Aug 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X